ಶಿವಮೊಗ್ಗದಲ್ಲಿ ಫುಡ್ ಆನ್ ವಾಲ್ ಯೋಜನೆಯಡಿಯಲ್ಲಿ ೨ನೇ ಹೋಟೆಲ್ ಅನ್ನು ವಿನೋಬನಗರದ ಮೋರ್ ಬಳಿಯ ಸೌಂದರ್ಯ ವೆಜ್ ಹೋಟೆಲ್ ನಲ್ಲಿ ಇಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಉದ್ಘಾಟಿಸಿದರು.
ಹಸಿದವರಿಗಾಗಿ ಉಚಿತ ಊಟ ನೀಡುವ ಯೋಜನೆಯು ಇದಾಗಿದ್ದು, ವಿವಿಧ ಕೆಲಸ ಕಾರಣಗಳಿಗಾಗಿ ನಗರಕ್ಕೆ ಹಳ್ಳಿಗಳಿಂದ ಬರುವ ಎಷ್ಟೋ ಜನರು ಹಸಿ ವಿನಿಂದ ಬಳಲುತ್ತಿರುತ್ತಾರೆ. ದೂರದೂರಿ ನಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾ ರ್ಥಿಗಳು ಕೂಡ
ಹಣಕಾಸಿನ ತೊಂದರೆ ಯಿಂದ ಊಟದಿಂದ ವಂಚಿತರಾಗುತ್ತಾರೆ. ಕೆಲವು ವೃದ್ಧರು ಮನೆಯಲ್ಲಿ ಆಹಾರ ತಯಾರಿಸಲು ಅಸಮರ್ಥರಾಗಿರುತ್ತಾರೆ. ಇಂತಹವರಿಗೆ ಯೂನಿವರ್ಸಲ್ ನಾಲೆಡ್ಜ್ ಸಂಸ್ಥೆಯು ಇ-ಫಡ್ ಆನ್ ವಾಲ್ ಯೋಜನೆ ಹಮ್ಮಿಕೊಂಡಿದ್ದು, ಹಸಿದವರಿಗೆ ಇದು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ಸೌಂದರ್ಯ ಹೋಟೆಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ ೧೨ರಿಂದ ಸಂಜೆ ೪ರವರೆಗೆ ಸಂಸ್ಥೆಯ ವತಿಯಿಂದ ೧೫ ಟೋಕನ್‌ಗಳನ್ನು ಉಚಿತವಾಗಿ ಫುಡ್ ವಾಲ್‌ಗೆ ಅಂಟಿಸಿದ್ದು, ಊಟ ಬೇಕಾದ ವರು ಅದನ್ನು ಪಡೆದು ಉಚಿತ ಊಟ ಪಡೆಯಬಹುದಾಗಿದೆ.
ರಾಜ್ಯಾದ್ಯಂತ ಈಗಾಗಲೇ ಒಟ್ಟು ೧೧ ಹೋಟೆಲ್‌ಗಳು ಈ ಯೋಜನೆಯಡಿ ಭಾಗಿಯಾಗಿದ್ದು, ನಗರದಲ್ಲಿ ಎರಡು ಪ್ರಾರಂಭವಾಗಿದೆ. ಯೂನಿವರ್ಸಲ್ ನಾಲೆಡ್ಜ್ ಸಂಸ್ಥೆ ಹಲವು ಮಾನದಂಡಗಳ ಪರಿಶೀಲನೆ ಬಳಿಕ ಹೋಟೆಲ್‌ಗಳ ಆಯ್ಕೆ ಮಾಡಿ ಈ ಸೌಲಭ್ಯ ವನ್ನು ಹಸಿದವರಿಗೆ ನೀಡುತ್ತದೆ.
ಸಾರ್ವಜನಿಕರು ಕೂಡ ಇದರಲ್ಲಿ ಭಾಗವಹಿಸಬಹುದು. ತಮ್ಮ ಶಕ್ತ್ಯಾನುಸಾರ ಊಟಗಳನ್ನು ಪ್ರಾಯೋಜಿಸುವ ಮೂಲಕ ಹಸಿವುಮುಕ್ತ ಸಮಾಜ ನಿರ್ಮಾಣದಲ್ಲಿ ಭಾಗವಹಿಸಬಹುದಾಗಿದೆ. ಎಂದರು.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ hಣಣಠಿs:/uಟಿiveಡಿsಚಿಟ ಞಟಿoತಿಟ eಜge.iಟಿ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಸೌಂದರ್ಯ ಹೋಟೆಲ್‌ನ ಮಾಲೀಕರಾದ ಜಯಚಂದ್ರ ಹೆಬ್ಬಾರ್, ಯೂನಿವರ್ಸಲ್ ನಾಲೆಡ್ಜ್‌ನ ಪರವಾಗಿ ನಾಗರಾಜ್ ಶೆಟ್ಟರ್ ಉಪಸ್ಥಿತ ರಿದ್ದರು. ವಿವರಗಳಿಗೆ ಮೊ. ೯೪೪೮೧-೩೯೨೭೧ ಸಂಪರ್ಕಿಸಿ.