Site icon TUNGATARANGA

ಪಿ.ವಿ. ಕೃಷ್ಣಭಟ್ಟರು ಕಲಿಯುಗ ಕೃಷ್ಣನಿದ್ದಂತೆ “ಪಥದರ್ಶಿ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರ ಕಾರ್ಯವಾಹ ದತ್ತಾತ್ರೇಯ ಹೊಸ ಬಾಳೆ

ರಾಷ್ಟ್ರೀಯ ಸ್ವಯಂಸೇವಾ ಸಂಘ ಮತ್ತು ಎಬಿಪಿಯಲ್ಲಿ ಪಥದರ್ಶಿಯಾಗಿ ಪ್ರೊಫೆಸರ್ ಪಿ.ವಿ. ಕೃಷ್ಣ ಭಟ್, ಅಸಂಖ್ಯಾತರಿಗೆ ತಾವೇ ಪಥವಾದ ಸಾರ್ಥಕ ಹಾಗೂ ಜಗತ್ತನ್ನೇ ಅಪ್ಪಿಕೊಳ್ಳುವ ವ್ಯಕ್ತಿತ್ವ ಉಳ್ಳವರು. ಭಗವದ್ಗೀತೆಯ ಅಮೃತಾಷ್ಟಕದಲ್ಲಿ ನೀಡಿರುವಂಥ

ಭಕ್ತನ ಗುಣಗಳನ್ನು ಹೊಂದಿರುವ ಕಲಿಯುಗ ಕೃಷ್ಣನಿದ್ದಂತೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರ ಕಾರ್ಯವಾಹ ದತ್ತಾತ್ರೇಯ ಹೊಸ ಬಾಳೆ ಹೇಳಿದರು.


ಬೆಂಗಳೂರಿನ ಸ್ಕೌಟ್ ಭವನದ ಸಭಾಂಗಣದಲ್ಲಿ ನಡೆದ “ಪಥದರ್ಶಿ” ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಅವರು, ವೃಕ್ಷ ತಾನು ಬಿಸಿಲಲ್ಲಿ ಬೆಂದರೂ (ಇತರರಿಗೆ ನೆರಳು ನೀಡುವಂತೆ ಕೃಷ್ಣ ಭಟ್ಟರು ಇತರರಿಗೆ ನೆರಳು ಮತ್ತು ಫಲ ನೀಡಿದ ಸತ್ಪುರುಷರು. ಅವರ ಧ್ಯೇಯದ ಬೇರುಗಳು ಗಟ್ಟಿಯಾಗಿವೆ. ಅವು ಎಂದಿಗೂ ಬದಲಾಗುವುದಿಲ್ಲ ಎಂದರು.


ಕೇಂದ್ರ ಸಚಿವ ಮುಳಿಧರನ್ ರವರು, ಪ್ರೊ. ಪಿವಿಕೆ ಯವರು ಇಡೀ ದೇಶದಲ್ಲಿ ಸಂಘಟನೆಯನ್ನು ಬಲಗೊಳಿಸಿದ “ಸಂಘಟನಾ ಸಂತರು” ಎಂದು ಪಿವಿಕೆಯವರ ವ್ಯಕ್ತಿತ್ವವನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ,

ಬಿಲಾಸ್ಪುರದ ಅಟಲ್ ಬಿಹಾರಿ ವಾಜಪೇಯಿ ವಿಶ್ವವಿದ್ಯಾಲಯದ ಕುಲಪತಿ ಂ.ಆ.ಓ ಬಾಜಪೇಯಿ, ಎಬಿವಿಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಜಕುಮಾರ ಭಾಟಿಯಾ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಹಿರಿಯ ಪತ್ರಕರ್ತರು

ಹಾಗೂ ಪಥದರ್ಶಿ ಸಂಪಾದಕ ದು.ಗು ಲಕ್ಷ್ಮಣ್ ಹಾಗೂ ಶಿವಮೊಗ್ಗ ನಗರದಿಂದ ಶಾಸಕ ಚನ್ನಬಸಪ್ಪ, ದಕ್ಷಿಣ ಪ್ರಾಂತ್ಯ ಸಹ ಕಾರ್ಯವಾಹರಾದ ಪಟ್ಟಾಬಿ, ವಿಧಾನ ಪರಿಷತ್ ನ ಮಾಜಿ ಸದಸ್ಯರುಗಳಾದ ಭಾನುಪ್ರಕಾಶ್, ಸಿದ್ದರಾಮಣ್ಣ, ವಿಭಾಗ ಪ್ರಮುಖರಾದ ಗಿರೀಶ್ ಪಟೇಲ್, ಪಾಲಿಕೆ ಸದಸ್ಯರುಗಳಾದ ಸುರೇಖ ಮುರಳೀಧರ್, ಪ್ರಭಾಕರ್, ಮುರಳೀಧರ್ ಮುಂತಾದ ಪ್ರಮುಖರು ಭಾಗವಹಿಸಿದ್ದರು.

Exit mobile version