Site icon TUNGATARANGA

ನಾಳೆ ಶಿವಮೊಗ್ಗದಲ್ಲಿ ಎಲ್ಲೇಲಿ. ಏನೇನು..?


ಭದ್ರಾವತಿಯಲ್ಲಿ ರಕ್ತದಾನ ಶಿಬಿರ

ಶಿವಮೊಗ್ಗ: ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಪುರಲೆ ಹಾಗೂ ಮಾಜಿ ಸೈನಿಕರ ಸಂಘ ,ಭದ್ರಾವತಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ನ.8ರ ಭಾನುವಾರ ಬೆಳಿಗ್ಗೆ 10ಗಂಟೆಯಿಂದ ಭದ್ರಾವತಿಯ ಜನ್ನಾಪುರದ ಬಂಟರ ಭವನದಲ್ಲಿ ಏರ್ಪಡಿಸಿದೆ. ಆಸಕ್ತ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸುಬ್ಬಯ್ಯ ವೈದ್ಯಕೀಯ ಸಂಸ್ಥೆ ಕೋರಿದೆ.

ಕಸಾಪದಿಂದ ನುಡಿ ನಮನ-ಕವಿಗೋಷ್ಠಿ

ಶಿವಮೊಗ್ಗ: ಜಿಲ್ಲಾ ಕ್ನನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ| ಮಲ್ಲೇಶ್ ಹುಲ್ಲಮನಿರವರಿಗೆ ನುಡಿನಮನ ಮತ್ತು ಡಾ.ಜಿ.ಎಸ್.ಎಸ್ ದತ್ತಿ ಕಾರ್ಯಕ್ರಮ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ನ.8ರ ಭಾನುವಾರ ಬೆಳಿಗ್ಗೆ 11ಕ್ಕೆ ಗೋಪಾಳದ ಗೋಪಿಶೆಟ್ಟಿಕೊಪ್ಪ (ಚಾಲುಕ್ಯ ನಗರ)ದಲ್ಲಿರುವ ಸಾಹಿತ್ಯ ಭವನದಲ್ಲಿ ಏರ್ಪಡಿಸಿದೆ.
ಸಾಹಿತಿ ವಿಜಯಾ ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಧ್ಯಕ್ಷತೆ ವಹಿಸುವರು. ಖ್ಯಾತ ಶಸ್ತ್ರಚಿಕಿತ್ಸಾ ತಜ್ಞ ಡಾ| ಬಿರಾದಾರ್ ನುಡಿನಮನ ಸಲ್ಲಿಸಲಿದ್ದು, ಸ್ತ್ರೀರೋಗ ತಜ್ಞೆ ಡಾ| ಶಶಿಕಲಾ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಪ್ರಾಧ್ಯಾಪಕ ಕೆ. ಅಂಜನಪ್ಪ ದತ್ತಿ ಉಪನ್ಯಾಸ ನೀಡಲಿದ್ದು, ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾದ ಎಂ. ಎನ್. ಸುಂದರರಾಜ್, ರುದ್ರಮುನಿ ಎನ್ ಸಜ್ಜನ್ ಭಾಗವಹಿಸುವರು. ಗಣ್ಯರಿಂದ ವಚನ ಗಾಯನ ಜರುಗಲಿದೆ.

ಹಸರೀಕರಣ

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಉತ್ತಿಷ್ಟ ಭಾರತ, ಕ್ರಿಕೆಟ್ ಅಕಾಡೆಮಿ ಹಾಗೂ ಪರೋಪ ಕಾರಂ ತಂಡದ ಸಹಯೋಗದಲ್ಲಿ ಹಸರೀಕರಣ ಕಾರ್ಯಕ್ರಮ ನ.8ರ ಭಾನುವಾರ ಬೆಳಿಗ್ಗೆ 7ಕ್ಕೆ ಗೋಪಾಳದ ಗೋಪಿಶೆಟ್ಟಿಕೊಪ್ಪ (ಚಾಲುಕ್ಯ ನಗರ) ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಮ್ಮ ಶಂಕರನಾಯ್ಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಯು. ಶಂಕರ್, ಕೃಷಿ ಇಲಾಖೆ ಉಪನಿರ್ದೇಶಕ ಡಿ.ಎಂ. ಬಸವರಾಜ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎಸ್.ರಾಮಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಜಿಲ್ಲಾ ಕಸಾಪ ಉಪಾಧ್ಯಕ್ಷ ಕೆ. ಬಸವನಗೌಡ್ರು, ತಾಲ್ಲೂಕು ಕಸಾಪ ಕಾರ್ಯದರ್ಶಿ ಜಿ.ಎಸ್. ಅನಂತರವರು ಸಸಿ ನೆಡುವ ಮೂಲಕ ಕಾರ್ಯಕ್ರಮಕಕೆ ಚಾಲನೆ ನೀಡಲಿದ್ದಾರೆ.

Exit mobile version