Site icon TUNGATARANGA

ಸೀನಪ್ಪಶೆಟ್ಟಿ ಸರ್ಕಲ್ ನಾಮಫಲಕ ಅನಾವರಣಗೊಳಿಸಿದ ಶಾಸಕ ಚನ್ನಬಸಪ್ಪ, ಶಿವಮೊಗ್ಗದ ಸಂತಸ ಏನಿದು ನೋಡಿ

ಶಿವಮೊಗ್ಗ,ಆ.11:

ಶಿವಮೊಗ್ಗದ ಹೃದಯ ಭಾಗದಲ್ಲಿರುವ ಸೀನಪ್ಪ ಶೆಟ್ಟಿ ವೃತ್ತದ ನಾಮಫಲಕವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಇಂದು ಉದ್ಘಾಟಿಸಿದರು.


ಅವರು ಮಾತನಾಡಿ, ಟಿ. ಸೀನಪ್ಪ ಶೆಟ್ಟಿ ವೃತ್ತ ಈ ಮೊದಲು ಗೋಪಿ ವೃತ್ತ ಎಂದು ಕರೆಯಲ್ಪಡುತ್ತಿತ್ತು. ಆದರೆ, ೧೯೫೬ ರಲ್ಲಿಯೇ ಈ ವೃತ್ತಕ್ಕೆ ಟಿ. ಸೀನಪ್ಪ ಶೆಟ್ಟಿ ವೃತ್ತಕ್ಕೆ ಎಂದು ಹೆಸರಿಡಲು ಅಂದಿನ ಪುರಸಭೆ ಒಪ್ಪಿಗೆ ನೀಡಿತ್ತು. ಸೀನಪ್ಪ ಶೆಟ್ಟಿ ಕುಟುಂಬದವರು ಈ ವೃತ್ತಕ್ಕಾಗಿಯೇ ಆಗಿನ ಕಾಲದಲ್ಲಿ ೨೫ ಸಾವಿರ ರೂ. ನೀಡಿದ್ದರು. ಜೊತೆಗೆ ಮತ್ತೆ ೨೦ ಸಾವಿರ ರೂ.ನಲ್ಲಿ ಕಾರಂಜಿ ನಿರ್ಮಿಸಿದ್ದರು. ಇದು ಕಡಿಮೆ ಹಣವೇನಲ್ಲ ಎಂದರು.
ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಇಲ್ಲಿನ ಕಾರಂಜಿಯನ್ನು ಸ್ಥಳಾಂತರ ಮಾಡಲಾಗಿತ್ತು. ಅದು ಮಹಾನಗರ ಪಾಲಿಕೆ ಬಳಿ ಇತ್ತು. ಅಲ್ಲಿಯೂ ಕಾರಂಜಿಯನ್ನು ತೆಗೆಯಲಾಗಿದೆ.

ಒಟ್ಟಾರೆ ಈ ವೃತ್ತ ಮತ್ತು ಕಾರಂಜಿಗಾಗಿ ಸೀನಪ್ಪ ಶೆಟ್ಟಿ ಸಹೋದರರ ಕೊಡುಗೆ ಅಪಾರವಾದುದು. ಇನ್ನು ಮುಂದೆ ಈ ವೃತ್ತವನ್ನು ಗೋಪಿ ವೃತ್ತ ಎಂದು ಕರೆಯದೇ ಸೀನಪ್ಪ ಶೆಟ್ಟಿ ವೃತ್ತ ಎಂದೇ ಕರೆಯಬೇಕು.

ಇದು ಹಿರಿಯರ ಕೊಡುಗೆಗೆ ಸಾಕ್ಷಿಯಾಗುತ್ತದೆ ಎಂದರು.
ಸೀನಪ್ಪ ಶೆಟ್ಟಿ ಕುಟುಂಬದ ವೆಂಕಟೇಶ್ ಮೂರ್ತಿ ಮಾತನಾಡಿ, ೧೯೫೬ ರಿಂದ ಇಲ್ಲಿಯವರೆಗೆ ಅಂದಿನ ಪುರಸಭೆ, ನಗರಸಭೆಯಿಂದ ಹಿಡಿದು ಮಹಾನಗರ ಪಾಲಿಕೆಯಾಗವ ತನಕ ಎಲ್ಲಾ ದಾಖಲೆಗಳಲ್ಲಿಯೂ ಸೀನಪ್ಪ ಶೆಟ್ಟಿ ವೃತ್ತ ಎಂದೇ ಇದೆ. ಅದು ಇಂದು ಮಹಾನಗರ ಪಾಲಿಕೆ ವತಿಯಿಂದ ಮತ್ತೊಮ್ಮೆ ನಾಮಫಲಕ ಸ್ಥಾಪಿಸಿ ಅಧಿಕೃತವಾಗಿ

ಉದ್ಘಾಟನೆ ಮಾಡಲಾಗಿದೆ. ನಮ್ಮ ಕುಟುಂಬದ ಹಿರಿಯರ ಅನನ್ಯ ಹಾಗೂ ದೂರ ದೃಷ್ಟಿಯನ್ನಿಟ್ಟುಕೊಂಡು ಸೀನಪ್ಪ ಶೆಟ್ಟಿ ವೃತ್ತ ಎಂದೇ ಇದನ್ನು ಕರೆಯಬೇಕು ಎಂದರು.


ಕಾರ್ಯಕ್ರಮದಲ್ಲಿ ಸೀನಪ್ಪ ಶೆಟ್ಟಿ ಕುಟುಂಬದ ಪ್ರಮುಖರಾದ ಟಿ.ಆರ್. ಅಶ್ವತನಾರಾಯಣ ಶೆಟ್ಟಿ, ಟಿ.ಎಸ್. ಸಂದೀಪ್, ವಿಶ್ವನಾಥ್, ಗುರುಚರಣ್, ರಘುನಂದನ್ ಹಾಗೂ ವೈ.ಹೆಚ್. ನಾಗರಾಜ್, ಜಿ. ವಿಜಯಕುಮಾರ್, ಖಂಡೋಬರಾವ್ ಮೊದಲಾದವರಿದ್ದರು.

Exit mobile version