Site icon TUNGATARANGA

ಹೊಸನಗರ | ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ವಿರುದ್ಧ ನಕಲಿ ದಾಖಲೆ ಸೃಷ್ಠಿಸಿ ಮಾನಹಾನಿ ಉಂಟುಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ



ಹೊಸನಗರ: ರಾಜ್ಯ ಸರ್ಕಾರಿ ನೌಕರರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರ ವಿರುದ್ಧ ನಕಲಿ ದಾಖಲೆ ಸೃಷ್ಠಿಸಿ ಸಂಘಕ್ಕೆ ವಿರುದ್ಧವಿ ವಿರುದ್ಧರುದ್ಧ
ಕೈಗೊಳ್ಳಬೇಕೆಂದು ಹೊಸನಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಂ ಬಸವಣ್ಯಪ್ಪನವರ ನೇತೃತ್ವದಲ್ಲಿ ಹೊಸನಗರ ತಾಲ್ಲೂಕು ತಹಶೀಲ್ದಾರ್ ಧಮಾಂತ ಗಂಗಾಧರ ಕೋರೆಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.


ಮನವಿ ಪತ್ರ ಸಲ್ಲಿಸಿ ಮಾತನಾಡಿದ ತಾಲ್ಲೂಕು ನೌಕರರ ಸಂಘದ ಅಧ್ಯಷ ಬಸವಣ್ಯಪ್ಪ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ೧೯೨೦ರಲ್ಲಿ ಸ್ಥಾಪನೆಯಾಗಿದ್ದು, ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆಯನ್ವಯ ನೋಂದಣಿಯಾಗಿ, ಸರ್ಕಾರದ ಮಾನ್ಯತೆಯನ್ನು ಹೊಂದಿ ಸುಮಾರು ೫.೨೫ ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರದಲ್ಲಿಯೇ ಮಾದರಿ ಸಂಘಟನೆಯಾಗಿದೆ.


ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದ ದಿ: ಎನ್.ಧರ್ಮವೀರರವರ ದೂರದೃಷ್ಠಿ ಹಾಗೂ ಅವರು ಸರ್ಕಾರಿ ನೌಕರರ ಬಗ್ಗೆ ಹೊಂದಿದ್ದ ಕಾಳಜಿಯ ಪ್ರತೀಕವಾಗಿ ನಿವೇಶನ ಮಾಡಿದ್ದರ ಪರಿಣಾಮವಾಗಿ ಬೆಂಗಳೂರು ನಗರದ ಕಬ್ಬನ್ ಉದ್ಯಾನವನದಲ್ಲಿ ಸುಸಜ್ಜಿತ ಆಡಳಿತ ಕಛೇರಿ, ಸಭಾಂಗಣ ಸೇರಿದಂತೆ ಸುಮಾರು ೫೮ ಕೊಠಡಿಗಳ ಭವನವನ್ನು ಸಂಘವು ಹೊಂದಿದ್ದು, ರಾಜ್ಯದ ವಿವಿದೆಡೆಗಳಿಂದ ಆಗಮಿಸುವ ಸರ್ಕಾರಿ ನೌಕರರಿಗೆ ವಸತಿ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಸಂಘವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚಿನ ವಿವಿದ ವೃಂದ ಸಂಘಗಳ ಸಂಯೋಜನೆಯನ್ನು ಹೊಂದಿರುತ್ತದೆ.


ಅದರಂತೆ ನಮ್ಮ ಸಂಘದ ತಾಲ್ಲೂಕು / ಜಿಲ್ಲಾ ಸಂಘಗಳೂ ಸಹ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯಾದ್ಯಂತ ಸಂಘಟನೆ ಈ ಹಂತಕ್ಕೆ ಬೆಳೆಯಲು ಹಿಂದಿನ ಹಲವಾರು ಅಧ್ಯಕ್ಷರುಗಳ ಪರಿಶ್ರಮ ಕಾರಣವಾಗಿದೆ. ಸಿ.ಎಸ್. ಷಡಾಕ್ಷರಿಯವರು ೨೦೧೯-೨೦೨೪ನೇ ಸಾಲಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಕಳೆದ ನಾಲ್ಕು ವರ್ಷಗಳಲ್ಲಿ ನೌಕರ ಸ್ನೇಹಿ ಕಾರ್ಯಗಳನ್ನು ಕೈಗೊಂಡಿರುವುದು ನಮ್ಮ ಸರ್ಕಾರಿ ನೌಕರರ ಹೆಮ್ಮೆಯ ಸಂಗತಿಯಾಗಿದ್ದು .ದಿನಾಂಕ: ೦೧-೦೩-೨೦೨೩ರಂದು ಸಂಘವು ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಸಂಘದ ಸಂಘಟನಾ ಶಕ್ತಿಗೆ ಮಣಿದು, ಸರ್ಕಾರವು ವೇತನ ಆಯೋಗದ ಭಾಗವಾಗಿ ಶೇ ೧೭%ರಷ್ಟು ಮಧ್ಯಂತರ ಪರಿಹಾರ ಭತ್ಯಯನ್ನು ನೀಡಿರುತ್ತದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರು, ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳು ಹಾಗೂ ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷರುಗಳ ಮತ್ತು ಎಲ್ಲಾ ಹಂತದ ಪದಾಧಿಕಾರಿಗಳ ಮೇಲೆ ಅವವ್ವಸ್ಥಿತ ವ್ಯವಸ್ಥಾಪನೆ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಹಾನಿ ಉಂಟುಮಾಡಿರುವುದರಿಂದ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಸುಳ್ಳು ದೂರು ನೀಡುವ ಮೂಲಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಸಂಘಟನೆಯ ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದ ಆಧಾರರಹಿತ ಆರೋಪಗಳನ್ನು ಮಾಡಿ, ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮ ಸಂಘಟನೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಈ ಕೆಳಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ಶಿಪಾರಸ್ಸು ಮಾಡುವಂತೆ ಹಾಗೂ ಶಾಂತರಾಮ, ಗುರುಸ್ವಾಮಿ, ಮೆಹಬೂಬ್ ಬಾಷಾ ಎಂ, ಶಿವರುದ್ರಯ್ಯ ವಿ.ವಿ ಹಾಗೂ ನಿಂಗೇಗೌಡ್ರು ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.


ಈ ಸಂದರ್ಭದಲ್ಲಿ ತಾಲ್ಲೂಕು ನೌಕರರ ಸಂಘದ ಗೌರವಾಧ್ಯಕ್ಷರಾದ ಜಗದೀಶ್ ಕಾಗಿನೆಲೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ರಾಜ್ಯ ನೌಕರರ ಸಂಘದ ಸದಸ್ಯ ಸುದೀಂದ್ರಕುಮಾರ್, ಖಾಜಾಂಚಿ ಪ್ರಬಾಕರ್, ಉಪಾಧ್ಯಕ್ಷರಾದ ಒಡೆಯರ್ ವಿನಯ್, ಆರೋಗ್ಯ ಇಲಾಖೆಯ ಗಜೇಂದ್ರ, ಶಿವಪ್ಪ, ಸತೀಶ, ಸ್ವಾಮಿರಾವ್, ಮಾಲತೇಶ್, ವಿನಯ್ ಎಂ ಆರಾಧ್ಯ, ನಟರಾಜ್ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್ ಸುರೇಶ್, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ವನಮಾಲ, ಶ್ರೀಮತಿ ಶಿಲ್ಪಾ, ಭೂಮಿಕ, ಶ್ರೀಮತಿ ದೀಪು, ರಾಘವೇಂದ್ರ, ಗಣೇಶ, ಸೌಮ್ಯ ಸರ್ಕಾರಿ ಕಛೇರಿಯ ನೌಕರರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ: ಹೊಸನಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವಣ್ಯಪ್ಪನವರ ನೇತೃತ್ವದಲ್ಲಿ ಹೊಸನಗರದ ತಹಶೀಲ್ದಾರ್ ಧಮಾಂತ ಗಂಗಾಧರ ಕೋರೆಯವರಿಗೆ ಮನವಿ ಪತ್ರ ಸಲ್ಲಿಸಿ ರಾಜ್ಯಾಧ್ಯಕ್ಷ ಷಡಾಕ್ಷರಿ ವಿರುದ್ಧ ಷಡ್ಯಂತ್ರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸುತ್ತಿರುವುದು.

Exit mobile version