Site icon TUNGATARANGA

ಐನಾತಿ ಕಳ್ಳನೊಬ್ಬ ನಕಲಿ ಜೆಸಿಬಿ ಬಳಸಿ ಎಟಿಎಂ ಯಂತ್ರವನ್ನೆ ಕಳ್ಳತನಕ್ಕೆ ಸ್ಕೇಚ್‌ಹಾಕಿದ ಘಟನೆ

ಶಿವಮೊಗ್ಗ: ಐನಾತಿ ಕಳ್ಳನೊಬ್ಬ ಜೆಸಿಬಿ ಬಳಸಿ ಎಟಿಎಂ ಯಂತ್ರವನ್ನೇ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿದ ಘಟನೆ ನಿನ್ನೆ ತಡರಾತ್ರಿ ವಿನೋಬನಗರದ ನೂರಡಿ ರಸ್ತೆಯಲ್ಲಿ ನಡೆದಿದೆ.


ವಿನೋಬನಗರದ ಮುಖ್ಯರಸ್ತೆಯಲ್ಲಿರುವ ಶಿವಾಲಯದ ಬಳಿಯ ಪೆಟ್ರೋಲ್ ಬಂಕ್ ಪಕ್ಕದ ಕಟ್ಟಡದಲ್ಲಿರುವ ಆಕ್ಸಿಸ್ ಬ್ಯಾಂಕಿಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ.


ರಸ್ತೆಯ ದುರಸ್ತಿಯ ಕಾರಣದಿಂದ ಕೆಲವು ದಿನಗಳಿಂದ ಪೆಟ್ರೋಲ್ ಬಂಕ್ ಸಮೀಪ ಜೆಸಿಬಿ ನಿಲ್ಲಿಸಲಾಗಿತ್ತು. ಕಳ್ಳ ನಕಲಿ ಕೀ ಬಳಸಿ ಜೆಸಿಬಿ ಚಾಲೂ ಮಾಡಿ ನಂತರ ಎಟಿಎಂ ಯಂತ್ರ ಕದ್ದೊಯ್ಯುವ ಯತ್ನ ನಡೆಸಿದ್ದಾನೆ. ಆ ಸಮಯದಲ್ಲಿ ಸಂಚಾರಿ ಠಾಣೆ ಸಿಪಿಐ

ಸಂತೋಷ್ ಕುಮಾರ್‌ರವರ ಗಸ್ತು ವಾಹನ ಆಗಮಿಸಿದ್ದು, ತಡರಾತ್ರಿಯಲ್ಲಿ ನಡೆಯುತ್ತಿರುವ ಜೆಸಿಬಿ ಕಾರ್ಯಾಚರಣೆ ಗಮನಿಸಿ ಅನುಮಾನದ ಮೇರೆಗೆ ಸಂತೋಷ್‌ಕುಮಾರ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಳ್ಳ ಜೆಸಿಬಿ ಯಂತ್ರ ಬಿಟ್ಟು ಪರಾರಿಯಾಗಿದ್ದಾನೆ.


ಕಳ್ಳ ಜೆಸಿಬಿ ಸಹಾಯದಿಂದ ಎಟಿಎಂ ಕಳ್ಳತನ ಮಾಡುವ ವೇಳೆಯಲ್ಲಿ ಕಟ್ಟಡದ ಮೇಲ್ಭಾಗ ಸಂಪೂರ್ಣ ಹಾನಿಗೊಳಗಾಗಿದೆ. ಎಟಿಎಂ ಕೇಂದ್ರಕ್ಕೆ ಸೆಕ್ಯುರಿಟಿ ನೇಮಿಸಿಯೇ ಇಲ್ಲ. ಕೇಂದ್ರದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಕಳವು ಯತ್ನದ ದೃಶ್ಯ ಸೆರೆಯಾಗಿದ್ದು, ವಿನೋಬನಗರ ಠಾಣೆ ಪೊಲೀಸರು ಘಟನಾ ಸ್ಥಳದ ಪರಿಶೀಲನೆ ಮಾಡಿ ಸದರಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Exit mobile version