ಶಿವಮೊಗ್ಗ: ಬರುವ ಜೂ.15ರ ಸೋಮವಾರ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸಲಿದ್ದು ಸುಮಾರು ಐದಾರು ವರುಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಅಂದು ಬೆಳಿಗ್ಗೆ ಹತ್ಯು ಗಂಟೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜೊತೆ ಕಾಮಗಾರಿಗೆ ಚಾಲನೆ ನೀಡಲಿರುವ ಯಡಿಯೂರಪ್ಪ ಅವರು ಇದೇ ಸಂದರ್ಭದಲ್ಲಿ ಪಿಡಬ್ಲೂಡಿ ಹಾಗೂ ರಾಷ್ಟ್ರಿಯ ಹೆದ್ದಾರಿ ಕಟ್ಟಡಗಳ ಉದ್ಘಾಟನೆ ಮಾಡಲಿದ್ದಾರೆ.
ಈ ಹಿಂದೆ ಇದೇ ಯಡಿಯೂರಪ್ಪ ಸಿ.ಎಂ. ಆಗಿದ್ದಾಗ ಶಂಕುಸ್ಥಾಪನೆಯಾಗಿದ್ದ ವಿಮಾನ ನಿಲ್ದಾಣ ಕಾಮಗಾರಿ ಸಂಪೂರ್ಣ ನಿಂತಂತಾಗಿತ್ತು. ಈಗ ಮತ್ತೆ ಚಾಲನೆ ದೊರೆತಿರುವುದು ಶಿವಮೊಗ್ಗ ಜನರಿಗೆ ಹರುಷ ನೀಡಿದೆ.