Site icon TUNGATARANGA

ಹೊಸನಗರ | ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ‘ಮಡ್ರಾಸ್ ಐ’ ಸೋಂಕು


ಹೊಸನಗರ; ತಾಲೂಕಿನಲ್ಲಿ ಕಳೆದ ಒಂದು ವಾರದ ಈಚೆಗೆ ಕಣ್ಣು ಬೇನೆ ಪ್ರಕರಣಗಳು ಕಾಣಿಸಿಕೊಳ್ಳತೊಡಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡುಬರುವ ಈ ವೈರಲ್‌ಅಥವಾ ಬ್ಯಾಕ್ಟೀರಿಯಾದಿಂದಉಂಟಾಗುವ ಸೋಂಕು ಆಡುಭಾಷೆಯಲ್ಲಿ ಮಡ್ರಾಸ್ ಐ ಎಂದುಕರೆಯುತ್ತಾರೆ. ತಾಲೂಕಿನ ಬಹುತೇಕ ಕಡೆಗಳಲ್ಲಿ ಕಣ್ಣುಬೇನೆತೀವ್ರಗತಿಯಲ್ಲಿ ಹರಡುತ್ತಿದೆ.

ವಯಸ್ಕರಲ್ಲಿ ಸಹಾ ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದರೂ, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪೋಷಕರಆತಂಕಕ್ಕೆಕಾರಣವಾಗಿದೆ.


ಬಹುಬೇಗ ಹರಡುವ ಈ ಸೋಂಕು ಶಾಲೆಯಲ್ಲಿ ಮಕ್ಕಳಿಂದ ಮಕ್ಕಳಿಗೆ ಹಬ್ಬುತ್ತಿದೆ. ಮುಂಜಾಗ್ರತಾಕ್ರಮವಾಗಿ ಕೆಲ ಖಾಸಗಿ ಶಾಲೆಗಳಲ್ಲಿ ಜು.೨೬ರ ವರೆಗೆರಜೆ ಘೋಷಿಸಿದ್ದಾರೆ. ಕೆಲವು ಶಾಲೆಗಳಲ್ಲಿ ಬೇನೆಯ ಲಕ್ಷಣಗಳು ಕಂಡು ಬಂದಲ್ಲಿಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಿದ್ದಾರೆ.

ಆದಾಗ್ಯೂಗ್ರಾಮೀಣ ಪ್ರದೇಶದಲ್ಲಿರೋಗ ಹರಡುವಿಕೆಯಕುರಿತು ಸರಿಯಾಗಿ ಮಾಹಿತಿಇಲ್ಲದಿರುವುದುರೋಗ ವ್ಯಾಪಿಸಲು ಕಾರಣವಾಗಿದೆ. ಕಣ್ಣುಬೇನೆ ಲಕ್ಷಣಗಳು ಕಂಡುಬಂದ ರೋಗಿಗಳು ಮನೆಯಲ್ಲಿಯೇಇದ್ದು ವಿಶ್ರಾಂತಿ ತೆಗೆದುಕೊಳ್ಳುವ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವುದುಒಬ್ಬರಿಂದಇನ್ನೊಬ್ಬರಿಗೆ ಸೋಂಕು ಹರಡಲುಕಾರಣವಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವಕಾರ‍್ಯಆರೋಗ್ಯಇಲಾಖೆಯಿಂದಆಗಬೇಕಿದೆಎನ್ನವಅಭಿಪ್ರಾಯ ಕೇಳಿಬಂದಿದೆ.

Exit mobile version