Site icon TUNGATARANGA

ಪೋಕ್ಸೋ ಪ್ರಕರಣದಲ್ಲಿ ಸೆಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರ ಬಂಧನ


ಶಿವಮೊಗ್ಗ: ಶಾಲಾ ವಿದ್ಯಾರ್ಥಿನಿ/ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಸೆಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಫ್ರಾನ್ಸಿಸ್

ಫನಾಂಡೀಸ್ ಇವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಕೋಟೆ ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಆರೋಪಿಯು ತನಗೆ ಜಾಮೀನು ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು,

ಈ ಅರ್ಜಿಯನ್ನು ಮಾನ್ಯ ೧ನೇ ಹೆಚ್ಚುವರಿ ಜಿಲ್ಲಾ & ವಿಶೇ? ಸತ್ರ ನ್ಯಾಯಾಲಯ, (ಎಫ್ ಟಿಎಸ್ಸಿ-೧) ಶಿವಮೊಗ್ಗ ಇಲ್ಲಿ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.


ಸದರಿ ಪ್ರಕರಣದ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಮಮತಾ ಬಿ.ಎಸ್.ಸರ್ಕಾರಿ ಅಭಿಯೋಜಕರು, ಶಿವಮೊಗ್ಗ ರವರು ವಾದ ಮಂಡಿಸಿದ್ದು,

೧ನೇ ಜಿಲ್ಲಾ & ವಿಶೇ? ಪತ್ರ ನ್ಯಾಯಾಲಯ (ಎಫ್‌ಟಿಎಸ್-೧) ದ ನ್ಯಾಯಾಧೀಶೆ ಲತಾ ರವರು ಆರೋಪಿತನಾದ ಫ್ರಾನ್ಸಿಸ್ ಫನಾಂಡೀಸ್ ಇವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಮಾಡಿರುತ್ತಾರೆ.

Exit mobile version