Site icon TUNGATARANGA

ದೇಶವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ| ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ ಉಪನ್ಯಾಸದಲ್ಲಿ : ಸೂಲಿಬೆಲೆ ಚಕ್ರವರ್ತಿ

ಶಿವಮೊಗ್ಗ: ನನ್ನನ್ನು ತಡೆಯುವವರ ಮೇಲೆ ಸಿಟ್ಟಿಲ್ಲ. ಅವರು ನಮ್ಮ ಸ್ನೇಹಿತರೆ. ನೀರನ್ನು ತಡೆದಷ್ಟು ಶಕ್ತಿ ಉತ್ಪಾದನೆ ಹೆಚ್ಚಾಗುತ್ತದೆ. ಆ ರೀತಿಯ ಶಕ್ತಿ ನನ್ನಲ್ಲಿ ಹೆಚ್ಚಾಗಲಿದೆ. ಈ ರೀತಿ ತಡೆ ಹಾಕುವ ಅನುಭವ ನನಗೆ ಇದು ಹೊಸದಲ್ಲ ಎಂದು ಸೂಲಿಬೆಲೆ ಹೇಳಿದರು.


ಅವರು ನಮೋ ಬ್ರಿಗೇಡ್ ೨.೦, ಅಜೇಯ ಸಂಸ್ಕೃತಿ ಬಳಗ ಇವರ ವತಿಯಿಂದ ಕರ್ನಾಟಕ ಸಂಘದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ ಉಪನ್ಯಾಸ ಮಾಲಿಕೆಯ ಸೋಮವಾರ ಮೊದಲ ದಿನ ಉಪನ್ಯಾಸದಲ್ಲಿ ಮಾತನಾಡಿದರು.
ಮೋದಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ದೇಶವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದು,

ಮುಂದಿನ ದಿನಗಳಲ್ಲಿ ಇಂತಹ ಶಕ್ತಿಗಳನ್ನು ಇನ್ನಷ್ಟು ಮಟ್ಟ ಹಾಕಲು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.


ಮೋದಿ ಪ್ರಧಾನಿಯಾದ ಬಳಿಕ ಇವ್ಯಾಂಜಲಿಸ್ಟ್‌ಗಳಿಗೆ ನಿಧಿ ಸಿಕ್ಕುತ್ತಿಲ್ಲ. ಮಾವೋವಾದಿಗಳಿಗೆ ಮಟ್ಟ ಹಾಕಲಾಗಿದೆ. ನಕಲಿ ನೋಟುಗಳಿಗೆ ತಡೆ ಹಾಕಿದ್ದರಿಂದಾಗಿ ಐಎಸ್‌ಐ ಚಟುವಟಿಕೆ ನಡೆಸುವವರಿಗೆ ಹಣ ಸಿಕ್ಕುತ್ತಿಲ್ಲ. ಮತಾಂತರ ನಡೆಸುವವರು, ಬೇಕಾದಂತೆ ಇತಿಹಾಸ ತಿರುಚವವರಿಗೆ ಬುದ್ಧಿ ಕಲಿಸಲಾಗಿದೆ ಎಂದರು.


ಯಾರನ್ನು ಎಲ್ಲಿ ಮಟ್ಟ ಹಾಕಬೇಕೆಂಬುದು ಮೋದಿಯವರಿಗೆ ಚನ್ನಾಗಿ ಗೊತ್ತಿದೆ. ಭಾರತ ವಿರೋಧಿ ಹಾಗೂ ಹಿಂದೂ ವಿರೋಧಿ ಕೃತ್ಯಗಳಿಗೆ ಇಂಬು ಸಿಕ್ಕುತ್ತಿರುವುದೇ ಆಕ್ಸ್‌ಫರ್ಡ್ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯಗಳಿಂದ. ಇದರ ಪರಿಣಾಮವಾಗಿ ಭಾರತದ ಕೆಲವು ವಿಶ್ವವಿದ್ಯಾಲಯಗಳಲ್ಲಿಯೂ ನಕ್ಸಲ್ ಚಿಂತನೆಗಳಿಗೆ ಅವಕಾಶ ಸಿಕ್ಕಿದೆ ಎಂದು ಹರಿಹಾಯ್ದರು.
ಭಾರತ ಒಡೆಯುವ, ಇಲ್ಲಿನ ಧರ್ಮ ಸಂಸ್ಕೃತಿಯನ್ನು ನಾಶ ಮಾಡುವ ಕೆಲಸ ಇಂದು ಮಾತ್ರ ನಡೆಯುತ್ತಿಲ್ಲ. ಇದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಬ್ರಿಟೀಷರು ಭಾರತಕ್ಕೆ ಬಂದ ಮೇಲೆ ಇದು ಹೆಚ್ಚಾಗಿದೆ ಎಂದರು.


ಕ್ರಿಶ್ಚಿಯನ್ನರು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲಾ ಜಾತಿ, ಧರ್ಮದ ಹೆಸರಿನಲ್ಲಿ ಇಡೀ ಸಮಾಜವನ್ನು ಒಡೆದು ಛಿದ್ರ ಛಿದ್ರ ಮಾಡಿದ್ದಾರೆ. ರುವಾಂಡದಲ್ಲಿ ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಜಗಳ ಹಚ್ಚಿ ಇಬ್ಬಾಗ ಮಾಡಿ ಚರ್ಚ್ ಮೂಲಕವೇ ಆಡಳಿತ ನಡೆಸಲಾಗುತ್ತಿದೆ. ರುವಾಂಡದಲ್ಲಿ ಅಂದು ಏನಾಗಿತ್ತೋ ಅದನ್ನೇ ಇಂದು ಮಣಿಪುರದಲ್ಲಿ ಮಾಡಲಾಗುತ್ತಿದೆ. ಜಾಗತಿಕ ಸರ್ಕಾರಗಳ ಮೂಲಕ ಹಣ ಪಡೆದು ಬೇಕಾಬಿಟ್ಟಿಯಾಗಿ ವರ್ತಿಸಲಾಗುತ್ತಿದೆ. ಮಣಿಪುರದಲ್ಲಿ ದೌರ್ಜನ್ಯ ಸಾಹಿತ್ಯ ಸೃಷ್ಟಿ ಮಾಡಿ ಭಾರತಕ್ಕೆ ಕೆಟ್ಟ ಹೆಸರು ತಂದು ಐಕ್ಯತೆಗೆ ಧಕ್ಕೆಯಾಗಿದೆ ಎಂದು ಬಿಂಬಿಸಲಾಗುತ್ತಿದೆ ಎಂದರು.


ಈಗ ಮಾವೋವಾದಿಗಳೆಂಬ ಬುದ್ದಿ ಜೀವಿಗಳು ರಾಜ್ಯದಲ್ಲಿ ಎದ್ದು ಕುಳಿತಿzರೆ. ಸಿಎಂ ಸುತ್ತಮುತ್ತ ಅವರೇ ಇzರೆ. ಟಿಪ್ಪು ಜಯಂತಿ ಆಚರಣೆ ಮಾಡಬೇಕೆಂದು ಮುಸಲ್ಮಾನರು ಹೇಳಿಲ್ಲ. ಮಾಡಿದ್ದು ಹಿಂದುಗಳೇ. ಇದರ ಉzಶ ಹಿಂದುಗಳನ್ನು ಒಡೆಯುವುದೇ ಆಗಿದೆ ಎಂದರು.
ವೇದಿಕೆಯಲ್ಲಿ ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ನಾಗೇಶ್, ಸಂಚಾಲಕ ರಾಜೇಶ್ ಶೆಣೈ, ಜಿನರಾಜ್ ಜೈನ್ ಇದ್ದರು.

ವಾಟ್ಸಾಪ್ ಸ್ಟೇಟಸ್ ವಿಚಾರವಾಗಿ ಸೂಲಿಬೆಲೆ ವಿರುದ್ಧ ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತೆ ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಕರ್ನಾಟಕ ಸಂಘದ ಬಳಿ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

Exit mobile version