Site icon TUNGATARANGA

ಶಿವಮೊಗ್ಗ: ಹೊರವಲಯದಲ್ಲಿ ಪುಂಡಾಟ ನಡೆಸುತ್ತಿದ್ದವರಿಗೆ ತಕ್ಕ ಶಾಸ್ತಿ ಮಾಡಿದ ಪೊಲೀಸರು/ ಗಾಂಜಾ ಸೇವಿಸುತ್ತಿದ್ದ ಐವರ ಬಂಧನ- ಗಾಂಜಾ ಮಾರುತ್ತಿದ್ದವನ ಬಂಧನ


ಶಿವಮೊಗ್ಗ,ಆ.18:
ನಿನ್ನೆ ಸಂಜೆ ಶಿವಮೊಗ್ಗ ಹಾಗೂ ಭದ್ರಾವತಿ ಪೊಲೀಸರು ನಗರದ ಹೊರವಲಯದ ಖಾಲಿ ನಿವೇಶನಗಳಲ್ಲಿ ಪುಂಡಾಟ ಆಡುತ್ತಿದ್ದವರನ್ನು ಹಿಡಿದು ಬೆಂಡೆತ್ತಿದ್ದಾರೆ.


ಶಿವಮೊಗ್ಗ-ಎ, ಶಿವಮೊಗ್ಗ-ಬಿ ಮತ್ತು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು ಆಯಾ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿ ಸಾರ್ವಜನಿಕವಾಗಿ ಕಿರಿಕಿರಿ ಮಾಡುವ ಮತ್ತು ಅನುಮಾನಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 105 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಮತ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ 05 ಜನರ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಒಟ್ಟು 05 ಪ್ರಕರಣಗಳನ್ನು ದಾಖಲಿಸಲಾಗಿದೆ.

ಗಾಂಜಾ ಮಾರುತ್ತಿದ್ದವನ ಬಂಧನ


ನಿನ್ನೆ ಸಂಜೆ ಶಿವಮೊಗ್ಗ ನಗರದ ಸೂಳೆಬೈಲಿನ ಪುಟ್ಟಪ್ಪ ಕ್ಯಾಂಪ್ ಹತ್ತಿರ ಅಪರಿಚಿತ ವ್ಯಕ್ತಿಯೊಬ್ಬನು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪ್ರಭು ಡಿ.ಟಿ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್.ಬಿ ವಿಭಾಗ, ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ದೀಪಕ್, ಪಿಐ, ಸಿಇಎನ್ ಪೊಲೀಸ್ ಠಾಣೆರವರ ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸದ್ದಾಂ ಹುಸೇನ್ @ ಸಾಂಬಾ, 30 ವರ್ಷ, ಹೊಳಲೂರು, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಅಂದಾಜು ಮೌಲ್ಯ 20,000/- ರೂ ಗಳ 338 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನ ವಿರುಧ್ದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0086/23 ಕಲಂ 20(b) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಸದರಿ ಪೊಲೀಸ್ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Exit mobile version