Site icon TUNGATARANGA

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಬಿರುಸು, ಆದರೆ ಇನ್ನೂ ಸಾಲದು ನಮ್ಮ ಮಲೆನಾಡಿನ ನೆಲಜಗತ್ತಿಗೆ… ಯಾಕೆ ಗೊತ್ತಾ ಇವತ್ತಿನ ಸಮಗ್ರ ಮಾಹಿತಿ ಓದಿ

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕು | ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ | ಮೈದುಂಬಿದ ಜೋಗ ನೋಡಲು ಪ್ರವಾಸಿಗರ ನೂಕುನುಗ್ಗಲು | ಹೊಸನಗರ ೧೨೩.೫೦ ಮಿಮಿ. ಮಳೆ | ಜಲಪಾತ ವೀಕ್ಷಿಸುತ್ತಿದ್ದ ಭದ್ರಾವತಿ ಯುವಕ ಕಾಲುಜಾರಿ ಬಿದ್ದು ನೀರು ಪಾಲು


ಶಿವಮೊಗ್ಗ, ಜು.೨೩:
ಜಿಲ್ಲೆಯಲ್ಲಿ ಕಳೆದ ಮೂರು ದಿನಗ ಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಅದರಲ್ಲೂ ಭತ್ತದ ಸಸಿಮಡಿ, ನಾಟಿಯತ್ತ ರೈತರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ೭೭೬೪೦ ಹೆಕ್ಟೇರ್ ಭತ್ತದ ಭಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ೯೭೩೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಭಿತ್ತನೆಯಾಗಿದೆ ಎಂಬುದು ಕೃಷಿ ಅಧಿಕಾರಿಗಳ ಮಾಹಿತಿ.
ಜೂನ್ ತಿಂಗಳಲ್ಲಿ ಅಗತ್ಯ ಮಳೆ ಸುರಿ ಯದೇ ರೈತರಲ್ಲಿ ಆತಂಕ ಎದುರಾಗಿತ್ತು. ಆದರೆ ಇದೀಗ ತಾಲ್ಲೂಕಿನಾದ್ಯಂತ ಪುನರ್ವಸು ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ ಹಾಗೂ ಪ್ರಮುಖ ಜಲಾಶಯಗಳು, ಕೆರೆಗಳು, ಹಳ್ಳಕೊಳ್ಳಗಳಲ್ಲಿ ಏರಿಕೆಯಾಗಿದ್ದು ಮೈದುಂಬಿಕೊಂಡಿವೆ.
ಶಿವಮೊಗ್ಗ ನಗರದಲ್ಲಿ ಹಾದು ಹೋಗುವ ತುಂಗಾ ನದಿಯನ್ನು ನೋಡಲು ಸಾವಿರಾರು ಜನರು ಆಗಮಿಸಿ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂದಿತು. ಇನ್ನೊಂದೆಡೆ ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ನೋಡಲು ಸಾವಿರಾರು ಪ್ರವಾಸಿಗರ ಆಗಮಿಸಿರುವ ಕಾರಣ ಜೋಗದಲ್ಲಿ ನೂಕುನುಗ್ಗಲು ಸಹ ನಡೆದಿರುವ ಘಟನೆ ವರದಿಯಾಗಿದೆ.


ರೈತರು ಸಾವಿರಾರು ಹಣ ಖರ್ಚು ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಜುಲೈ ಎರಡನೆ ವಾರ ಕಳೆದರೂ ಮಳೆ ಹದವಾಗಿ ಬೀಳದ ಪರಿಣಾಮ ರೈತ ಸಮುದಾಯ ಆತಂಕಕ್ಕೆ ಒಳಗಾಗಿತ್ತು. ಕಳೆದ ಒಂದು ವಾರದಿಂದ ಮಳೆ ವಾತಾವರಣ ಇದ್ದು, ಮೂರು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿ, ನದಿಗಳಲ್ಲಿ ನೀರು ಹರಿಯುತ್ತಿದೆ.
ಕೆರೆಗಳು ತುಂಬುತ್ತಿದ್ದು, ಕೆಲವು ಭಾಗಗಳಲ್ಲಿ ಭತ್ತ ನಾಟಿ ಕೆಲಸ ನಡೆಯುತ್ತಿದೆ. ಬಹುತೇಕ ರೈತರು ಎರಡು ದಿನದಿಂದ ಸಸಿಬೀಜಗಳನ್ನು (ಮೊಳಕೆ ಕಟ್ಟಿದ) ಮಡಿಗಳಲ್ಲಿ ಹಾಕಿದ್ದಾರೆ. ೨೦ ದಿನದಲ್ಲಿ ಸಸಿಗಳು ದೊಡ್ಡದಾದ ಮೇಲೆ ಹೊಲದಲ್ಲಿ ನಾಟಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೫೩೮.೧೦ ಮಿಮಿ ಮಳೆಯಾಗಿದ್ದು, ಸರಾಸರಿ ೭೬.೮೭ ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ ೬೮೭.೮೭ ಮಿಮಿ ಇದ್ದು, ಇದುವರೆಗೆ ಸರಾಸರಿ ೫೭೦.೮೯ ಮಿಮಿ ಮಳೆ ದಾಖಲಾ ಗಿದೆ. ಶಿವಮೊಗ್ಗ ೪೮.೨೦ ಮಿಮಿ., ಭದ್ರಾವತಿ ೩೨.೨೦ ಮಿಮಿ., ತೀರ್ಥಹಳ್ಳಿ ೧೦೩.೯೦ ಮಿಮಿ., ಸಾಗರ ೧೦೪.೫೦ ಮಿಮಿ., ಶಿಕಾರಿಪುರ ೫೩.೩೦ ಮಿಮಿ., ಸೊರಬ ೭೨.೫೦ ಮಿಮಿ. ಹಾಗೂ ಹೊಸನಗರ ೧೨೩.೫೦ ಮಿಮಿ. ಮಳೆಯಾಗಿದೆ.

ವಿವರಣೆ/ ಅನಾಹುತ ಆಕಸ್ಮಿಕಗಳಿಲ್ಲಿವೆ


ಭದ್ರಾವತಿ ಯುವಕ ನೀರು ಪಾಲು
ಕುಂದಾಪುರ, ಜು.೨೩: ದುಮ್ಮಿಕ್ಕಿ ಹರಿಯುತ್ತಿದ್ದ ಜಲಪಾತವನ್ನು ವೀಕ್ಷಿಸುತ್ತಾ ನಿಂತಿದ್ದ ಭದ್ರಾವತಿ ಮೂಲದ ಯುವನೋರ್ವ ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಬೈಂದೂರು ತಾಲೂಕಿನ ಕೊಲ್ಲೂರು ಸಮೀಪವಿರುವ ಅರಿಶಿನಗುಂಡಿ ಜಲಪಾತದಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು ಭದ್ರಾವತಿ ಮೂಲದ ಶರತ್ ಕುಮಾರ್(೨೩) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ಕಾರಿನಲ್ಲಿ ಕೊಲ್ಲೂರಿಗೆ ಬಂದಿದ್ದ ಈತ ಜಲಪಾತ ವೀಕ್ಷಷಣೆಗೆ ತೆರಳಿದ್ದಾನೆ. ಬಂಡೆಕಲ್ಲಿನ ಮೇಲೆ ನಿಂತು ಜಲಪಾತ ವೀಕ್ಷಷಣೆ ಮಾಡುತ್ತಿದ್ದ ವೇಳೆಯಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದಾನೆ.


ಸಿಮೆಂಟ್ ಗೋದಾಮು, ಕಾರ್ ಶೆಡ್‌ಗೆ ಹಾನಿ
ಸೊರಬ ಪಟ್ಟಣದ ಆನೆಮುಡಿಕೆ ರಸ್ತೆಯಲ್ಲಿ ಬಿರುಸಿನ ಗಾಳಿ ಮಳೆಗೆ ತೆಂಗಿನ ಮರವೊಂದು ಉರುಳಿ ಬಿದ್ದು, ಸಿಮೆಂಟ್ ಗೋದಾಮು ಹಾಗೂ ಕಾರ್ ಶೆಡ್ ಗೆ ಹಾನಿಯಾಗಿದೆ.
ಕಾಕಡೆ ಕುಟುಂಬಸ್ಥರ ಮನೆಯ ಹಿಂಭಾಗದ್ದ ಬೃಹತ್ ಗಾತ್ರದ ತೆಂಗಿನ ಮರವೊಂದು ಇಂದು ಬೆಳಗಿನ ಜಾವ ಉರುಳಿ ಬಿದ್ದಿದೆ. ಪರಿಣಾಮ ಗೋದಾಮಿನಲ್ಲಿದ್ದ ಶ್ರೀ ರೇಣುಕಾಂಬ ಟ್ರೇಡರ್ಸ್ ನ ತೇಜಪ್ಪ ಅವರಿಗೆ ಸೇರಿದ ಸುಮಾರು ೫೦ ಚೀಲ ಸಿಮೆಂಟ್ ಮಳೆ ನೀರಿಗೆ ಹಾನಿಯಾಗಿದ್ದು, ಗೋದಾಮು ಸಹ ಜಖಂ ಆಗಿದೆ.
ವಿಶ್ವನಾಥ ಎಂಬುವವರ ವಾಸದ ಮನೆ ಹಿಂಭಾಗದ ಕಾರು ಶೆಡ್ ಮೇಲೆ ಮರ ಬಿದ್ಧ ಪರಿಣಾಮ ಶೆಡ್ ನಲ್ಲಿದ್ದ ಕಾರು ಸೇರಿದಂತೆ ಗೋದಾಮಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಮಳೆ ಮುಂದುವರೆದರೆ ರಜೆ ಘೋಷಣೆ
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಬಿಡದೇ ಮಳೆ ಸುರಿಯತ್ತಿದೆ. ಅದ್ದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ.
ಇಂದು ಸಹ ಮಳೆ ಮುಂದುವರೆದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತುಂಗಾ ಡ್ಯಾಂನಿಂದ ೬೭ ಸಾವಿರ ಕ್ಯೂಸೆಕ್ ನೀರು ಬಿಡುಗಡೆ


ಶಿವಮೊಗ್ಗ, ಜು. ೨೪:
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರೆದಿರುವುದರಿಂದ, ತುಂಗಾ ಜಲಾಶಯದ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರ ಲಾರಂಭಿಸಿದ್ದು, ಇಂದು ಮಧ್ಯಾಹ್ನದ ಮಾಹಿತಿ ಅನುಸಾರ, ಡ್ಯಾಂಗೆ ೬೭,೨೭೫ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಈಗಾ ಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿ ರುವುದರಿಂದ ಒಳ ಹರಿವಿನಷ್ಟೆ ನೀರನ್ನು ಡ್ಯಾಂನಿಂದ ಹೊರ ಬಿಡಲಾಗಿದೆ.
ಕುಸಿದ ಜೈಲಿನ ಹೊರ ಗೋಡೆ
ಸಾಗರ: ಸತತವಾಗಿ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ನಗರದ ಎಸ್‌ಆರ್‌ಎಸ್ ಮಿಲ್ ರಸ್ತೆಯಲ್ಲಿರುವ ಜೈಲಿನ ಹೊರಭಾಗದ ಗೋಡೆ ಎರಡು ಬಾರಿ ಕುಸಿದಿರುವ ಘಟನೆ ನಡೆದಿದೆ. ಮಳೆಯ ಆರ್ಭಟಕ್ಕೆ ಬೆಳಗ್ಗೆ ೧೧ ರ ಸುಮಾರಿಗೆ ೩೦ ಅಡಿಯಷ್ಟು ಗೋಡೆ ಕುಸಿದಿದ್ದರೆ, ಮತ್ತೊಮ್ಮೆ ರಾತ್ರಿ ೮ ಗಂಟೆಯ ವೇಳೆಗೆ ೧೫ ಅಡಿ ಅಗಲದಷ್ಟು ಜಾಗದ ಧರೆಗೆ ಉರುಳಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ ಎಂದು ಸಾಗರ ಜೈಲಿನ ಎಎಸ್‌ಐ ಉಮೇಶ್ ಹೆಬ್ಬಳ್ಳಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಗರಸಭೆ ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳು ಭೇಟಿ ನೀಡಿದ್ದರು.
ಇದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಸೂಚಿಸುವ ಕೋರ್ಪ ಳಯ್ಯನ ಛತ್ರದ ಬಳಿಯಿರುವ ಮಂಟಪದ ಮೇಲೆ ನೀರು ಹರಿಯುತ್ತಿರುವುದು ಕಂಡುಬರುತ್ತಿದೆ.

Exit mobile version