ತೀರ್ಥಹಳ್ಳಿ: ಕುಡಿದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಿಸಿ ನಂತರ ತಲ್ವಾರ್ ಹಿಡಿದು ಹಲ್ಲೆ ನೆಡೆಸಿದ್ದ ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದಲ್ಲಿ ಸಫನ್, ಚೋರ್ ಸಮೀರ್ ಮತ್ತು ಇತರೆ ನಾಲ್ವರ ವಿರುದ್ಧ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಈಗಾಗಲೇ ಆರೋಪಿಗಳನ್ನ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಪ್ರಕರಣದ ವಿವರ
ಜೀವಿತ್ , ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬ ಯುವಕರು ತಮ್ಮ ಸ್ನೇಹಿತನೊಬ್ಬ ಮೈಲುತುತ್ತ ಸೇವಿಸಿ ಅಸ್ವಸ್ಥನಾಗಿದ್ದಕ್ಕೆ ಆತನನ್ನ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಮಧ್ಯಾಹ್ನ ೧-೩೦ ರ ವೇಳೆಯಲ್ಲಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾರ್ ಗೆ ಕುಡಿಯಲು ಹೋಗಿದ್ದಾರೆ.
ಬಾರ್ ನಿಂದ ಈ ನಾಲ್ವರು ಹೊರ ಬರುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಬಂದ ಸಮೀರ್ ಮತ್ತು ಆತನ ಸಹಚರರು ಅಫ್ರೋಜ್ ಗೆ ಅವ್ಯಾಚ್ಯ ಶಬ್ದಗಳೊಂದಿಗೆ ಬೈದು ಜಗಳವಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ವಾಪಾಸ್ ಕಳುಹಿಸಿದ್ದಾರೆ.
ಇದಾದ ಸ್ವಲ್ಪ ಸಮಯದ ನಂತರ ಮತ್ತೆ ಎಣ್ಣೆ ಹೊಡೆಯಲು ನಿರ್ಧರಿಸಿದ ನಾಲ್ವರು ಯುವಕರು ಆಗುಂಬೆ ಬಸ್ ನಿಲ್ದಾಣದ ಬಳಿಯಿರುವ ಬಾರ್ ಗೆ ಹೋಗಿ ಅಲ್ಲಿಂದ ಅಫ್ರೋಜ್ ಚೋರ್ ಸಮೀರ್ ಗೆ ಕರೆ ಮಾಡಿ ಮಧ್ಯಾಹ್ನ ಆಸ್ಪತ್ರೆಯ ಬಳಿಯಿದ್ದ ಬಾರ್ ನಲ್ಲಿ ನನ್ನನ್ನ ಬೈದಿದ್ದೇಕೆ ಎಂದು ಪ್ರಶ್ನಿಸಿದ್ದಾನೆ. ನಂತರ ಚೋರ್ ಸಮೀರ್ ಎಲ್ಲಿದೀಯ ಎಂದು ವಾಪಾಸ್ ಕೇಳಿದ್ದಾನೆ.
ಆಗುಂಬೆ ಬಸ್ ನಿಲ್ದಾಣದ ಬಾರ್ ಬಳಿ ಇದ್ದೇನೆ ಎಂದು ಅಫ್ರೋಜ್ ಹೇಳಿದ್ದಕ್ಕೆ ಏಕಾಏಕಿ ಚೋರ್ ಸಮೀರ್ ಬಾರ್ ಬಳಿ ಬಂದು ಅಫ್ರೋಜ್ ಗೆ ಆವಾಜ್ ಹಾಕಿದ್ದಾನೆ. ಇಲ್ಲೂ ಸಹ ಪೊಲೀಸರು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ನಂತರ ನಡು ರಸ್ತೆಯಲ್ಲಿ ಆಭರಣ ಜ್ಯುವೆಲ್ಲರಿ ಬಳಿ ನಡೆದುಕೊಂಡು ಹೋಗುತ್ತಿದ್ದ ಅಫ್ರೋಜ್ ಮತ್ತು ಆತನ ಸ್ನೇಹಿತರನ್ನು ಸಫನ್ ಮತ್ತು ಇತರೆ ನಾಲ್ವರ ಜೊತೆ ಬಂದ ಚೋರ್ ಸಮೀರ್ ಅಫ್ರೋಜ್ ಮೇಲೆ ಮಚ್ಚು ಬೀಸಿದ್ದಾನೆ.
ಈ ಸಮಯದಲ್ಲಿ ಅಪ್ರೋಜ್ ತಲೆಗೆ ಗಾಯವಾಗಿದೆ. ಈ ವೇಳೆ ಜೀವಿತ್ ಗೂ ಗಾಯವಾಗಿದೆ. ಗ್ಯಾಂಗ್ ಕಟ್ಟಿಕೊಂಡು ಬಂದು ಹಲ್ಲೆ ನೆಡೆಸಲಾಗಿದೆ. ಹಲ್ಲೆ ನೆಡೆಸಿದ್ದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಪ್ಯಾನ್ ಅಪ್‌ಡೇಟ್ ನೆಪದಲ್ಲಿ 7.25 ಲಕ್ಷ ವಂಚನೆ
ಸಾಗರ : ಬ್ಯಾಂಕ್‌ನಿಂದ ಪ್ಯಾನ್ ಅಪ್‌ಡೇಟ್‌ಗೆ ಬಂದ ವಾಟ್ಸ್‌ಅಪ್ ಸಂದೇಶವೆಂದು ನಂಬಿ ಬ್ಯಾಂಕ್ ಗ್ರಾಹಕರೊಬ್ಬರು ತಮ್ಮ ಪ್ಯಾನ್ ಹಾಗೂ ಆಧಾರ್ ಲಿಂಕ್ ಎಂದು ಭಾವಿಸಿ ಮಾಹಿತಿಗಳನ್ನು ತುಂಬಿದ ಹಿನ್ನೆಲೆಯಲ್ಲಿ ಅವರ ಬ್ಯಾಂಕ್ ಓವರ್ ಡ್ರಾಫ್ಟ್ ಖಾತೆಯಿಂದ 7.25 ಲಕ್ಷ ರೂ.ಗಳನ್ನು ಖದೀಮರು ವಂಚಿಸಿದ ಪ್ರಕರಣ ನಡೆದಿದೆ.’
ನಗರದ ಕೆನರಾ ಬ್ಯಾಂಕ್‌ನ ಗ್ರಾಹಕರಾಗಿರುವ ಉದ್ಯಮಿ ಮಹಮ್ಮದ್ ಶರೀಫ್‌ರ ಮೊಬೈಲ್‌ಗೆ ಜುಲೈ ೧೧ ರಂದು ಮಧ್ಯಾಹ್ನದ ವೇಳೆ ಎರಡೆರಡು ಸಂಖ್ಯೆಯಿಂದ ಪಾನ್ ಕಾರ್ಡ್ ಐಡಿಯ ಅಪ್‌ಡೇಟ್ ಮಾಡಲು ವಾಟ್ಸ್‌ಅಪ್ ಸಂದೇಶ ಬಂದಿದೆ. ಅದನ್ನು ನಿಜವೆಂದು ನಂಬಿದ ಶರೀಫ್ ಮಾಹಿತಿಗಳನ್ನು ತುಂಬಿದ್ದಾರೆ. ಈ ಹಂತದಲ್ಲಿ ಅವರ ಎರಡು ಮೊಬೈಲ್ ಸಂಖ್ಯೆಗಳಿಗೆ ಖಾತೆಯಿಂದ ಹಣ ಖರ್ಚಾದ ಸಂದೇಶ ಬಂದಿದೆ.
ಆಗ ಗಾಬರಿಗೊಂಡ ಶರೀಫ್ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಅವರು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆದಿದೆ.