Site icon TUNGATARANGA

ಟ್ಯಾಕ್ಟರ್ ತಡೆದು ಎಂಪಿಎಂ ವಿರುದ್ದ ರೈತ ಸಂಘದ ವತಿಯಿಂದ ಪ್ರತಿಭಟನೆ

ಸಾಗರ : ತಾಳಗುಪ್ಪ ಭಾಗದ ಚೂರಿಕಟ್ಟೆ ಅರಣ್ಯ ಇಲಾಖೆಯ ನಡುತೋಪಿನಲ್ಲಿ ನೀಲಗಿರಿ ಅಕೇಶಿಯಾ ಗಿಡಗಳನ್ನು ನೆಟ್ಟು ಪರಿಸರಕ್ಕೆ ಮಾರಕವಾದ ಕೆಲಸ ಮಾಡುತ್ತಿರುವ ಎಂಪಿಎಂ ವಿರುದ್ದ ಗುರುವಾರ ರೈತ ಸಂಘದ ವತಿಯಿಂದ ಉಳುಮೆಗೆ ತಂದಿದ್ದ ಟ್ಯಾಕ್ಟರ್ ತಡೆದು ಪ್ರತಿಭಟನೆ ನಡೆಸಲಾಯಿತು.


ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೂರಲಕೆರೆ ಚಂದ್ರಶೇಖರ್ ಈ ಭಾಗದಲ್ಲಿ ಎಂಪಿಎಂ ಅಕೇಶಿಯಾ, ನೀಲಗಿರಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ. ನಮ್ಮ ಭಾಗದ ಸಹಜ ಅರಣ್ಯಗಳು ಇದರಿಂದ ನಾಶವಾಗುವ ಸಾಧ್ಯತೆ ಇದೆ.

ಈ ಭಾಗದ ರೈತರಿಗೆ ಸೊಪ್ಪು ಮತ್ತು ಜಾನುವಾರುಗಳಿಗೆ ಅಕೇಶಿಯಾ ಮತ್ತು ನೀಲಗಿರಿಯಿಂದ ಮೇವು ದೊರೆಯದಂತೆ ಆಗಿದೆ. ತಕ್ಷಣ ಅರಣ್ಯ ಇಲಾಖೆ ಸಹಜ ಅರಣ್ಯ ಬೆಳೆಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪರಿಸರವಾದಿ ಪೂರ್ಣಿಮಾ

ನವಿಲುಮನೆ ಮಾತನಾಡಿ ಈ ಭಾಗದ ಕೆರೆಕಟ್ಟೆಗಳು ಹೈಬ್ರಿಡ್ ತಳಿಯ ಹಾವಳಿಯಿಂದ ಬತ್ತಿ ಹೋಗಿದೆ. ರೈತರಿಗೆ ಅಸಹಜ ಅರಣ್ಯ ಶಾಪವಾಗುತ್ತಿದೆ. ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುವ ಸಸಿಗಳನ್ನು ನೆಡುವತ್ತ ಸರ್ಕಾರ ಅರಣ್ಯ ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.


ಪ್ರಕಾಶ್ ಗೂರಲುಕೆರೆ ಮಾತನಾಡಿದರು. ರಾಜೇಂದ್ರ ಗಾಲಿಮನೆ, ರಾಘವೇಂದ್ರ ಚೂರಿಕಟ್ಟೆ, ಶ್ರೀಕಾಂತ ಗುಡ್ಡೆಮನೆ, ಗಣಪತಿ, ಕನ್ನಮ್ಮ ಇನ್ನಿತರರು ಹಾಜರಿದ್ದರು.

Exit mobile version