Site icon TUNGATARANGA

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ರ ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವವ ರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬುಧವಾರ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ದುಷ್ಕರ್ಮಿಗಳು ಬಾಲಕಿಯನ್ನು

ಜೋಗ ಜಲಪಾತ ಮೊದಲಾದ ಪ್ರದೇಶಕ್ಕೆ ಕರೆದೊಯ್ದು ಮತ್ತು ಬರುವ ಪದಾರ್ಥ ನೀಡಿ ದೌರ್ಜನ್ಯವೆಸಗಿದ್ದಾರೆ.


ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದರೂ ಈವರೆಗೂ ಅವರನ್ನು ಬಂಧಿಸಲಾಗಿಲ್ಲ. ತಲೆಮರೆಸಿ ಕೊಂಡಿರುವ ಆರೋಪಿಗಳನ್ನು ಪೊಲೀಸರು ಕೂಡಲೇ ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯ ನಡೆಸಿರುವವರು ಬಾಲಕಿ ಕುಟುಂಬದ ವರಿಗೆ ಬೆದರಿಕೆ ಹಾಕಿದ್ದರು ಎಂಬು ದೂರುಗಳಿವೆ.

ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ೪೮ ಗಂಟೆಯೊಳಗೆ ಆರೋಪಿಗಳನ್ನು

ಬಂಧಿಸದಿದ್ದರೆ ಸಾಗರ ಬಂದ್‌ಗೆ ಕರೆ ನೀಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸುಧೀಂದ್ರ ಡಿ.ಎಸ್, ರಾಘವೇಂದ್ರ ಕಾಮತ್, ಶ್ರೀಧರ, ಆದಿತ್ಯ, ಪರಶುರಾಮ, ಆಟೊ ಗಣೇಶ್, ಕೋಮಲ್ ರಾಘವೇಂದ್ರ, ನಂದೀಶ ಸೂರಗುಪ್ಪೆ ಇತರರಿದ್ದರು.

Exit mobile version