Site icon TUNGATARANGA

ಮೊಬೈಲ್ ನಿಂದ ಉದ್ಧಾರ ಆಗುವ ಬದಲು ಹಾಳಾಗಿರುವುದೇ ಜಾಸ್ತಿ | ಪ್ರತಿಭಾ ಪುರಸ್ಕಾರ 2023 ಸಮಾರಂಭದಲ್ಲಿ: ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯದ ಡೀನ್ ಡಾ. ಕೃಷ್ಣ ಪ್ರಸಾದ್ ಎಂ.ಎಸ್.

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಇರಬೇಕು. ಮತ್ತು ಆ ಗುರಿ ತಲುಪುವವರೆಗೆ ಪ್ರಯತ್ನ ಮಾಡಬೇಕು ಎಂದು ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯದ ಡೀನ್ ಡಾ. ಕೃಷ್ಣ ಪ್ರಸಾದ್ ಎಂ.ಎಸ್. ಹೇಳಿದ್ದಾರೆ.

ಅವರು ಇಂದು ದೇಶೀಯ ವಿದ್ಯಾ ಶಾಲಾ ಸಮಿತಿ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್ ಶಿವಮೊಗ್ಗ ಇದರ ವತಿಯಿಂದ ಐಕ್ಯೂಎಸಿ ಸಹಯೋಗದಲ್ಲಿ ಡಿವಿಎಸ್ ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ 2023 ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಜೀವನವಿಲ್ಲ ಎಂದು ಭಾವಿಸಿದ್ದಾರೆ. ಆದರೆ ಮೊಬೈಲ್ ನಿಂದ ಉದ್ಧಾರ ಆಗುವ ಬದಲು ಹಾಳಾಗಿರುವುದೇ ಜಾಸ್ತಿ. ಮೊಬೈಲ್ ಗೀಳನ್ನು ಬಿಟ್ಟು ನಾನು ಎಲ್ಲಿದ್ದೇನೆ? ಎಲ್ಲಿರಬೇಕು? ಏನಾಗಬೇಕು ಎಂದು ಯೋಚಿಸಿ. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಮೊದಲು ನಿರ್ದಿಷ್ಟ ಗುರು ಇಟ್ಟುಕೊಳ್ಳಬೇಕು. ನಂತರ ಅದನ್ನು ತಲುಪುವಲ್ಲಿ ಕಠಿಣ ಶ್ರಮಪಡಬೇಕು. ನಾಳೆ ಮಾಡುತ್ತೇನೆ, ನಾಳೆ ಓದುತ್ತೇನೆ ಎಂದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ನಾಳೆ ಎಂಬುವವನ ಮನೆ ಹಾಳು ಎನ್ನುವಂತೆ ನಾಳೆಗೆ ಯಾವುದನ್ನೂ ಬಿಡಬೇಡಿ. ಇಂದಿನ ಕೆಲಸ ಇಂದೇ ಮಾಡಿ. ಪ್ರತಿನಿತ್ಯ ನಿಮ್ಮ ಪಾಠದ ಪುನರ್ ಮನನ ಮಾಡಿಕೊಳ್ಳಿ. ಪ್ರತಿದಿನ ಮಲಗುವ ಮುಂಚೆ ಇವತ್ತು ನಾನು ಏನು ಮಾಡಿದ್ದೇನೆ ಎಂಬುದನ್ನು ಯೋಚಿಸಬೇಕು. ಮನಸ್ಸು ಪೂರ್ಣವಾಗಿ ಪಠ್ಯದಲ್ಲಿ ಇಡಬೇಕು. ಏಕಾಗ್ರತೆ ಅತಿ ಅಗತ್ಯ. ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು. ವಿಚಲಿತರಾಗಿ ನಿಮ್ಮ ಗುರಿಯನ್ನು ಬದಲಾಯಿಸಬೇಡಿ ಎಂದರು.

ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಿವಿಎಸ್ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು.

ಡಿವಿಎಸ್ ಸಂಸ್ಥೆ ಪ್ರಮುಖರಾದ ಡಾ. ನಾಗರಾಜ್, ಕಾರ್ಯದರ್ಶಿ ಎಸ್. ರಾಜಶೇಖರ್, ಸಹಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಜಿ. ಗೋಪಿನಾಥ್, ಪ್ರಾಂಶುಪಾಲ ಡಾ. ವೆಂಕಟೇಶ್, ಪ್ರೊ. ಕುಮಾರಸ್ವಾಮಿ, ಹೆಚ್.ಎಂ. ಸುಧಾಕರ್, ಹೆಚ್.ಡಿ. ಉಮೇಶ್ ಮತ್ತಿತರರು ಇದ್ದರು.

Exit mobile version