Site icon TUNGATARANGA

ಭದ್ರಾವತಿಯಲ್ಲಿ ಎಫ್ ಎಂ ರೇಡಿಯೋ ಆರಂಭಿಸಲು ಸಂಸದ ರಾಘವೇಂದ್ರರಿಂದ ಪ್ರಸಾರ ಭಾರತಿ ಸಿಇಓಗೆ ಮನವಿ


ನವದೆಹಲಿ,ಜು.28:
ಇಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕರಾದ ವರುಣ್ ದ್ವಿವೇದಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಭದ್ರಾವತಿಯ ಎಫ್ಎಂ ರೇಡಿಯೋ ಸ್ಥಾಪನೆಗೆ ವಿನಂತಿಸಿದರು.


ಈ ಕಾರ್ಯಕ್ಕೆ ಸಂಬಂಧಿಸಿದ ಉಳಿದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿಕೊಡಬೇಕೆಂದು ಅವರು ಕೋರಿಕೊಂಡರು.
ವರುಣ್ ದಿಗ್ವೇದಿ ಅವರು ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೆ ಕಾಮಗಾರಿ ಮುಗಿಸುವುದಾಗಿ ರಾಘವೇಂದ್ರ ಅವರಿಗೆ ಬರವಸೆ ನೀಡಿದರು.

Exit mobile version