Site icon TUNGATARANGA

ಮಕ್ಕಳು ಮೊಬೈಲ್ ದಾಸರಾಗುವುದನ್ನು ತಪ್ಪಿಸಿ|ಪೋಷಕರಿಗೆ ಐಪಿಎಸ್ ಅಧಿಕಾರಿ ಬಿಂದುಮಣಿ ಕರೆ

ಸಾಮಾಜಿಕ ಜಾಲತಾಣಗಳು ಆರಂಭ ವಾದ ಮೇಲೆ ಮಕ್ಕಳು ವ್ಯಸನಿಗಳಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಎಚ್ಚರವಹಿಸಬೇಕಾದ ಅವಶ್ಯತೆ ಇದೆ ಎಂದು ಐಪಿಎಸ್ ಅಧಿಕಾರಿ ಹಾಗೂ ವಿನೋಬನಗರ ಠಾಣೆಯ ಎಎಸ್‌ಪಿ ಬಿಂದುಮಣಿ ಹೇಳಿದರು

.
ಅವರು ಇಂದು ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವರಕ್ಷಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ಮಾಡುತ್ತಲೇ ಮಾತನಾಡಿದ ಅವರು, ಇತ್ತೀಚೆಗೆ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಇದರಿಂದ ಹೊರಬರಲು ಪೋಷಕರು ಮತ್ತು ಶಿಕ್ಷಕರು ಪ್ರಯತ್ನಿಸಬೇಕಾಗಿದೆ. ಮಕ್ಕಳ ಚಟುವಟಿಕೆಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದರು.


ಸಾಮಾಜಿಕ ಜಾಲತಾಣಗಳಲ್ಲಿ ೧೮ ವರ್ಷಗಳಿಗಿಂತ ಕೆಳಗಿನವರು ಅಕೌಂಟ್ ತೆರೆಯುವುದು ಕಾನೂನು ಬಾಹಿರವಾಗಿರು ತ್ತದೆ. ಮಕ್ಕಳು ಈ ರೀತಿ ಅಕೌಂಟ್ ತೆರೆದಿದ್ದರೆ ತಕ್ಷಣವೇ ಡಿಲೀಟ್ ಮಾಡಿ. ತೀರಾ ಅವಶ್ಯಕತೆಯಿದ್ದರೆ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪೋಷಕರ ಅಕೌಂಟ್‌ನಲ್ಲಿಯೇ ವೀಕ್ಷಿಸಬಹದಾಗಿದೆ. ಅದನ್ನು ಬಿಟ್ಟು ತಾವೇ ಅಕೌಂಟ್ ತೆರೆಯುವುದು ಅಪರಾಧ ಎಂದರು.


ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಹೊಸಬರ ಸ್ನೇಹ ಮಾಡಬೇಡಿ. ತಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಡಿ. ಲೊಕೇಶನ್‌ಗಳನ್ನು ಕಳಿಸಬೇಡಿ. ಕಿರಿಕಿರಿಯಾ ದರೆ ಅವರನ್ನು ಬ್ಲಾಕ್ ಮಾಡಿ ಅಥವಾ ಪೋಷಕರಿಗೆ ತಿಳಿಸಿ ಎಂದರು.


ಪ್ರಾಂಶುಪಾಲೆ ಸುನೀತಾದೇವಿ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರದೀಪ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Exit mobile version