Site icon TUNGATARANGA

ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಅವಸರ ಪಡಬೇಕಾಗಿಲ್ಲ: ಕಾಂಗ್ರೆಸ್ ಯುವ ಮುಖಂಡ ಹೆಚ್.ಸಿ. ಯೋಗೇಶ್

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಯಾವುದೇ ಕೊನೆಯ ದಿನಾಂಕ ಇಲ್ಲ. ಇದು ನಿರಂತರ ಪ್ರಕ್ರಿಯೆ. ಮಹಿಳೆಯರು ಅವಸರ ಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಹೆಚ್.ಸಿ. ಯೋಗೇಶ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತರಲು ಸರ್ಕಾರ ಸಿದ್ದವಾಗಿದೆ. ಹಾಗೆಯೇ ಬಹು ಮುಖ್ಯವಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅರ್ಜಿ ಸ್ವೀಕಾರ ಮಾಡುವ ಸೇವಾ ಕೇಂದ್ರಗಳಲ್ಲಿ ನೂಕು ನುಗ್ಗಲಾಗುತ್ತಿದೆ. ಹಲವು ತೊಂದರೆಗಳು ಉಂಟಾಗಿವೆ. ಇವುಗಳನ್ನು ನಿವಾರಿಸಲು ಈಗಾಗಲೇ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.


ಶಿವಮೊಗ್ಗದಲ್ಲಿ ಪ್ರಮುಖವಾಗಿ ಮೂರು ಸೇವಾ ಕೇಂದ್ರಗಳಿವೆ. ಸೂಡಾ ಕಾಂಪ್ಲೆಕ್ಸ್, ಬಸ್‌ಸ್ಟ್ಯಾಂಡ್, ದ್ರೌಪದಮ್ಮ ಸರ್ಕಲ್ ಇವು ಅಧಿಕೃತವಾಗಿವೆ. ಆದರೆ ಕೆಲವರು ಈ ಅಧಿಕೃತ ಕೇಂದ್ರಗಳಿಂದ ಲಾಗಿನ್ ಪಡೆದುಕೊಂಡು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಅಪರಾಧವಾಗುತ್ತದೆ.

ಇದರ ಜೊತೆಗೆ ಪ್ರತಿಯೊಬ್ಬರ ಹತ್ತಿರ ೫೦ರೂ. ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಇದು ಕೂಡ ಅಪರಾಧ. ಯಾರೂ ಕೂಡ ಹಣ ನೀಡಬಾರದು. ಇದು ಉಚಿತವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ವಿಶ್ವನಾಥ ಕಾಶಿ, ಶಮೀರ್ ಖಾನ್ ಇದ್ದರು.

Exit mobile version