Site icon TUNGATARANGA

ರಾಷ್ಟ್ರೀಯ ವ್ಯಾಸ್ಕೂಲರ್ ದಿನಾದ ಅಂಗವಾಗಿ ಆ.30 ರವರೆಗೆ ಶೇ.30 ರ ದರದಲ್ಲಿ ಕಲರ್ ಡಾಪ್ಲರ್ ಪರೀಕ್ಷೆ: ಸರ್ಜನ್ ಶ್ರೀರಾವ್ ವಿವರ

ಶಿವಮೊಗ್ಗ:ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆ?ಲಿಟಿ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ವ್ಯಾಸ್ಕೂಲರ್ ದಿನಾಚರಣೆ ಅಂಗವಾಗಿ ಆಗಸ್ಟ್ ೩೦ರವರೆಗೆ ಶೇ.೩೦ರ ದರದಲ್ಲಿ ಕಲರ್ ಡಾಪ್ಲರ್ ಪರೀಕ್ಷೆ ಮಾಡಲಾಗುತ್ತದೆ ಎಂದು ವ್ಯಾಸ್ಕೂಲರ್ ಸರ್ಜನ್ ಶ್ರೀಶರಾವ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪ್ರತಿ ವ? ಆಗಸ್ಟ್ ೬ರಂದು ದೇಶದಾದ್ಯಂತ ವ್ಯಾಸ್ಕೂಲರ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ, ರಕ್ತನಾಳಗಳ ಕಾಯಿಲೆಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿದೆ ಎಂದರು.


ಭಾರತ ದೇಶದಲ್ಲಿ ೨೦೨೩ರ ರಾಷ್ಟ್ರೀಯ ವ್ಯಾಸ್ಕೂಲರ್ ದಿನಾಚರಣೆಯ ಮೂಲ ಗುರಿ ಮತ್ತು ಧೈಯ ರಕ್ತನಾಳದ ಸಮಸ್ಯೆಗಳಿರುವ ಕಾಲನ್ನು ಕತ್ತರಿಸದೆ ಉಳಿಸುವುದೇ ಆಗಿದೆ. ಈ ರೀತಿ ಕಾಲಿನ ರಕ್ತನಾಳಗಳಲ್ಲಿ ಸಮಸ್ಯೆ ಉಂಟಾಗಲು ತಂಬಾಕು ಸೇವನೆ, ಧೂಮಪಾನ, ಮಧುಮೇಹ ಕಾರಣವಾಗುತ್ತದೆ. ಮತ್ತು ಕಾಯಿಲೆಗಳಿಂದ ಪಾದಗಳಲ್ಲಿ ಉಂಟಾಗುವ ಸೋಂಕು ಹಾಗೂ ರಸ್ತೆ ಅಪಘಾತಗಳು ಆಗಿದೆ ಎಂದರು
ಅತಿಯಾದ ತಂಬಾಕು ಸೇವನೆ ಮತ್ತು ಧೂಮಪಾನದಿಂದ ಶುದ್ಧ

ರಕ್ತನಾಳಗಳು ಮುಚ್ಚಲ್ಪಡುವುದು, ಇದರಿಂದ ಕಾಲುಗಳಲ್ಲಿ ನಡೆದಾಡುವಾಗ ನೋವು ಉಂಟಾಗುವುದು, ಇದನ್ನು ನಿರ್ಲಕ್ಷಿಸಿದ್ದಲ್ಲಿ ಕಾಲಕ್ರಮೇಣ ಕಾಲುಗಳಲ್ಲಿ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.


ಕಾಲಿನ ರಕ್ತನಾಳಗಳ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು, ಕಲರ್ ಡಾಪ್ಲರ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರಲ್ಲಿ ರಕ್ತನಾಳದ ಸಮಸ್ಯೆ ದೃಢಪಟ್ಟಲ್ಲಿ ಆಂಜಿಯೊಪ್ಲಾಸ್ಟಿ, ಸ್ಟಂಟಿಂಗ್, ಬೈಪಾಸ್ ಶಸ್ತ್ರಚಿಕಿತ್ಸೆಗಳ ಮೂಲಕ ಗ್ಯಾಂಗ್ರೀನ್ ಆಗುವುದನ್ನು ತಪ್ಪಿಸಿ ಕಾಲನ್ನು ಉಳಿಸಿಕೊಳ್ಳಬಹುದಾಗಿದೆ. ಎಂದರು.


ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆ?ಲಿಟಿ ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ವ್ಯಾಸ್ಕೂಲರ್ ದಿನಾಚರಣೆಯ ಅಂಗವಾಗಿ ಕಲರ್ ಡಾಪ್ಲರ್ ಪರೀಕ್ಷೆಗಳ ಮೇಲೆ ವಿಶೇ? ೩೦% ರಿಯಾಯಿತಿಯನ್ನು ಇದೇ ತಿಂಗಳ ೩೦ರ ವರೆಗೆ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ ಚಕ್ರವರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಜಸಿಂಗ್ ಇದ್ದರು.

Exit mobile version