Site icon TUNGATARANGA

ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಕಿಡಿಕಾರಿದ್ದೇಕೆ ?

ಶಿವಮೊಗ್ಗ, ಆ.೦೭;
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಭ್ರಮದಿಂದ ಸ್ವಾಗತಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನಾಯ ಕರನ್ನು ಗುರಿಯಾಗಿಟ್ಟುಕೊಂಡು ಇಡಿ ಸೇರಿದಂತೆ ವಿನಾಕಾರಣ ಕಿರುಕುಳ ನೀಡುತ್ತಿದೆ.

ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಕಿರುಕುಳ ನೀಡಿತ್ತು. ರಾಹುಲ್ ಗಾಂಧಿ ಯವರ ಜನಪ್ರಿಯತೆ ಸಹಿಸಲಾ ಗದೆ ಸೇಡಿನ ರಾಜಕಾರಣ ಮಾಡಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಕೋರ್ಟ್‌ಗಳು ಕೂಡ ಅದನ್ನು ಎತ್ತಿ ಹಿಡಿದಿ ದ್ದವು. ಆದರೆ ಅದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ರಾಹುಲ್ ಅವರ ಪರ ತೀರ್ಪು ನೀಡಿದೆ ಇದು ಸ್ವಾಗತಾರ್ಹ ಎಂದರು.


ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದ ಪ್ರಜಾಸತ್ತಾತ್ಮಕ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದಂತಾಗಿದೆ. ಸತ್ಯಕ್ಕೆ ಜಯ ಸಿಕ್ಕಿದೆ. ಜನರ ನಂಬಿಕೆಗಳನ್ನು ಉಳಿಸಿಕೊಂಡಂತಾಗಿದೆ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರಿಗೆ ದಿಗ್ಭ್ರಮೆಯಾಗಿದೆ ಎಂದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ ಅವರನ್ನು ಕುರಿತು ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ವಾದುದು. ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಆದರೆ ಈ ಬಿಜೆ ಪಿಯವರಿಗೆ ಕೆಟ್ಟ ಮೇಲೆಯೂ ಬುದ್ಧಿ ಬರುವುದಿಲ್ಲ.

ಸಿ.ಟಿ. ರವಿ, ಈಶ್ವರಪ್ಪ, ರೇಣುಕಾಚಾರ್ಯ ಮುಂತಾದವರು ಮೂಲೆ ಗುಂಪಾಗಿದ್ದರೂ ಮಾತನಾಡುವು ದನ್ನು ಬಿಡುತ್ತಿಲ್ಲ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎಸ್. ಚಂದ್ರ ಭೂಪಾಲ್, ಕಲೀಂ ಪಾಶಾ, ಚಂದ್ರಶೇಖರ್, ಗಂಗಾಧರ್, ಎ.ಬಿ. ಮಾರ್ಟಿಸ್, ಎನ್.ಡಿ. ಪ್ರವೀಣ್‌ಕುಮಾರ್ ಸೇರಿದಂತೆ ಹಲವರಿದ್ದರು.

Exit mobile version