Site icon TUNGATARANGA

ಸಂಘ ಸಂಸ್ಥೆಗಳು ಯಶಸ್ವಿಯಾಗಿ ನಡೆಯಬೇಕಾದರೆ ಒಳ್ಳೆಯ ಯೋಜನೆ ಯೋಚನೆ ಮಾಡಿದಾಗ ಮಾತ್ರ ಸಾಧ್ಯ: ಆದಿ ಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಶ್ರೀಗಳು

ಶಿವಮೊಗ್ಗ : ಸಂಘ ಸಂಸ್ಥೆಗಳು ಯಶಸ್ವಿಯಾಗಿ ನಡೆಯಬೇಕಾದರೆ ಸಮಯಪ್ರಜ್ಞೆ ಮತ್ತು ಶಿಸ್ತು ಪಾಲನೆ ಹಾಗೂ ಒಳ್ಳೆಯ ಯೋಜನೆ ಮತ್ತು ಯೋಚನೆ ಮಾಡಿದಾಗ ಮಾತ್ರ ಸಾಧ್ಯ ಎಂದು ಆದಿ ಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಶ್ರೀಗಳು ಹೇಳಿದ್ದಾರೆ.


ಅವರು ಇಂದು ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸದಸ್ಯಿನಿಯರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.


ಸಮಯಪಾಲನೆ ಮತ್ತುಶಿಸ್ತು ಪ್ರತಿಯೊಬ್ಬನಿಗೂ ಅವಶ್ಯ. ಇಂತಹ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದ ರೈತಾಪಿ ಜನರ ಉದ್ಧಾರಕ್ಕೆ ಹೆಚ್ಚಿನ ಆಸಕ್ತಿ ವಹಿಸಿದಾಗ ಮಾತ್ರ ಇದಕ್ಕೊಂದು ಅರ್ಥ ಬರುತ್ತದೆ. ಎಲ್ಲರಿಗೂ ಸ್ವಯಂ ಉದ್ಯೋಗದ ಅವಶ್ಯಕತೆಯಿದೆ. ಹಿಂದೊಂದು ಕಾಲವಿತ್ತು. ಕೊಬ್ಬರಿ ಮಾರುವವನು ಅತಿ ಶ್ರೀಮಂತ. ತೆಂಗಿನ ಕಾಯಿ ಮಾರುವವನು ನಷ್ಟದಲ್ಲಿದ್ದಾನೆ.

ಎಳನೀರು ಮಾರುವವನು ಪೂರ್ತಿ ನೆಲ ಕಚ್ಚಿದ್ದಾನೆ ಎಂಬ ನಾಣ್ಣುಡಿ ಇತ್ತು. ಆದರೆ ಈಗಿನ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಕೊಬ್ಬರಿ ಮಾರುವವನು ಕೊನೆಯ ಸ್ಥಾನಕ್ಕೆ ಹೋಗಿದ್ದಾನೆ. ಹಾಗಾಗಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ಮಹಿಳೆಯರಿಗೆ ಆರೋಗ್ಯ ತರಬೇತಿ ಸ್ವಯಂ ಉದ್ಯೋಗ ತರಬೇತಿ, ಆಧ್ಯಾತ್ಮಿಕ ವಿಚಾರಗಳ ಬಗ್ಗೆ ತರಬೇತಿ ನೀಡುವ ಯೋಚನೆಯ ಬಗ್ಗೆ ಪ್ರಸ್ತುತ ಮಾರುಕಟ್ಟೆಯ ಜ್ಞಾನ ಮತ್ತು ಸ್ವಯಂ ಉದ್ಯೋಗದಲ್ಲಿ ಸೃಷ್ಟಿಸಿದ ವಸ್ತುಗಳಿಗೆ ಉತ್ತಮ ಬೆಲೆ ಸಿಗಲು ಮಾರುಕಟ್ಟೆಯ ನಿರ್ಮಾಣವಾದಾಗ ಮಾತ್ರ ಎಲ್ಲರಿಗೂ ಯಶಸ್ಸು ಸಿಗುತ್ತದೆ ಎಂದರು

.
ವಿವಿಧ ಭಾಗಗಳ ಮಹಿಳೆಯರಿಗೆ ವಿವಿಧ ಸಮಸ್ಯೆಗಳಿವೆ. ಅದನ್ನು ಮನಗಂಡು ಅವರ ಅಗತ್ಯಕ್ಕೆ ತಕ್ಕ ಹಾಗೆ ತರಬೇತಿ ಶಿಬಿರಗಳನ್ನು ಏರ್ಪಡಿಸಬೇಕು. ಮಹಿಳೆಯರಿಗೂ ಕೈತುಂಬಾ ಕೆಲಸ ನೀಡಬೇಕು ಎಂದರು.
ಆದಿಚುಂಚನಗಿರಿ ಟ್ರಸ್ಟ್‌ಗೆ ೫೦ ವರ್ಷದ ಸುವರ್ಣ ಸಂಭ್ರಮ. ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಮಹಿಳಾ ಸಮಾವೇಶ, ಮಹಿಳಾ ಮತ್ತು ಮಕ್ಕಳ ಜನಜಾಗೃತಿ ಸಮಾವೇಶ, ಅ.೧೦ರಿಂದ ೨೦ರ ವರೆಗೆ ನಡೆಸಲು ತಿರ್ಮಾನಿಸಿದ್ದೇವೆ. ಮಹಿಳೆಯರು ನಮ್ಮ ಸಂಸ್ಕಾರ ಸಂಸ್ಕೃತಿಯಿಂದ ದೂರ ಹೋಗಬಾರದು. ಮಕ್ಕಳಿಗೆ ಕಲಿಸುವ ಜವಾಬ್ದಾರಿ ನಿಮ್ಮದಿದೆ

. ಉತ್ತಮ ಮನಸ್ಸಿದ್ದರೆ ಸಿರಿವಂತ ಬಡವ ಎಂಬ ಭಾವನೆ ಬರುವುದಿಲ್ಲ. ಪೂರ್ವಗ್ರಹ ಪೀಡಿತರಾಗಬಾರದು ಎಂದ ಅವರು, ಒಕ್ಕಲಿಗರ ಸಂಘದ ಪ್ರತಿ ತಾಲೂಕು ಶಾಖೆಯಿಂದಲೂ ಸಮಾಜದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡುವ ಯೋಚನೆಯಿದೆ ಎಂದರು.
ಪ್ರತಿಷ್ಠಾನದ ರಾಜ್ಯಾಧ್ಯಕ್ಷೆ ಭಾರತೀಶಂಕರ್ ಮಾತನಾಡಿ, ಯಾವುದೇ ಸಂಘಟನೆ ಗಟ್ಟಿಯಾಗಲು ಅದರ ಪದಾಧಿಕಾರಿಗಳು ತiಗೆ ಸಿಕ್ಕ ಅಧಿಕಾರ ಎಂದು ಭಾವಿಸದೆ ಜವಾಬ್ದಾರಿ ಎಂದು ತಿಳಿದು ಕೆಲಸ ಮಾಡಬೇಕು. ಸದಸ್ಯರಿಂದಲೇ ಸಂಘನೆ ಗಟ್ಟಿಯಾಗುತ್ತದೆ. ನಮ್ಮಲ್ಲಿ ಭಿನ್ಮಮತ ಬಾರದ ರೀತಿಯಲ್ಲಿ ಪ್ರತಿಷ್ಠೆಯನ್ನು ಬದಿಗಿರಿಸಿ ಒಗ್ಗಟ್ಟಾಗಿ ಸಂಘಟನೆ ಬಲಪಡಿಸಬೇಕು ಎಂದರು.


ಸ್ವಯಂ ಉದ್ಯೋಗ ತರಬೇತಿ, ಪ್ರೋತ್ಸಾಹ, ಮತ್ತು ಮಾರುಕಟ್ಟೆ ಅನುಕೂಲ ಕಲ್ಪಿಸಲು ಮೊದಲ ಆದ್ಯತೆ ನೀಡಲು ಪ್ರತಿಷ್ಠಾನ ಬಯಸಿದೆ. ನಂತರ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಅರಿವು ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಮುಟ್ಟಿಸುವ ಕಾರ್ಯ ಪ್ರತಿಷ್ಠಾನ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷೆ ಮಹದೇವಮ್ಮ ಕೃಷ್ಣಯ್ಯ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಹಾಗೂ ಪ್ರಮುಖರಾದ ಶೋಭಾ ವೆಂಕಟರಮಣ, ಶಕುಂತಲಾ ಹೊನ್ನೇಗೌಡ, ಸುವರ್ಣಾ ಶಂಕರ್, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಆದಿಮೂರ್ತಿ, ಯುವ ವೇದಿಕೆ ಅಧ್ಯಕ್ಷ ಚೇತನ್, ಭಾರತೀ ರಾಮಕೃಷ್ಣ, ಲತಾ ಚಂದ್ರಶೇಖರ್, ಅಂಜು ಸುರೇಶ್ ಹಾಗೂ ರಾಜ್ಯ ಪದಾಧಿಕಾರಿಗಳು ಮತ್ತು ಸದಸ್ಯರ ಉಪಸ್ಥಿತರಿದ್ದರು

Exit mobile version