Site icon TUNGATARANGA

ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟಿಸಿದ ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ

ಯಾವುದೇ ಸಹಕಾರ ಕ್ಷೇತ್ರ ರಾಜಕೀಯ ದಿಂದ ದೂರವಿರಬೇಕು ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ ಹೇಳಿದರು.


ಸಮೀಪದ ಅರಹತೊಳಲು ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿರು.


ಈ ಸಹಕಾರಿ ಸಂಘಕ್ಕೆ ಒಂದು ಸುಸಜ್ಜಿತ ಕಟ್ಟಡ ಇರಲಿಲ್ಲ. ಆದರೆ ನಬಾರ್ಡ್‌ನ ಸಹಕಾರದಿಂದ ಉತ್ತಮವಾದ ಗೋದಾಮು ಕಟ್ಟಡ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಆಡಳಿತ ಕಚೇರಿ, ಸ್ಟ್ರಾಂಗ್ ರೂಂ ನಿರ್ಮಿಸಿಕೊಂಡು ಬಂಗಾರ ಅಡಮಾನ ಸಾಲ, ಅಡಿಕೆ ಅಡಮಾನ ಸಾಲಗಳನ್ನು ನೀಡಬೇಕು. ಜೊತೆಗೆ ಹೆಚ್ಚಿನ ಪ್ರಮಾಣದ ಖಾಯಂ ಠೇವಣಿ ಇಡುವಂತೆ ರೈತರ ಮನವೊಲಿಸಬೇಕು. ಆಗ ಕೇಂದ್ರ ಬ್ಯಾಂಕ್ ನಿಂದ ಹಣದ ಸಹಾಯ ಪಡೆದು ರೈತರಿಗೆ ಹೆಚ್ಚಿನ ಸಾಲ ನೀಡಬಹುದು’ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಪ್ರಭಾರ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ ಹೇಳಿದರು.


’ಗ್ರಾಮದಲ್ಲಿ ಸಹಕಾರ ಸಂಘ ಆರಂಭವಾಗಿ ಆರು ವರ್ಷಗಳು ಕಳೆದಿವೆ. ಶುಭ ಸೂಚನೆ ಎಂಬಂತೆ ಮೊದಲ ಬಾರಿಗೆ ಸಂಘವು ? ೫.೭೧ ಲಕ್ಷ ಲಾಭ ಗಳಿಸಿದೆ. ? ೫.೮೭ ಕೋಟಿ ಸಾಲವನ್ನು ರೈತರಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಾಭ ಗಳಿಸಲು ಅಗತ್ಯವಿರುವ ಎಲ್ಲ ರೀತಿಯ ಕ್ರಮ ಗಳನ್ನು ಕೈಗೊಳ್ಳಲಾವುದು’ ಎಂದು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಹತೊಳಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಪಿ.ಚಂದ್ರಶೇಖರ್ ಹೇಳಿದರು.


ಸಂಸ್ಥಾಪಕ ಅಧ್ಯಕ್ಷ ಜಿ.ಎಸ್.ಮಲ್ಲಿಕಾ ರ್ಜುನ (ರಾಜೇಶ್) ಪಟೇಲ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ಶ್ರೀಧರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ವಾಸುದೇವ್, ನಬಾರ್ಡನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ಶರತ್ ಗೌಡ, ಹೊಳೆಹೊ ನ್ನೂರು ಡಿಸಿಸಿ ಬ್ಯಾಂಕ್‌ನ

ಎಂ.ಪಿ.ಸುರೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಟಿ.ಸಂಗನಾಥ್, ಸಂಘದ ಉಪಾಧ್ಯಕ್ಷ ಕೆ.ಯತೀಶ್ವರಾಚಾರ್, ನಿರ್ದೇಶಕರಾದ ಎಲ್.ಎಸ್.ರವಿಕುಮಾರ್, ಎ.ಆರ್.ಬಸ ವರಾಜಪ್ಪ, ಎ.ಎಂ.ಮಲ್ಲಿಕಾರ್ಜುನ್, ಜೆ.ಪಿ.ಶೇಖರಪ್ಪ, ನಾಗೇಂದ್ರಯ್ಯ, ಡಿ.ಎಚ್.ಫಾಲಾಕ್ಷಪ್ಪ ಇತರರಿದ್ದರು.

Exit mobile version