Site icon TUNGATARANGA

ಗಾಂಧಿ ಪಾರ್ಕ್ ಅವ್ಯವಸ್ಥೆ ಸರಿಪಡಿಸುವಂತೆ ಕರ್ನಾಟಕ ನಾಡು ರಕ್ಷಣಾ ವೇದಿಕೆ ಯಿಂದ ಪಾಲಿಕೆ ಆಯುಕ್ತರಿಗೆ ಮನವಿ

ಶಿವಮೊಗ್ಗ: ಗಾಂಧಿ ಪಾರ್ಕ್ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ನಾಡು ರಕ್ಷಣಾ ವೇದಿಕೆ ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.


ನಗರದ ಪ್ರತಿಷ್ಠಿತ ಗಾಂಧಿ ಪಾರ್ಕ್ ಅನ್ನು ಕೋಟ್ಯಂತರ ರೂ. ವೆಚ್ಚ ಮಾಡಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದು ಈಗ ಅವ್ಯವಸ್ಥೆಗಳ ಆಗರವಾಗಿದೆ. ಆಟದ ಸಾಮಗ್ರಿಗಳು ತುಕ್ಕು ಹಿಡಿದಿವೆ. ಕಾರಂಜಿ ಕೆಲಸ ಮಾಡುತ್ತಿಲ್ಲ ಟೈಲ್ಸ್‌ಗಳು ಕಿತ್ತುಹೋಗಿವೆ. ಎಲ್ಲೆಂದರಲ್ಲಿ

ಕಸ, ಕಡ್ಡಿ, ಜೊತೆಗೆ ಬಿಯರ್ ಬಾಟಲಿಗಳು ಕಾಣಸಿಗುತ್ತವೆ. ಪುಟಾಣಿ ರೈಲು ಕೂಡ ಚಲಿಸುತ್ತಿಲ್ಲ. ಜನಸಾಮಾನ್ಯರು ಪಾರ್ಕಿನೊಳಗೆ ಬರುವುದೇ ಕಷ್ಟವಾಗಿದೆ ಎಂದು ದೂರಿದರು.


ಗಾಂಧಿ ಪ್ರತಿಮೆ ಕೂಡ ಹಾಳಾಗಿದೆ. ಸಂಜೆಯಾದರೆ ಸಾಕು ಮದ್ಯಪಾನಿಗಳ ಹಾವಳಿ ಹೆಚ್ಚಾಗುತ್ತದೆ. ನಿರ್ವಹಣೆ ಸರಿಯಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು. ಕೆಟ್ಟುನಿಂತಿರುವ ರೈಲು, ಕಾರಂಜಿ, ಈಜುಕೊಳಕ್ಕೆ ಕಾರ್ಯಕಲ್ಪ ನೀಡಬೇಕು.

ಸುಂದರ ಪಾರ್ಕನ್ನಾಗಿ ಪರಿವರ್ತಿಸಬೇಕು. ಮನರಂಜನೆಯ ಪಾರ್ಕ್ ಕೂಡ ಆಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ದಿನೇಶ್ ಎಸ್.ಎಂ.,ಕುಬೇರ್, ಸಂಕೇತ್, ದಾಮೋದರ್, ಪ್ರವೀಣ್, ಮಹ್ಮದ್ ಗೌಸ್, ಸಮೀವುಲ್ಲಾ, ಮಂಜುನಾಥ್, ಸಚಿನ್, ಶಿವರಾಜ್, ಗಗನ್ ಗೌಡ, ರಮೇಶ್, ಪ್ರದೀಪ್, ಶಶಾಂಕ್. ಸುಬ್ರಹ್ಮಣ್ಯ ಸೇರಿದಂತೆ ಹಲವರಿದ್ದರು.

Exit mobile version