Site icon TUNGATARANGA

ಹೊಸಕೊಪ್ಪದಲ್ಲಿ ಮಕ್ಕಳ ‘ಗ್ರೀನ್ ಹೀರೋ’ ಯೋಜನೆಗೆ ಚಾಲನೆ, ಏನಿದು ನೋಡಿ

ಶಿವಮೊಗ್ಗ, ಆ.8:
ಮಕ್ಕಳ ಮನಸ್ಸಿನಲ್ಲಿ ಬಾಂಧವ್ಯದ ಬೆಸುಗೆ ಜೊತೆಗೆ ಸ್ವಂತ ಶ್ರಮದಿಂದ ಗಿಡವನ್ನು ಅತ್ಯಂತ ಮುತುವರ್ಜಿಯಿಂದ ಬೆಳೆಸುವ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ ಪಿ ಆರ್ ಎಸ್ ಎ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತಪಡಿಸಿರುವ ಎರಡನೇ ಹಂತದ ಕಾರ್ಯಕ್ರಮ ಶಿವಮೊಗ್ಗ ಗ್ರಾಮಾಂತರ ಭಾಗದ ಹೊಸಕೊಪ್ಪದ ಡಾ. ಬಿ. ಆರ್ . ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆಯಿತು.


ಮಕ್ಕಳಿಗೆ ಸಸ್ಯಗಳನ್ನು ನೀಡುವ ಜೊತೆಗೆ ಅವರನ್ನು ಹುರಿದುಂಬಿಸುವ ಕೆಲಸವನ್ನು ಮಾಡುವ ಮೂಲಕ ತನ್ನ ಸಂಸ್ಥೆಯ ಮಹದುದ್ದೇಶದ ‘ಗ್ರೀನ್ ಹೀರೋ’ ಯೋಜನೆಗೆ ಚಾಲನೆಯಾಗಿದ್ದು, ಕಾರ್ಯಕ್ರಮವನ್ನು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್. ನಿವೃತ್ತ ಶಿಕ್ಷಣಾಧಿಕಾರಿ ಹಾಲಾನಾಯ್ಕ್ ಉದ್ಘಾಟಿಸಿದರು.
ಮಗುವಿನ ಮನಸ್ಸಿನಲ್ಲಿ ಕುಟುಂಬದವರ ಅದರಲ್ಲೂ ತಾಯಿಯ ಬಾಂಧವ್ಯವನ್ನು ಗ್ರೀನ್ ಹೀರೋ ಕಾರ್ಯಕ್ರಮ ಬಿಂಬಿಸಿರುವುದು ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿದೆ.


ಮಗು ತಾನು ಪಡೆಯುವ ಸಸ್ಯವನ್ನು ಅತ್ಯಂತ ಜೋಪಾನವಾಗಿ ತಮ್ಮ ಮನೆಯ ಅಂಗಳದಲ್ಲಿ ಬೆಳೆಸುವ ಜೊತೆಗೆ ಆ ಗಿಡಕ್ಕೆ “ತಾಯಿ”ಯ ಹೆಸರನ್ನು ಇಡುವಂತಹದಾಗಿದೆ.
ನಿರಂತರವಾಗಿ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸಿಇಓ ಡಾ. ಭಾವನಾ ತಿಳಿಸಿದ್ದಾರೆ

Exit mobile version