Site icon TUNGATARANGA

ಇಂದಿನ ಶಿವಮೊಗ್ಗ ಕ್ರೈಂ ನೋಟ!

ಮೂವರು ಕಳ್ಳರ ಬಂಧನ: 11 ದ್ವಿ ಚಕ್ರ ವಾಹನಗಳ ವಶ
ಶಿವಮೊಗ್ಗ, ನ.10:
ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ನವೆಂಬರ್ 11ರಂದು ತುಂಗಾನಗರ ಪೊಲೀಸರು ಮೂವರು ದ್ವಿ ಚಕ್ರ ವಾಹನ ಕಳ್ಳರನ್ನು ಬಂಧಿಸಿ, 11 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಮಾಡಿ, ಆರೋಪಿತರಿಂದ ಒಟ್ಟು 3.44 ಲಕ್ಷ ರೂ. ಮೌಲ್ಯದ 11 ದ್ವಿ ಚಕ್ರ ವಾಹನ ವಶಪಡಿಸಿಕೊಂಡಿರುತ್ತಾರೆ.
ಅಣ್ಣ
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಆರೋಪಿಗಳು ಹಾಗೂ ಕಳ್ಳತನವಾದ ದ್ವಿ ಚಕ್ರ ವಾಹನಗಳ ಪತ್ತೆ ಬಗ್ಗೆ ಉಮೇಶ್ ಈಶ್ವರ್ ನಾಯಕ್, ಡಿವೈಎಸ್.ಪಿ ಶಿವಮೊಗ್ಗ ಉಪ ವಿಭಾಗ ರವರ ಮಾರ್ಗ ದರ್ಶನದಲ್ಲಿ ಸಂಜೀವ್ ಕುಮಾರ್, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ವೃತ್ತ ನೇತೃತ್ವದಲ್ಲಿ ತಿರುಮಲೇಶ್, ಪಿಎಸ್ಐ,‌ ತುಂಗಾನಗರ ಪೊಲೀಸ್ ಠಾಣೆ, ನಾರಾಯಣ್ ಜಿ ಆರ್, ಎಎಸ್ಐ, ತುಂಗಾನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಸಯ್ಯದ್ ಇಮ್ರಾನ್ ಸಿಹೆಚ್.ಸಿ,
ಶ್ರೀ ರಾಜು ಕೆ ಆರ್ ಸಿಪಿಸಿ, ಗುರುನಾಯ್ಕ್ ಆರ್, ಸಿಪಿಸಿ ಮತ್ತು ಲಂಕೇಶ್ ಕುಮಾರ್, ಸಿಪಿಸಿ ರವರುಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, ತಬಾರಕ್ @ ತಪ್ಪಣ್ಣ 19 ವರ್ಷ ವಾಸ ಕೆಳಗಿನ ತುಂಗಾನಗರ ಶಿವಮೊಗ್ಗ, ಸೈಯದ್ ಸುಭಾನ್ @ ಸುಭಾನ್ 20 ವರ್ಷ ವಾಸ ರಾಗಿಗುಡ್ಡ ಶಿವಮೊಗ್ಗ, ಜುನೈದ್ @ ಜಿನ್ನು 19 ವರ್ಷ ವಾಸ ಟಿಪ್ಪುನಗರ ಅವರನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತರಿಂದ ತುಂಗಾನಗರ ಪೊಲೀಸ್‌ ಠಾಣೆಯ 02 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು,
ದೊಡ್ಡಪೇಟೆ ಪೊಲೀಸ್‌ ಠಾಣೆಯ 04 ದ್ವಿ ಚಕ್ರ ವಾಹನ* ಕಳ್ಳತನ ಪ್ರಕರಣಗಳು, ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯ 01 ದ್ವಿ ಚಕ್ರ ವಾಹನ* ಕಳ್ಳತನ ಪ್ರಕರಣ,ಶಿವಮೊಗ್ಗ ವಿನೋಬನಗರ ಪೊಲೀಸ್‌ ಠಾಣೆಯ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ,
ಶಿವಮೊಗ್ಗ ಕೋಟೆ ಪೊಲೀಸ್‌ ಠಾಣೆಯ 01 ದ್ವಿ ಚಕ್ರ ವಾಹನ* ಕಳ್ಳತನ ಪ್ರಕರಣ,
ಶಿವಮೊಗ್ಗ ಕುಂಸಿ ಪೊಲೀಸ್‌ ಠಾಣೆಯ 01 ದ್ವಿ ಚಕ್ರ ವಾಹನ* ಕಳ್ಳತನ ಪ್ರಕರಣ,
ಭದ್ರಾವತಿ ಹಳೆನಗರ ಪೊಲೀಸ್‌ ಠಾಣೆಯ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿದಂತೆ
ಒಟ್ಟು 11 ದ್ವಿ ಚಕ್ರ ವಾಹನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸ್.ಪಿ. ಕೆ.ಎಂ ಶಾಂತರಾಜು ತಿಳಿಸಿದ್ದಾರೆ.

ಅನುಪಿನಕಟ್ಟೆಯಲ್ಲಿ ಗಾಂಜಾ ವಶ: ನಾಲ್ವರ ಬಂಧನ
ಶಿವಮೊಗ್ಗ,ನ.10:
ತುಂಗಾ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣಗಳ ಮೇಲಿನ ದಾಳಿ ಮುಂದುವರೆದಿದೆ. ನಿನ್ನೆ ಬರೊಬ್ಬರಿ 95 ಸಾವಿರ ರೂ. ಮೌಲ್ಯದ 1.300 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ನಾಲ್ವರನ್ನ ಬಂಧಿಸಲಾಗಿದೆ.
ಅನುಪಿನಕಟ್ಟೆಯಲ್ಲಿ ಗಾಂಜಾವನ್ನ ಬೆಳೆದಿದ್ದ 1 ಕೆ.ಜಿ.300 ಗ್ರಾಂ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದ್ದು ನಾಲ್ವರನ್ನ ಬಂಧಿಸಲಾಗಿದೆ. ಟಿಪ್ಪುನಗರದ ಖುರ್ರಂ, ಮಹಮ್ಮದ್ ಇಬ್ರಾಹಿಂ, ಜಿಕ್ರುಲ್ಲಾ, ಮೊಹಮ್ಮದ್ ರಿಯಾಜ್ ಇವರನ್ನ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಲಾಗಿದ್ದ ಕೆ.ಎ.02 ಎಂ.ಸಿ.9636 ಕ್ರಮಸಂಖ್ಯೆಯ ಕಾರನ್ನ ಹಾಗೂ ಇವರ ಬಳಿಯಿದ್ದ 2300 ರೂ.ಗಳನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ದಾಳಿಯಲ್ಲಿ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ಸಿಪಿಐ ಸಂಜೀವ್ ಕುಮಾರ್, ಪಿಎಸ್ಐ ತಿರುಮಲೇಶ್ ಹಾಗೂಸಿಬ್ಬಂದಿಗಳನ್ನೊಳಗೊಂಡ ತಂಡ ಖಡಕ್ ಕಾರ್ಯಾಚರಣೆ ನಡೆಸಲಾಗಿದೆ.

ಐಪಿಎಲ್ ಬೆಟ್ಟಿಂಗ್: ಐವರ ಬಂಧನ
ಶಿವಮೊಗ್ಗ, ನ.10:
ಶಿವಮೊಗ್ಗದಲ್ಲಿ ಐಪಿಎಲ್ ಬೆಟ್ಟಿಂಗ್ ಪ್ರಕರಣಗಳು ಬೆಳಕಿಗೆ ಬಂದಿದೆ. ನಿನ್ನೆ ಐಪಿಎಲ್ ನ ಫೈನಲ್ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ನಡೆದಿದೆ ಎಂದು ತಿಳಿದುಬಂದಿದೆ.
ನಗರದ ಗಾಂಧಿಬಜಾರ್ ನ ತಿರುಪಳಯ್ಯನ ಕೇರಿಯ ದಾಮೋದರ್ ಕಾಂಪ್ಲೆಕ್ಸ್ ನ ಚಿನ್ನಬೆಳ್ಳಿ ಪಾಲಿಷ್ ಅಂಗಡಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಗೆ ಹಣ ಕಟ್ಟಿಸಿಕೊಂಡು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ 5 ಜನರನ್ನ ಕೋಟೆ ಪೊಲೀಸರು ದಸ್ತಗಿರಿ ಮಾಡಿ 39 ಸಾವಿರ ಹಣವನ್ನ ವಶಪಡಿಸಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ: ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ
ಗಂಡ ಹಾಗೂ ಅತ್ತೆಯ ವರದಕ್ಷಿಣೆ ಕಿರುಕುಳ ತಾಳಲಾರದೇ ನವ ವಿವಾಹಿತೆಯೋರ್ವಳು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ  ಬಾರಂದೂರಿನಲ್ಲಿ ನಡೆದಿದೆ.
ಕಳೆದಮೂರು ತಿಂಗಳ ಹಿಂದೆಯಷ್ಟೇ ಶಿವಮೊಗ್ಗದ ದುರ್ಗಿಗುಡಿ ನಿವಾಸಿ ಪೂಜಾ ಹಾಗೂ ಬಾರಂದೂರಿನ ಬಸವರಾಜ್ ಇಬ್ಬರು ವಿವಾಹವಾಗಿದ್ದರು.‌ ಪೂಜಾಳ ಹೆತ್ತವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರೂ ಗಂಡನ‌ ಮನೆಯಲ್ಲಿ ಮಗಳು ಚನ್ನಾಗಿರಲಿ ಎಂಬ ಕಾರಣದಿಂದ ಚಿನ್ನ ಹಾಗೂ ಬೆಳ್ಳಿ ಆಭರಣವನ್ನು ವರದಕ್ಷಿಣೆ ನೀಡಿ ವಿವಾಹ‌ ಮಾಡಿಕೊಟ್ಟಿದ್ದರು. ಆದರೆ ವಿವಾಹವಾದ ಒಂದೇ ವಾರಕ್ಕೆ ಗಂಡನ ಮನೆಯವರು ಪೂಜಾಳಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಪೂಜಾ ತಮ್ಮ ಅಳಲು ತೋಡಿಕೊಂಡಿದ್ದಾರೆ.‌ 
ಈಕೆಯ ಗಂಡನ ತಾಯಿ ಮೈಗೆಲ್ಲಾ ಬೆಂಕಿಯಿಂದ ಬರೆ ಹಾಕಿದ್ದಾರೆ ಎಂದು ಸಹ ಆರೋಪಿಸಿರುವ ಪೂಜಾ.
ನನ್ನ ಮಗನಿಗೆ ನೀನು ಬೇಡ 1 ಲಕ್ಷ ಪರಿಹಾರ ಕೊಡುತ್ತೇವೆ ವಿಚ್ಚೇದನ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಗಂಡ ಬಸವರಾಜ್ ಸಹ ಬೇರೊಬ್ಬಳ‌ ಮದುವೆ ಆಗಲು ಸಿದ್ದತೆ ನಡೆಸುತ್ತಿದ್ದಾನೆ.  ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ನಾನು ಕೊಟ್ಟ ದೂರನ್ನು ಸ್ವೀಕರಿಸದೇ ನನಗೆ ಬೈಯ್ದು ಕಳುಹಿಸುತ್ತಾರೆ ಎಂದು ಆರೋಪಿಸಿದ್ದಾರೆ. 
ನಾನು ಈತನನ್ನು ನಂಬಿ‌ ನನ್ನ ಜೀವನ ಹಾಳು ಮಾಡಿಕೊಂಡಿದ್ದೇನೆ. ನಾನು ಏಕೆ ವಿಚ್ಛೇದನ ನೀಡಲಿ ನಾನು ಬದುಕಿದರೆ ಗಂಡನ ಜೊತೆಯೇ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮನವಿ‌ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ ಪೂಜಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ನನಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾಳೆ.

Exit mobile version