ಸಾಗರ : ಇಲ್ಲಿನ ವರದಾ ರಸ್ತೆಯಲ್ಲಿರುವ ಸಬ್‌ಜೈಲ್‌ನ ಹೊರ ಭಾಗದ ಗೋಡೆ ಎರಡು ಬಾರಿ ಕುಸಿದು ಬಿದ್ದಿದ್ದು. ಜೈಲಿನೊಳಗಿರುವ ಖೈದಿಗಳು ಆತಂಕಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ಬೆಳಿಗ್ಗೆ ವಿಪರೀತ ಮಳೆಗೆ ಜೈಲ್‌ನ ಹೊರ ಭಾಗದ ಸುಮಾರು ೩೦ ಅಡಿ ಗೋಡೆ ಕುಸಿದಿತ್ತು. ರಾತ್ರಿ ಮತ್ತೊಮ್ಮೆ ೧೫ ಅಡಿ ಅಗಲ ಗೋಡೆ ಕುಸಿದು ಬಿದ್ದಿದೆ. ಜೈಲಿನ ಹೊರಭಾಗದ ಗೋಡೆ ಕುಸಿದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಹೊರಭಾಗದ ಗೋಡೆ ಕುಸಿದಿದ್ದು ಯಾವುದೇ ಅನಾಹುತ ಸಂಭವಿಸದೆ ಹೋದರೆ, ಹೊರಭಾಗದ ಗೋಡೆಗೆ ಹೊಂದಿಕೊಂಡೆ ಬ್ಯಾರಕ್‌ಗಳ ಗೋಡೆ ಇರುವುದರಿಂದ ಖೈದಿಗಳು ಆತಂಕದಲ್ಲಿ ಇರುವಂತೆ ಆಗಿದೆ. ಸ್ಥಳಕ್ಕೆ ಜೈಲು ಮುಖ್ಯ ಅಧೀಕ್ಷಕಿ ಡಾ. ಅನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಸ್ತುತ ಜೈಲಿನಲ್ಲಿ ೨೫ ವಿಚಾರಣಾಧೀನ ಖೈದಿಗಳಿದ್ದು ಸಂದರ್ಭ ಬಂದರೆ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕೈದಿಗಳನ್ನು ಸ್ಥಳಾಂತರಿಸಲಾಗುತ್ತದೆ. ಜೈಲು ಕಟ್ಟಡದ ಸುರಕ್ಷತೆ ಬಗ್ಗೆ ವರದಿ ನೀಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯ ಅಧೀಕ್ಷಕಿ ಡಾ. ಅನಿತಾ ತಿಳಿಸಿದ್ದಾರೆ.