Site icon TUNGATARANGA

“ಬಿಎಲ್‌ಓ” ಕೆಲಸದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಶಿಕ್ಷಕರ ಸಂಘದಿಂದ ಮನವಿ

ಸಾಗರ : ಬಿಎಲ್‌ಓ ಕೆಲಸದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ತಾಲ್ಲೂಕಿನಲ್ಲಿ ೩೦೦ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಬಹುತೇಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಹಾಗೂ ನಿಯೋಜನೆ ಮೇಲೆ ಶಿಕ್ಷಕರು ಪಾಠಪ್ರವಚನ ನಡೆಸಿಕೊಂಡು ಹೋಗುತ್ತಿದ್ದಾರೆ. ಇಷ್ಟಾಗ್ಯೂ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗೆಹರಿದಿಲ್ಲ. ಈ ನಡುವೆ ವಿವಿಧ ಶಾಲೆಗಳಿಂದ ಶಿಕ್ಷಕರನ್ನು ಚುನಾವಣಾ ಕೆಲಸಕ್ಕೆ ಬಿಎಲ್‌ಓ ಆಗಿ ನಿಯೋಜನೆ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.


ಸಾಕಷ್ಟು ಶಿಕ್ಷಕರನ್ನು ಬಿಎಲ್‌ಓ ಆಗಿ ನಿಯೋಜನೆ ಮಾಡಿರುವುದರಿಂದ ಶಾಲೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳಿಗೆ ಕಲಿಸಲು ತೊಡಕುಂಟಾಗುತ್ತಿದೆ. ಆದ್ದರಿಂದ ಬಿಎಲ್‌ಓ ಆಗಿ

ನಿಯೋಜನೆ ಮಾಡಿರುವ ಶಿಕ್ಷಕರನ್ನು ಬಿಡುಗಡೆಗೊಳಿಸಿ ಮಕ್ಕಳಿಗೆ ಪಾಠಪ್ರವಚನ ಮಾಡಲು ಅವಕಾಶ ಕಲ್ಪಿಸಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.


ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಮೂರ್ತಿ ಎಂ.ವೈ., ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಾಲತೇಶ್, ಪ್ರಮುಖರಾದ ಮನೋಹರಪ್ಪ ಡಿ., ಸತ್ಯನಾರಾಯಣ ಖಂಡಿಕಾ, ರಾಜಶೇಖರ ಶೆಟ್ಟಿ, ಪ್ರಭು ಇ., ಗವಿಯಪ್ಪ ಎಲ್.ಟಿ. ಗಣೇಶ್ ಪೂಜಾರಿ, ಚಂದ್ರಪ್ಪ, ಸತೀಶ್ ನಾಯ್ಕ್ ಇನ್ನಿತರರು ಹಾಜರಿದ್ದರು

Exit mobile version