ಯೋಗದಿಂದ ನಮ್ಮ ಆರೋಗ್ಯ ಕಾಪಾಡುವ ಜೊತೆಗೆ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಂಡಾಗ ದಿನನಿತ್ಯದ ಕೆಲಸ-ಕಾರ್ಯಗಳನ್ನು ನಿರೀಕ್ಷೆಯಂತೆ ನಿರ್ವಹಿಸಲು, ಸದಾ ಲವ ಲವಿಕೆಯಿಂದಿರಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಭ್ಯಾಸವನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದು ಉತ್ತಮ, ಚೆಸ್ ಬುದ್ದಿವಂತಿಕೆಯ ಕ್ರೀಡೆ, ಪುರಾತನ ಕಾಲದಿಂದಲೂ ಪ್ರಚಲಿತವಿರುವ ಕ್ರೀಡೆ ಎಂದು ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾ. ಹ. ತಿಮ್ಮೇನಹಳ್ಳಿ ಹೇಳಿದರು.
ಅವರುಅವರು ಶಾಲಾ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಛೇರಿ ಶಿವಮೊಗ್ಗ ಹಾಗೂ ಇಕ್ಲಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರ್ ಎಂ ಎಲ್ ನಗರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅನುದಾನ ರಹಿತ ಪ್ರೌಢಶಾಲೆಗಳ ಎ ಮತ್ತು ಬಿ ವಲಯಗಳ ವಲಯ ಮಟ್ಟದ ಯೋಗ ಮತ್ತು ಚೆಸ್ ಪಂದಾವಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಚದುರಂಗ ಹಿಂದಿನ ಕಾಲದಿಂದಲೂ ರಾಜ ಮಹಾರಾಜರ ಕಾಲದಲ್ಲಿ ಪ್ರಸಿದ್ಧಿಯನ್ನು ಪಡೆದ ಕ್ರೀಡೆ.
ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಕ್ರೀಡಾಪಟುಗಳು ಯೋಗ ಮತ್ತು ಚೆಸ್ .ಸತತ ಅಭ್ಯಾಸದಿಂದ
ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಕ್ಲಾಸ್ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀ ಸೈಯದ್ ನೂರುಲ್ಲಾ ಹಕ್ ಮಾತನಾಡುತ್ತಾ, ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಆಗಮಿಸಿದ್ದ ಅಂತರಾಷ್ಟ್ರೀಯ ಚೆಸ್ ತೀರ್ಪುಗಾರರಾದ ಪ್ರಾಣೇಶ್ ಯಾದವ್ ಚೆಸ್ ಕ್ರೀಡೆಯ ನಿಯಮಗಳ ಬಗ್ಗೆ ತಿಳಿಸಿದರು. ರಾಜ್ಯಮಟ್ಟದ ತಿರುಪುಗಾರರಾದ ಶ್ರೀಮತಿ ಸುನಿತಾ ಯೋಗದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಸಂಘದ ಕಾರ್ಯದರ್ಶಿ ಕ ತೇಜಸ್ ಕುಮಾರ್, ರಘು ಎಲ್ ಎಸ್. ಸೋಮಶೇಖರ್ ಪ್ರಾಥಮಿಕ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು, ದೈಹಿತ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಅಲೋಲಿಕ ಮತ್ತು ರಾಕೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.