Site icon TUNGATARANGA

ರಾಜ್ಯದೆಲ್ಲೆಡೆಯಿಂದ “ತುಂಗಾ ತರಂಗ” ವರದಿಗೆ ರೆಸ್ಪಾನ್ಸ್, ಬಂಗಾರಪ್ಪ ಪುತ್ರ ಮಧೂಜೀ ಶಿಕ್ಷಕರ ಈ ಅಳಲು ಕೇಳಿ

ಶಿವಮೊಗ್ಗ, ಜು.೧೩:
ನಿಮ್ಮ ತುಂಗಾ ತರಂಗ ದಿನಪತ್ರಿಕೆ ಜುಲೈ ೧೨ರ ನಿನ್ನೆ ಬುಧವಾರ ಪತ್ರಿಕೆ ಹಾಗೂ ತುಂಗಾ ತರಂಗ ಜಾಲತಾಣದಲ್ಲಿ (tungataranga.com) ನೀಡಿದ್ದ ವರದಿ ಕೇವಲ ಒಂದೇ ಗಂಟೆಯಲ್ಲಿ ಇಡೀ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ನೊಂದ ಶೇ.80ರಷ್ಟು ಶಿಕ್ಷಕರು ತಮ್ಮ ಮೊಬೈಲ್‌ನ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡದ್ದು ನೋವಿನ ಅಳಲೇ ಹೌದು.


ಅನ್ಯ ಜಿಲ್ಲೆಗಳಲ್ಲಿದ್ದು, ಮೂಲ ಜಿಲ್ಲೆಗೆ ಬರಲು ನಿರಂತರವಾಗಿ ಚಡಪಡಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಮಧ್ಯಪ್ರವೇಶ ಹಾಗೂ ಆ ಶಿಕ್ಷಕರ ಹೆಚ್ಚುವರಿ ಹುದ್ದೆಗಳ ನಿಮಿತ್ತದ ಕರ್ತವ್ಯದಿಂದ ಸೂಕ್ತ ಸ್ಥಳ ಸಿಗದೇ ಪರಿತಪಿಸುವಂತಹ ಸನ್ನಿವೇಶಗಳನ್ನು ಹುಡುಕಿ ಹೆಕ್ಕಿ ಬರೆದ ವರದಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ರಾಜ್ಯದ ಬೆಳಗಾಂ, ಬಾಗಲಕೋಟೆ, ರಾಯಚೂರು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ಮಾಹಿತಿಗಳು ತುಂಗಾ ತರಂಗದ ಅಂಗಳದೊಳಗೆ ಸುಳಿದಾಡಿದ್ದು ವಿಶೇಷ.


ಆ ವರದಿಯಲ್ಲಿ ನೂತನ ಶಿಕ್ಷಣ ಸಚಿವ ಅದರಲ್ಲೂ ವಿಶೇಷವಾಗಿ ಶಿಕ್ಷಕರಿಗೆ ಗ್ರಾಮೀಣ ಪ್ರದೇಶದ ಶಿಕ್ಷಕರನ್ನು ರೂಪಿಸಲು ಜೀವನಾಡಿಯಾಗಿ ಕರ್ತವ್ಯನಿರ್ವಹಿಸಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಮಧುಬಂಗಾರಪ್ಪ ಅವರಿಗೆ ಇತ್ತ ಗಮನಿಸಿ ಎಂದು ವರದಿ ನೀಡಿದ್ದು, ಆ ಇಲಾಖಾ ಮಟ್ಟಕ್ಕೆ ತಲುಪಿರುವುದು ಸಂತಸದ ವಿಷಯ.


೨೦೧೬ರಿಂದ ಆರಂಭಗೊಂಡ ಜಿಪಿಟಿ ಶಿಕ್ಷಕರ ಈ ವ್ಯವಸ್ಥೆಯ ಆ ಶಿಕ್ಷಕರನ್ನು ವಂಚಿಸುವ ಉದ್ದೇಶದಿಂದ ಹೇಳುತ್ತಿರುವ ಮಾತಲ್ಲ. ಮೊದಲಿನಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿಇಡಿ ಮೂಲದ ಪ್ರಾಥಮಿಕ ಶಾಲಾ ಶಿಕ್ಷ ಕರು ವರ್ಗಾವಣೆಯ ವಿಚಾರದಲ್ಲಿ ಸೋತು ಸುಣ್ಣವಾಗುವುದನ್ನು ಗಮನಕ್ಕೆ ತರುವ ಪ್ರಯತ್ನ ನಡೆಸಲಾಗಿದೆ.


ಪಿಎಸ್‌ಟಿಗೆ ಆಧ್ಯತೆ ನೀಡುವುದನ್ನು ಬಿಟ್ಟು ಏಕಾಏಕಿ ಜಿಟಿಪಿಗೆ ಆದ್ಯತೆ ನೀಡಿದರೆ ಪಿಎಸ್‌ಟಿ ಶಿಕ್ಷಕರು ಎಲ್ಲಿಗೆ ಹೋಗಬೇಕು. ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸ ಬೇಕಾದರೆ ಅಷ್ಟೆ ಸಂಖ್ಯೆಯ ಪಿಎಸ್‌ಟಿ ಶಿಕ್ಷಕರನ್ನು ಉಳಿಸಿಕೊಂಡು ಉಳಿದವರಿಗೆ ಅನ್ಯ ಉದ್ಯೋಗದ ಜವಾಬ್ದಾರಿ ನೀಡಬ ಹುದಲ್ಲವೇ ಎಂಬ ಪ್ರಶ್ನೆಯೂ ಇಲ್ಲಿ ಮೂಡಿದೆ.


ತುಂಗಾ ತರಂಗ ಶಿಕ್ಷಕರ ಈ ಸಮಸ್ಯೆಯ ಬಗ್ಗೆ ಸಾರ್ವಜನಿಕವಾಗಿ ಕಣ್ತೆರೆಸಿ ಸರ್ಕಾರದ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡುತ್ತದೆ. ನೊಂದ ಶಿಕ್ಷಕರ ಸ್ಥೂಲ ಬರಹಗಳ ಮಾಹಿತಿಯನ್ನು ಪ್ರಕಟಿಸುವ ಹೊಣೆಗಾರಿ ಕೆಯನ್ನು ಹೊರುತ್ತದೆ. ಈ ಮೊದಲ ಹಂತ ದಲ್ಲಿ ಬೆಳಗಾವಿ ವಿಭಾಗದ ಶಿಕ್ಷಕಿಯೊಬ್ಬರು ಬರೆದಿರುವ ಮಾಹಿತಿಯನ್ನು ನೀಡಲಾಗಿದೆ. ಇದು ಜಿಟಿಪಿ ಶಿಕ್ಷಕರ ನೋವಿನ ಅಳಲು
ಇನ್ನೊಂದು ವರದಿಯಲ್ಲಿದೆ ನೋಡಿ

ನೀವು ತುಂಗಾತರಂಗ ದಿನಪತ್ರಿಕೆ ಗುಂಪಿಗೆ ಸೇರಬೇಕೆ? ಈ ಲಿಂಕ್ ಬಳಸಿ https://chat.whatsapp.com/DUwqFhLKcAOFi9VRTuO8H6

Exit mobile version