Site icon TUNGATARANGA

2023-24 ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಅಯ್ಕೆ ಸ್ಪರ್ಧೆ| ಭಾಗವಹಿಸಲು ಇರಬೇಕಾದ ಅರ್ಹತೆಗಳೇನು ?


ಶಿವಮೊಗ್ಗ, ಆಗಸ್ಟ್ ೨೨,: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ೨೦೨೩-೨೪ ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ದಿ:೦೩/೦೯/೨೦೨೩ ರಂದು ಸೊರಬ ತಾಲೂಕು ಕ್ರೀಡಾಂಗಣ, ದಿ:೦೭/೦೯/೨೦೨೩ ರಂದು ಹೊಸನಗರ ತಾಲೂಕು ಕ್ರೀಡಾಂಗಣ, ದಿ:೧೦/೦೯/೨೦೨೩ ರಂದು ಭದ್ರಾವತಿ ವಿ.ಐ.ಎಸ್.ಎಲ್ ಕ್ರೀಡಾಂಗಣ ಮತ್ತು ಸಾಗರ ನೆಹರೂ ಮೈದಾನ, ದಿ:೧೬/೦೯/೨೦೨೩ ರಂದು ಶಿವಮೊಗ್ಗ ನೆಹರೂ ಕ್ರೀಡಾಂಗಣ, ದಿ:೨೪/೦೯/೨೦೨೩ ರಂದು ಶಿಕಾರಿಪುರ ತಾಲೂಕು ಕ್ರೀಡಾಂಗಣ, ದಿ:೩೦/೦೯/೨೦೨೩ ರಂದು ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ.


ಅಥ್ಲೇಟಿಕ್ಸ್, ವಾಲಿಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಸ್ಪರ್ಧೆಗಳನ್ನು ಮಾತ್ರ ಏರ್ಪಡಿಸಲಾಗಿದ್ದು, ಆಯಾ ತಾಲೂಕಿನ ಕ್ರೀಡಾಪಟುಗಳು ಆಯಾ ತಾಲೂಕಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.

ಭಾಗವಹಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಗುಂಪು ಸ್ಪರ್ಧೆಗಳನ್ನೇರ್ಪಡಿಸಲು ಕನಿ? ೪ ತಂಡಗಳು ಇರಬೇಕು, ಇಲ್ಲದಿದ್ದಲ್ಲಿ ಆಯ್ಕೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು. ಒಬ್ಬರಿಗೆ ಎರಡು ವೈಯುಕ್ತಿಕ ಹಾಗೂ ಒಂದು ಗುಂಪು ಸ್ಫರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.


ಆಸಕ್ತ ಕ್ರೀಡಾಪಟುಗಳು ಆಯಾ ದಿನಾಂಕಗಳಂದು ಆಯಾ ತಾಲೂಕಿನ ಕ್ರೀಡಾಂಗಣದಲ್ಲಿ ಬೆಳಗ್ಗೆ ೧೦.೦೦ ರೊಳಗಾಗಿ ಹಾಜರಿದ್ದು, ಸಂಬಂಧಪಟ್ಟವರಲ್ಲಿ ವರದಿ ಮಾಡಿಕೊಂಡು ಹೆಸರು ನೊಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version