Site icon TUNGATARANGA

ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಇಂದು ಮಹತ್ವ: ಡಾ. ಧನಂಜಯ್ ಸರ್ಜಿ

ಮಲ್ಟಿ ಟಾಸ್ಕಿಂಗ್ ನಲ್ಲಿ ಮಹಿಳೆ ನಿಪುಣಳಾಗಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಶಕ್ತಿ ಆಕೆಗಿದೆ. ಕುಟುಂಬ ನಿರ್ವಹಣೆಯಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಇಂದು ಮಹತ್ವದ್ದಾಗಿದೆ ಎಂದು ಡಾ. ಧನಂಜಯ್ ಸರ್ಜಿ ತಿಳಿಸಿದರು.


ಅವರು ಬಸವಕೇಂದ್ರದಲ್ಲಿ ಸರ್ಜಿ ಫೌಂಡೇಶನ್ ಹಾಗೂ ಅಭ್ಯುದಯ ಪ್ರಕಾಶನ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ “ನಾರಿಗೊಂದು ನಮನ” ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.


ದಿವ್ಯ ಸಾನಿಧ್ಯವನ್ನು ಬಸವ ಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮಿಗಳವರು ವಹಿಸಿದ್ದರು.
‘ಮಹಿಳೆಯರ ಆರೋಗ್ಯ- ಒಂದು ಅವಲೋಕನ’

ಎಂಬ ವಿಷಯವನ್ನು ಕುರಿತು ಡಾ.ರಕ್ಷಾ ರಾವ್ ಉಪನ್ಯಾಸ ನೀಡಿದರು. ಶಿಕ್ಷಕಿ ಹಾಗೂ ಲೇಖಕಿ ದೀಪಾ ಕುಬಸದ್ ಮಾತನಾಡುತ್ತಾ, ಮಹಿಳೆಯರಿಗೆ ಸರ್ಜಿ ಫೌಂಡೇಶನ್ ವತಿಯಿಂದ ಗೌರವಿಸಿ ಸನ್ಮಾನಿಸಿರುವುದುದು ವಿಶೇಷ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಶಾಂತಾ ಆನಂದ್, ವಿಜಯ ಯಜ್ಞನಾರಾಯಣ, ಅಭ್ಯುಯ ಪ್ರಕಾಶನದ ಪ್ರಕಾಶಕರಾದ ತುರುವನೂರು ಮಲ್ಲಿಕಾರ್ಜುನ, ಲಕ್ಷ್ಮಿ ಮಹೇಶ್, ಕಿರಣ್ ಪೈರವರ, ಶಾಂತಾ ಶೆಟ್ಟಿರವರು ಸೇರಿದಂತೆ ಹಲವರಿದ್ದರು.

Exit mobile version