Site icon TUNGATARANGA

ಮೀಟರ್ ಬಳಸದೆ ಹೆಚ್ಚಿನ ದರ ವಸೂಲಿ ಮಾಡಿದ್ರೆ ಕ್ರಮ ಅಟೋ ಚಾಲಕರಿಗೆ ಖಡಕ್ ವಾರ್ನಿಂಗ್ ಕೊಟ್ರು: ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್

ಶಿವಮೊಗ್ಗ: ಆಟೋಗಳಲ್ಲಿ ಮೀಟರ್ ಅಳವಡಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.


ನಗರದಲ್ಲಿ ಸಾರ್ವಜನಿಕರಿಂದ ಅನೇಕ ದೂರು ಬಂದ ಹಿನ್ನೆಲೆಯಲ್ಲಿ ನಿನ್ನೆ ನಗರದ ವಿವಿಧೆಡೆ ಅವರೇ ಖುದ್ದಾಗಿ ಆಟೋಗಳನ್ನು ತಪಾಸಣೆ ನಡೆಸಿದರು. ಮೀಟರ್ ಬಳಸದೆ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ವಿಶೇಷವಾಗಿ ರೈಲ್ವೆ ನಿಲ್ದಾಣ iತ್ತು ಬಸ್ ನಿಲ್ದಾಣಗಳಲ್ಲಿ ಆಟೋ ಚಾಲಕರ ವರ್ತನೆ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು.

ಆಟೋದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡುವುದಲ್ಲದೆ ಹೆಚ್ಚುವರಿಯಾಗಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದರು ಎಂಬ ಆರೋಪವಿತ್ತು. ನಿನ್ನೆ ಖುದ್ದಾಗಿ ಎಸ್ಪಿಯವರು ಪರಿಶೀಲನೆ ನಡೆಸಿದ್ದಾರೆ.

ಆಟೋ ಚಾಲಕರಿಗೆ ಒಂದು ದಿನದ ಅವಧಿ ನೀಡಿದ್ದು, ಆಟೋ ಮೀಟರ್ ಅಳವಡಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.


ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸುರೇಶ್, ಸಂಚಾರಿ ವೃತ್ತ ನಿರೀಕ್ಷಕ ಸಂತೋಷ್‌ಕುಮಾರ್, ಪಶ್ಚಿಮಸಂಚಾರಿಪೊಲೀಸ್ ಠಾಣೆಯ ಪಿಎಸೈ ತಿರುಮಲೇಶ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Exit mobile version