Site icon TUNGATARANGA

ಕ್ರೈಂ ಮುಕ್ತ ಸಮಾಜ ನಿರ್ಮಾಣ ಮಾಡಲು ಪೊಲೀಸರ ಜೊತೆ ಸಾರ್ವಜನಿಕರು ಕೈ ಜೋಡಿಸಿ:ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್

*ಸಾರ್ವಜನಿಕರು ಪೊಲೀಸರ ಜೊತೆ ಕೈ ಜೋಡಿಸಿದರೆ, ಕ್ರೈಂ ಮುಕ್ತ ಸಮಾಜ ನಿರ್ಮಾಣ ಮಾಡಲು ನೆರವಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನಾಗರೀಕರಿಗೆ ಕಿವಿ ಮಾತು ಹೇಳಿದ್ದಾರೆ. 

ಭಾವಸಾರ ವಿಜನ್ ಇಂಡಿಯಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪೊಲೀಸರೊಂದಿಗೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕಿದ್ದು,

ಈ ನಿಟ್ಟಿನಲ್ಲಿ ಎಲ್ಲಿಯೇ ಏನೇ ಕೆಟ್ಟ ಘಟನೆಗಳು ನಡೆದರೆ, ಆಥವಾ ನಡೆಯುವ ಲಕ್ಷಣಗಳು ಕಂಡು ಬಂದರೆ, ನಮಗೆ ತಿಳಿಸಿ ಎಂದು ಕರೆ ನೀಡಿದ್ದಾರೆ. 

ಸಾರ್ವಜನಿಕರಿಗೆ ತೊಂದರೆಯುಂಟಾಗುವ ಘಟನೆಗಳ ಬಗ್ಗೆ ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿದರೆ, ನಾವು ಮುಂದಾಗಬಹುದಾದ ತೊಂದರೆಗಳನ್ನು ತಡೆಯಲು ಸಾಧ್ಯವಾಗುತ್ತದೆ. 

ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಸಾರ್ವಜನಿಕರು ಇದ್ದರೆ, ಅದು ಸಾಧ್ಯವಿಲ್ಲ.  ನಾಗರೀಕರು ಕೂಡ, ಉತ್ತಮ ಸಮಾಜ ಕಟ್ಟುವಲ್ಲಿ ತಮ್ಮ ಪಾತ್ರ ಅರಿತು, ನಮಗೆ ಸ್ಪಂಧಿಸಬೇಕು ಎಂದರು.  ಪೊಲೀಸರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.  ಪ್ರವಾಹ ಬಂದರೂ, ಎಲ್ಲೇ ಏನೇ ಕೆಟ್ಟ ಘಟನೆಗಳು ನಡೆದರೂ, ಅಪಘಾತವಾದರೂ,

ಆತ್ಮಹತ್ಯೆಗಳಾದರೂ, ಮೆರವಣಿಗೆ ಬಂದೋಬಸ್ತ್ ಹೀಗೆ ಅನೇಕ ಕಾರಣಗಳಿಗೆ ಪೊಲೀಸರು ತೊಡಗಿಸಿಕೊಳ್ಳಬೇಕಿರುತ್ತದೆ.  ಇದನ್ನು ಮನಗಂಡು ಸಾರ್ವಜನಿಕರು ಕೂಡ ತಮ್ಮ ಕೆಲಸದ ಸಮಯದ ಇಡೀ ದಿನದಲ್ಲಿ ಹತ್ತು ನಿಮಿಷಗಳ ಕಾಲ ಮಾತ್ರ ಇದಕ್ಕಾಗಿ ಮೀಸಲಿಟ್ಟರೆ, ಕ್ರೈಂಗಳು ತಡೆಯಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.  ಈಗಾಗಲೇ, ಗಾಂಧಿ ಬಜಾರ್ ಟ್ರಾಫಿಕ್ ಬಗ್ಗೆ ಗಮನಿಸಲಾಗಿದ್ದು, ಇಲ್ಲಿ ನಿಲ್ಲುತ್ತಿದ್ದ ಕೈಗಾಡಿಗಳು, ಫುಟ್ ಪಾತ್ ತೆರವು ಮಾಡಿಸಲಾಗಿತ್ತು.  ಮತ್ತೆ ಇದು ಮುಂದುವರೆಯಲಿದ್ದು, ಸಾರ್ವಜನಿಕರು ನೆಮ್ಮದಿಯಿಂದಿರಬೇಕೆಂಬ ಪ್ರಯತ್ನ ನಮ್ಮದಾಗಿದ್ದು, ಇದಕ್ಕೆ ನೀವು ಕೈ ಜೋಡಿಸಿದರೆ, ಮತ್ತಷ್ಟು ಕೆಲಸ ಮಾಡಲು ನಮಗೆ ಸಾಧ್ಯವಾಗಲಿದೆ ಎಂದರು.

*ಇನ್ನು ಕಾರ್ಯಕ್ರಮದಲ್ಲಿ ಶಿವಮೊಗ್ಗದಲ್ಲಿ ಜೀವರಕ್ಷಕ-ಆಪತ್ಫಾಂಧವರಾಗಿರುವ ತಿಪ್ಪೇಸ್ವಾಮಿ (ಅಂಬ್ಯುಲೆನ್ಸ್ ರಾಜು) ಅವರಿಗೆ ಸೇವಾರತ್ನ ಪ್ರಶಸ್ತಿ ಪುರಸ್ಕರಿಸಿ ಗೌರವಿಸಲಾಯಿತು.  ಎಸ್.ಪಿ. ಮಿಥುನ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

*ಈ ಸಂದರ್ಭದಲ್ಲಿ ಬಿವಿಐ ಕಾರ್ಯದರ್ಶಿ ಸಚಿನ್ ಬೇದ್ರೆ, ಉಪಾಧ್ಯಕ್ಷರಾದ ಸ್ವಪ್ನ ಹರೀಶ್, ಮಹಿಳಾ ಕಲ್ಯಾಣ ನಿರ್ದೇಶಕಿ ಮಮತಾ ಕಮಲಾಕರ್, ಮಕ್ಕಳ ಕಲ್ಯಾಣ ನಿರ್ದೇಶಕಿ ಸ್ವಪ್ನ, ವಾಣಿ ಶಿವಕುಮಾರ್, ಕಿರಣ್, ಕೀರ್ತಿ ಸೇರಿದಂತೆ, ಮತ್ತಿರರು ಉಪಸ್ಥಿತರಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾಕರ್ ವಂಡಕರ್ ವಹಿಸಿದ್ದರು.*

Exit mobile version