Site icon TUNGATARANGA

ಶೈಕ್ಷಣಿಕ ಪ್ರಗತಿಯಿಂದ ಸಮುದಾಯದ ಸಮಗ್ರ ಪ್ರಗತಿ ಸಾಧ್ಯ: ಶಾಸಕ ಗೋಪಾಲಕೃಷ್ಣಬೇಳೂರು


ಸಾಗರಜುಲೈ,31

:ಶೈಕ್ಷಣಿಕ ಪ್ರಗತಿಯಿಂದ ಸಮುದಾಯದ ಸಮಗ್ರ ಪ್ರಗತಿ ಸಾಧ್ಯ,ಆದ್ದರಿಂದ ಪ್ರತಿಭಾ ಪುರಸ್ಕಾರಗಳಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಹೆಚ್ಚಿಸುವ ಜೊತೆಗೆ ಸ್ಪೂರ್ತಿದಾಯಕವಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣಬೇಳೂರು ಹೇಳಿದರು.
ಅವರು ಸಾಗರ ತಾಲ್ಲೂಕು ವಕ್ಕಲಿಗರ ಸಂಘದಿಂದ ಅಭಿನಂದನೇ ಸ್ವೀಕರಿಸಿ,ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ವಿತರಿಸಿ ಅಭಿನಂದಿಸಿ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಹಿಳೆಯರ ಕೊಡುಗೆ ಸಹಕಾರ ಸಮಾಜದಲ್ಲಿ ಹೆಚ್ಚಿರುತ್ತದೆ.ಮಹಿಳಾ ಜಾಗೃತಿಯಿಂದ ಸಮಾಜ ಸುಧಾರಣೆಯಾಗುತ್ತದೆ ಎಂದರು.


ಸಂಕಷ್ಟದಲ್ಲಿರುವವರಿಗೆ ನೊಂದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಕಾರ ನೀಡುವವರನ್ನು ಕಂಡರೇ ಅಭಿಮಾನ ಹಾಗೂ ಸ್ವತಃ ನಾನು ಅಂತಹ ಸಂತ್ರಸ್ತರುಗಳಿಗೆ ತನು-ಮನ-ದನ ಸಹಾಯವನ್ನು ಮಾಡುವುದರಲ್ಲಿಯೇ ಸಾಥ್ಕತೆಯನ್ನು ಕಾಣುತ್ತೇನೆ ಎಂದರು.
ವಕ್ಕಲಿಗರ ಸಮುದಾಯಭವನದಲ್ಲಿ ಮೇಲಿನ ಅಂತಸ್ತಿನಲ್ಲಿ ಶೈಕ್ಷಣಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತು ನೀಡುವ ಉದ್ದೇಶದಿಂದ ಮೀಸಲಿಡಬೇಕು ಎಂದು ಡಾ.ನಿರ್ಮಲಾನಂದ ಸ್ವಾಮಿಗಳು ಹೇಳಿದ್ದರು.ಅವರ ಆಶಯದಂತೆ ಮೇಲಿನ ಅಂತಸ್ತನ್ನು ವೀಕ್ಷಿಸಿದ್ದೇನೆ.ಅದರ ಕಾಮಗಾರಿಗೆ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.


ವಕ್ಕಲಿಗರ ಸಂಘದ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಗಳು ಕ್ರಿಯಾಶೀಲವಾಗಿರುವುದು ಆರೋಗ್ಯಕರ ಬೆಳವಣಿಗೆಯಾಗಿದ್ದು,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಕಾರಣ ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯದ ಪರಿಣಾಮ ದೇವಸ್ಥಾನಗಳು ಭರ್ತಿಯಾಗುತ್ತಿವೆ ಎಂದು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.


ಪ್ರತಿದಿನ ರಾಜ್ಯಾದ್ಯಂತ ೬೦ ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದು,ಇದುವರೆಗೂ ೨೧ ಕೋಟಿ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣವನ್ನು ಮಾಡಿದ್ದಾರೆ.ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸೇರುತ್ತದೆ.ಮಹಿಳಾ ಆರ್ಥಿಕ ಶಕ್ತಿ ಹೆಚ್ಚಿದಂತೆ ಸಂಸಾರದ ನಿರ್ವಹಣೆ ಸುಲಬವಾಗುತ್ತದೆ ಎಂದರು.


ಧರ್ಮಸ್ಥಳ ಗ್ರಾಮೀಣಾಬಿವೃದ್ದಿ ಯೋಜನೆ ಅನುಷ್ಠಾನಕ್ಕೆ ಬಂದ ಪರಿಣಾಮ ಮಹಿಳೆಯರು ಆರ್ಥಿಕ ಶಿಸ್ತು ಬ್ಯಾಂಕ್ ವಹಿವಾಟು ನಡೆಸುವ ಮೂಲಕ ಸ್ವಾವಲಂಬಿ ಜೀವನ ನಿರ್ವಹಿಸಲು ಸಹಕಾರಿಯಾಗಿತ್ತು.ಪ್ರಸ್ತುತ ಸರ್ಕಾರದ ಗ್ಯಾರಂಟಿಗಳು ಮಹಿಳಾ ಶಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಎಂದರು.
ಸಮಾಜಗಳು ಎಲ್ಲಾ ಬಿನ್ನಾಬಿಪ್ರಾಯಗಳನ್ನು ಬದಿಗೊತ್ತಿ ರಾಜಕೀಯ ಬೇದಗಳನ್ನು ಮರೆತು ಸಮಾಜದ ಸಂಘಟನೆ ಗಟ್ಟಿಗೊಳಿಸುವ ದಿಕ್ಕಿನಲ್ಲಿ ಸಾಂಘಿಕ ಶಕ್ತಿಯಿಂದ ಕೆಲಸಮಾಡಬೇಕು.ಸಂಘಟನೆ ವಿಚಾರದಲ್ಲಿ ಕೊಂಕಣಿ ಸಮಾಜ ಎಲ್ಲಾ ಸಮಾಜಗಳಿಗೂ ಮಾದರಿಯಾಗಿ ನಿಲ್ಲುತ್ತದೆ ಎನ್ನುವ ಮೂಲಕ ಸಂಘಟನೆಯಿಂದ ಎಲ್ಲವೂ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅಂದ ವಿದ್ಯಾರ್ಥಿನಿ ಕು.ಸ್ವಾತಿ ಪಡವಗೋಡು ಕಂಪ್ಯೂಟರ್ ಡಿಪ್ಲಮೊ ವಿದ್ಯಾರ್ಥಿನಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ವಿತರಿಸಿದರು.ವಿದ್ಯಾರ್ಥಿನಿಯ ಭಾಷಣಕ್ಕೆ ಸಭೆಯಲ್ಲಿ ಕರತಾಡನದ ಸದ್ದು ಮೊಳಗಿತು.
೧೦ನೇ ತರಗತಿ ಮತ್ತು ಪಿಯುಸಿ ವಿಭಾಗಗಲಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಕ್ಕಲಿಗ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳಿಗೆ ಸನ್ಮಾನಿಸಿ ಪುರಸ್ಕಾರ ವಿತರಿಸಿದರು.ವಕ್ಕಲಿಗ ಸಂಘದಿಂದ ಮತ್ತು ವಕ್ಕಲಿಗರ ಯುವ ಘಟಕದಿಂದ ಹಾಗೂ ಚುಂಚಾದ್ರಿ ಮಹಿಳಾ ಸಂಘಟನೆಗಳಿಂದ ಶಾಸಕ ಗೋಪಾಲಕೃಷ್ಣಬೇಳೂರು ಇವರಿಗೆ ಸನ್ಮಾನಿಸಿದರು.


ವೇದಿಕೆಯಲ್ಲಿ ವಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಟಿ.ಗುಂಡಪ್ಪಗೌಡರು ಅಧ್ಯಕ್ಷತೆವಹಿಸಿದ್ದರು.ವಕ್ಕಲಿಗರ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ್,ಸಾಗರ ತಾಲ್ಲೂಕು ಉಪಾಧ್ಯಕ್ಷ ವೆಂಕಟರಮಣ ಗೌಡರು,ಕಾರ್ಯದರ್ಶಿ ಬಸವರಾಜ್,ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷೆ ಭಾಗಿರಥಿ,ಯುವ ವೇದಿಕೆ ಅಧ್ಯಕ್ಷ ನವೀನ್,ಶಿವಮೊಗ್ಗದ ಸಾನ್ವಿ,ನಗರಸಭೆ ಸದಸ್ಯ ಗಣಪತಿಮಂಡಗಳಲೆ,ಮಧುಮಾಲತಿ,ರಮೇಶ್ ಎನ್,ಉಮೇಶ್‌ಗೌಡ,ಮಲ್ಲೇಗೌಡರು ಮೊದಲಾದವರು ಇದ್ದರು.

Exit mobile version