Site icon TUNGATARANGA

ಶಿವಮೊಗ್ಗದಲ್ಲಿ ಖಚಿತ ಉದ್ಯೋಗ ಭರವಸೆಯ ಮೇಲೆ ನಿರುದ್ಯೋಗಿಗಳಿಗೆ ತರಬೇತಿ: ಸಾಂದೀಪನಿ

ಶಿವಮೊಗ್ಗ: ಬೆಂಗಳೂರಿನ ಅರಾವಳಿ ಸಂಸ್ಥೆಯಿಂದ ಶಿವಮೊಗ್ಗದಲ್ಲಿ ಖಚಿತ ಉದ್ಯೋಗ ಭರವಸೆಯ ಮೇಲೆ ನಿರುದ್ಯೋಗಿಗಳಿಗೆ ತರಬೇತಿ ತರಗತಿಗಳನ್ನು ಆರಂಭಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಸಾಂದೀಪನಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ತರಬೇತಿ ಮುಖ್ಯವಾಗಿ ನಿರುದ್ಯೋಗಿಗಳಿಗೆ, ಕೆಲಸ ಸಿಕ್ಕು ಬಿಟ್ಟವರಿಗೆ, ಶಿಕ್ಷಣ ಮುಂದುವರೆಸಲು ಆಗದವರಿಗಾಗಿ ನೀಡಲಾಗುತ್ತದೆ. ತರಬೇತಿ 6 ತಿಂಗಳ ಅವಧಿಯದ್ದಾಗಿದೆ. ಆದರೆ, ಶಿವಮೊಗ್ಗದಲ್ಲಿ ನಡೆಯುವ ತರಗತಿಗಳು ಪ್ರತಿ ಭಾನುವಾರ ಇಡೀ ದಿನ ನಡೆಯುತ್ತದೆ ಎಂದರು.

ಈ ತರಬೇತಿಯಲ್ಲಿ ನುರಿತ ತಜ್ಞರು ತರಬೇತಿ ನೀಡುತ್ತಾರೆ. ಕಂಫ್ಯೂಟರ್ ಜ್ಞಾನ, ಡಿಜಿಟಲ್ ಮಾರ್ಕೆಟಿಂಗ್, ಎಕ್ಸೆಲ್ ಬಳಕೆ, ಮಾತನಾಡುವ ರೀತಿ, ಉದ್ಯೋಗದ ವಿವರ ಹೀಗೆ ಎಲ್ಲಾ ದೃಷ್ಟಿಯಲ್ಲೂ ತರಬೇತಿ ನೀಡಿ ಉದ್ಯೋಗಕ್ಕೆ ಅಣಿಗೊಳಿಸಲಾಗುತ್ತದೆ. ಅಷ್ಟೇ ಅಲ್ಲ, ಅವರಿಗೆ ಖಚಿತವಾಗಿ ಯಾವುದಾದರೂ ಒಂದು ಸಂಸ್ಥೆಯಲ್ಲಿ ಉದ್ಯೋಗ ಕೂಡ ನೀಡಲಾಗುತ್ತದೆ. ಉದ್ಯೋಗದ ನಂತರವೂ ವಿಶೇಷ ತರಬೇತಿ ನೀಡಲಾಗುವುದು ಎಂದರು.

ಪಿಯುಸಿ ಹಾಗೂ ಕಾಲೇಜ್ ವಿದ್ಯಾರ್ಥಿಗಳು ಈ ತರಬೇತಿ ಪಡೆಯಬಹುದು. ಆದರೆ, ಬೆಂಗಳೂರಿನಲ್ಲಿರುವ ತರಬೇತಿ ಸಂಸ್ಥೆಗೆ ಪದವೀಧರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆರು ತಿಂಗಳ ಅವಧಿಗೆ 1.55 ಲಕ್ಷ ರೂ. ಶುಲ್ಕವಿದೆ. ಇವರಿಗೆ ಲ್ಯಾಪ್ ಟಾಪ್, ಬ್ಯಾಗ್, ಡೈರಿಗಳು, ಸಮವಸ್ತ್ರ, ಇಂಟರ್ನ್ ಶಿಪ್ ಹಾಗೂ ಪ್ಲೇಸ್ ಮೆಂಟ್ ಒದಗಿಸಲಾಗುವುದು. ಶುಲ್ಕವನ್ನು ಕಂತುಗಳಲ್ಲೂ ಪಾವತಿಸಬಹುದಾಗಿದೆ. ಶಿವಮೊಗ್ಗದಲ್ಲಿ ಆ. 27, ಸೆ. 3 ರಂದು ತರಗತಿಗಳು ಆರಂಭವಾಗುತ್ತವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಅಮ್ಲಾನ್ ಭಟ್ಟಾಚಾರ್ಯ, ರಾಮನಾಥ್ ಅಯ್ಯರ್, ಸಾಮಂತ್ ರಂಗಧೋಳ್ ಇದ್ದರು.

Exit mobile version