Site icon TUNGATARANGA

ಗಾಂಜಾ ಸಾಗಾಣೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಪೋಲಿಸರು

ಸಾಗರ : ಇಲ್ಲಿನ ವರದಹಳ್ಳಿ ಸರ್ಕಲ್‌ನ ಸೌಪರ್ಣಿಕ ಹೋಟೆಲ್ ಹತ್ತಿರ ಅಬ್ಕಾರಿ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಗಾಂಜಾ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.


ಗಸ್ತಿನಲ್ಲಿದ್ದ ಅಬ್ಕಾರಿ ಇಲಾಖೆ ಸಿಬ್ಬಂದಿಗಳು ಸಾಗರ ರಾಮನಗರದ ಅಹ್ಮದ್ ಹುಸೇನ್ ಎಂಬಾತನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿ ೫೩ ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.

ಆರೋಪಿ ವಿರುದ್ದ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.


ದಾಳಿಯಲ್ಲಿ ಅಬ್ಕಾರಿ ನಿರೀಕ್ಷಕ ಸಂದೀಪ್ ಎಲ್.ಸಿ., ಉಪ ನಿರೀಕ್ಷಕ ಸಂತೋಷ್ ರಡ್ಡೇರ್, ವಿನ್ನಿ ಲೋಬೋ, ಸಿಬ್ಬಂದಿಗಳಾದ ಗುರುಮೂರ್ತಿ, ಅರುಣ್ ಜಿ.ಎಂ., ದೀಪಕ್ ಯು.ಪಿ., ಕನ್ನಯ್ಯ, ಮಹಾಬಲೇಶ್, ವಾಹನ ಚಾಲಕ ಗಣಪತಿ ಪಾಲ್ಗೊಂಡಿದ್ದರು.

Exit mobile version