Site icon TUNGATARANGA

ಮಲೆನಾಡಿನ ಉಳಿವಿಗೆ ಅಕೇಶಿಯಾ ವಿರೋಧಿ ಹೋರಾಟಕ್ಕೆ ದೇವನೂರು ಮಹಾದೇವರ ಬೆಂಬಲ

ಶಿವಮೊಗ್ಗ,ಆ.14:
ನಾಡಿನ ಸಾಕ್ಷಿ ಪ್ರಜ್ಞೆ ದೇವನೂರು ಮಹಾದೇವ ಸಾರ್ ರವರು, ಮಲೆನಾಡಿನ ಉಳಿವಿನ ಅಕೇಶಿಯ ವಿರೋಧಿ ಹೋರಾಟದ ಪರವಾಗಿ ಮಾತನಾಡಿ, ತಾನೇ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರೊಂದಿಗೆ ಮಾತನಾಡುವೆ ಎಂದಿದ್ದಾರೆ.
ಇದೇನ್ರಿ ನಿಂತು ಹೋದ ಕಾರ್ಖಾನೆ ಹೆಸರಿಗೆ 20,000 ಹೆಕ್ಟೇರ್ ಅರಣ್ಯ ಭೂಮಿಯನ್ನು ಮತ್ತೆ 40 ವರ್ಷಕ್ಜೆ ಲೀಸ್ ಮಾಡುವುದೆಂದರೆ “ಸತ್ತ ಮನುಷ್ಯನ ಹೆಸರಿಗೆ ಜಮೀನಿನ ಖಾತೆ ಮಾಡಿದಂತೆ” ಎಂದಿದ್ದಾರೆ.


ಮಲೆನಾಡಿಗೆ ಮತ್ತೆ ಜೀವತುಂಬ ಬೇಕು, ಅಕೇಶಿಯ ನೀಲಗಿರಿ ನಿಷೇಧದ ಜೊತೆಗೆ ಎಂಪಿಎಂಗೆ ನೀಡಿದ ಲೀಸ್ ಕೂಡಲೇ ರದ್ದಾಗಬೇಕು. ನಾನು ಸಂಪೂರ್ಣ ಜೊತೆಗಿರುವೆ ಎಂದರು,
ವಕೀಲರ ಸಮ್ಮೇಳನದ ಪ್ರಯುಕ್ತ ಮೈಸೂರು ಹೋಗಿದ್ದ ನಾನು ದೇವನೂರು ಸಾರ್ ರವರನ್ನು ಮಾತನಾಡಿಸಲು ಹೋಗಿದ್ದೆ. ಮಾತಿನ ಮದ್ಯದಲ್ಲಿ ಅವರೇ ಎಲ್ಲಿಗೆ ಬಂತು ಅಕೇಶಿಯ ಹೋರಾಟ ಎಂದರು. ಮತ್ತೆ ಅಕೇಶಿಯ ನೆಡಲು ಆರಂಬಿಸಿದ್ದಾರೆ ಅಂದಾಗ ಒಮ್ಮೆ ಸಿಎಂ ಬೇಟಿ ಆಗಿ ಅಂದರು, ಬೇಟಿ ಆಗಬೇಕು ಸಿಎಂ ಬೇಟಿಗೆ ಅಪಾಯಂಟ್ ಮೆಂಟ್ ಗೆ ಕಾಯುತ್ತಿದ್ದೇವೆ ಎಂದಾಗ ಇದಕ್ಕೆಲ್ಲ ಅಪಾಯಂಟ್ ಮೆಂಟ್ ಸಿಗದಿದ್ದರೆ ಹೇಗೆ? ನಾನು ಸಹ ಸಿಎಂ ಜೊತೆಗೆ ಮಾತನಾಡುವೆ, ನಾನು ನಿಮ್ಮೊಂದಿಗೆ ಇರುವೆ ಎಂದರು.


ಮಲೆನಾಡಿನ ಉಳಿವಿನ ಅಕೇಶಿಯ ವಿರೋಧಿ ಮತ್ತು ಅರಣ್ಯ ಭೂಮಿಯನ್ಬು ಉಳಿಸುವ ನಮ್ಮ ಹೋರಾಟಕ್ಕೆ ದೊಡ್ಡ ಶಕ್ತಿಯೊಂದು ಕೈ ಜೋಡಿಸಿದೆ.
-ಕೆ‌.ಪಿ.ಶ್ರೀಪಾಲ., ವಕೀಲರು ಹಾಗೂ ಪ್ರಗತಿಪರ ಹೋರಾಟಗಾರರು

Exit mobile version