Site icon TUNGATARANGA

ನಲವತ್ತರ ಮಗನ ಕಾಲು ಕೊಳೆಯುತ್ತಿದೆ/ ಎಂಬತ್ತರ ತಾಯಿಯ ಅಳಲಿಗೆ ಸ್ಪಂದಿಸಿ ಸಹಾಯ ಮಾಡಿ- ಶಿವಮೊಗ್ಗದ ಗೋಳಿಗೊಂದಿಷ್ಟು ಸಹಕರಿಸಿ

ವಯೋವೃದ್ಧ ತಾಯಿ ತನಗೆ ಆಸರೆಯಾಗಿರುವ ಸುಮಾರು 40 ವರ್ಷ ವಯಸ್ಸಿನ ಮಗನ ಕಾಲು ಕೊಳೆಯುತ್ತಿದ್ದರೂ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಕಣ್ಣೀರು ಹಾಕುತ್ತಾ, ಕಂಡ ಕಂಡವರ ಕಾಲಿಗೆ ಬೀಳುತ್ತಾ ನನ್ನ ಮಗನನ್ನು ಉಳಿಸಿ ಕೊಡಿ ಎಂದು ಬೇಡುತ್ತಿರುವ ದೃಶ್ಯ ಅಣ್ಣಾನಗರ, ಹೊಸಮನೆ ಬಡಾವಣೆಯಲ್ಲಿ ಕಂಡು ಬಂದಿದೆ.
ವಯೋವೃದ್ಧ ತಾಯಿ ಶ್ರೀಮತಿ ಪಂಚಾಮೃತರವರಿಗೆ ಆಸರೆಯಾಗಿದ್ದಿದ್ದು ಒಬ್ಬನೇ ಮಗ.ಆತನ ಹೆಸರು ರಮೇಶ. ಪೈಂಟ್ ಕೆಲಸ ಮಾಡಿಕೊಂಡಿದ್ದ ರಮೇಶನಿಗೆ ಒಂದಿಷ್ಟು ತಿಂಗಳುಗಳಿಂದ ಕಾಲು ಕೊಳೆಯುತ್ತಾ ಬರುತ್ತಿದೆ.


ತೀರಾ ಬಡತನದಲ್ಲಿರುವ ಕುಟುಂಬವಾಗಿರುವುದರಿಂದ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕೂಡ ತೀರಾ ಕಷ್ಟ. ಪುಟ್ಟ ಮನೆಯಲ್ಲಿ ಬಾಡಿಗೆಗಿರುವ ವೃದ್ಧೆ ಪಂಚಾಮೃತರವರೇ ಕೊಳೆಯುತ್ತಿರುವ ಕಾಲಿನ ಮಗ ರಮೇಶ್ ಗೆ ಆಸರೆ.

ಹಣ,ಇತ್ಯಾದಿ ಸಹಾಯ ಮಾಡಬಯಸುವ ಮಾನವೀಯ ಕಳಕಳಿಯ ತಾವು ಪಂಚಾಮೃತರ ಬ್ಯಾಂಕ್ ಅಕೌಂಟಿಗೆ ಕೈಲಾದಷ್ಟು ಹಣ ಸಹಾಯ ಮಾಡಬೇಕೆಂದು ವಿನಂತಿ

ಬ್ಯಾಂಕ್ ವಿವರ ಹೀಗಿದೆ;

Panchamruta
A/c- 3405108010161
IFSC-CNRB0003405
CANARA BANK
ANNANAGARA BRANCH
SHIVAMOGGA

ಪಂಚಾಮೃತ
(ಮೊಬೈಲ್-9980159563)

ಕಳಕಳಿಯ ವಿನಂತಿ
ಗಜೇಂದ್ರಸ್ವಾಮಿ,
ಸಂಪಾದಕರು
ತುಂಗಾತರಂಗ ದಿನಪತ್ರಿಕೆ
9448256183

Exit mobile version