Site icon TUNGATARANGA

ಸಾಗರದಲ್ಲಿ ವ್ಯಾಪಿಸುತ್ತಿದೆ “ಡೇಂಜರ್ ಡೆಂಗ್ಯೂ” ಈ ವರೆಗೆ ಅಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳೆಷ್ಟು ಗೊತ್ತಾ ?

ಸಾಗ |ಜುಲೈ,೨೦:ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಡೆಂಗ್ಯೂ ಪರಿಣಾಮ ಅನೇಕ ವಿದ್ಯಾರ್ಥಿಗಳು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಡೆಂಗ್ಯೂ ಜ್ವರ ಆರಂಭವಾಗಿದ್ದು,ಕಳೆದ ತಿಂಗಳು ಜೂನ್‌ನಲ್ಲಿಯೇ ೧೪ ಜನರು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖವಾಗಿರುವ ಕುರಿತು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ನವೀನ್‌ಸಾಗರ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಪ್ರಸ್ತುತ ೫ ಜನ ಡೆಂಗ್ಯೂ ಜ್ವರದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂತಹ ಜ್ವರ ಬಾರದಂತೆ ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ.ಕಾರಣ ಶುದ್ಧ ತಿಳಿನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತದೆ.ಆದ್ದರಿಂದ ಮನೆಗಳ ಸುತ್ತ ಮುತ್ತಲಿನ ವಾತವರಣದಲ್ಲಿ ಮಳೆಗಾಲದ ತಿಳಿನೀರು ನಿಲ್ಲದಂತೆ ಜಾಗೃತಿವಹಿಸಬೇಕು ಎಂದು ಕರೆ ನೀಡಿದರು.


ಪ್ಲಾಸ್ಟೀಕ್ ಡಬ್ಬಿಗಳು,ಎಳನೀರು ಚಿಪ್ಪುಗಳು,ಟೈಯರ್‌ಗಳು ಸೇರಿದಂತೆ ಹಳೆಯ ಡಬ್ಬಿಗಳಲ್ಲಿ ನೀರು ಸಂಗ್ರಹವಾಗದಂತೆ ತಡೆಯುವುದರ ಮೂಲಕ ಡೆಂಗ್ಯೂ ಸೊಳ್ಳೆಗಳ ಉತ್ತಪ್ಪತ್ತಿಗೆ ಬ್ರೇಕ್ ಹಾಕಬಹುದಾಗಿದೆ ಎಂದರು.


ಡೆಂಗ್ಯೂ ಲಕ್ಷಣಗಳು:
ಡೆಂಗ್ಯೂ ಜ್ವರ ಸಾಮಾನ್ಯವಾಗಿ ೩-೪ ದಿನಗಳಾದರೂ ಕಡಿಮೆಯಾಗುವುದಿಲ್ಲ.ಅಲ್ಲದೇ ಮೈಕೈ ನೋವು,ರಕ್ತಸ್ರಾವ ಹಾಗೂ ಮೈಮೇಲೆ ಗುಳ್ಳೆಗಳು ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ.ಇಂತಹ ಲಕ್ಷಣಗಳು ಗೋಚರಿಸಿದ ತಕ್ಷಣ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಅಪಾಯದಿಂದ ಪಾರಾಗುವ ಜೊತೆಗೆ ಗುಣಮುಖವಾಗಬಹುದು ಎಂದರು.
ಕಣ್ಣು ಬೇನೆ-ಮದ್ರಾಸ್ ಐ :


ಕಣ್ಣಿನ ನೋವು ಕಾಯಿಲೆ ಆರಂಭವಾಗಿದೆ.ಇದನ್ನು ಮದ್ರಾಸ್ ಐ ಎಂತಲೂ ಕರೆಯುತ್ತಾರೆ,ಇದು ವೈರಸ್‌ನಿಂದ ಶುರುವಾಗುತ್ತಿದ್ದು,ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ಅಥವಾ ಸ್ಪರ್ಶದ ಮೂಲಕ ಹರಡುತ್ತಿದೆ.ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿಯೂ ಮದ್ರಾಸ್ ಐ ಆರಂಭವಾಗಿದ್ದು,

ಈ ರೋಗದ ಲಕ್ಷಣ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಡ್ರಾಪ್ಸ್ ಉಪಯೋಗಿಸಿ ೩-೪ ದಿನ ಮನೆಯಲ್ಲಿಯೇ ಉಳಿದು ಆರೈಕೆ ಮಾಡಿಕೊಳ್ಳುವುದರಿಂದ ಕಣ್ಣಿನ ಸೋಂಕು ನಿವಾರಣೆಯಾಗಿ ಜನರಿಗೆ ಹರಡುವುದನ್ನು ತಡೆಯಬಹುದು ಎಂದರು.
ಈ ಕಾಯಿಲೆಗಳು ಗಂಭೀರ ಕಾಯಿಲೆಗಳಲ್ಲದೆ ಇದ್ದರೂ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಅಪಾಯಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ ಎಂದು ಮಾಹಿತಿ ನೀಡಿದರು.

Exit mobile version