ಸಾಗರ : ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಪಟ್ಟಂತೆ ನಗರ ಠಾಣೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ನಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಭವ್ಯ (೧೯) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರು ಸಂದೀಪ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಇನ್ಸಟ್ರಾಗ್ರಾಮ್ನಲ್ಲಿ ಭವ್ಯ ಮತ್ತು ಪ್ರದೀಪ್ ಪರಿಚಯವಾಗಿದ್ದರು. ಇದನ್ನೆ ನೆಪವಾಗಿ ಇರಿಸಿಕೊಂಡ ಪ್ರದೀಪ್ ಪದೇಪದೇ ಫೋನ್ ಮಾಡಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ಭವ್ಯ ತನ್ನ ಪೋಷಕರ ಬಳಿ ಹೇಳಿ ಕೊಂಡಿದ್ದಳು. ಪ್ರದೀಪ್ ಕಾಟ ತಾಳಲಾರದೆ ಭವ್ಯ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಭವ್ಯ ಮೃತಪಟ್ಟಿದ್ದು. ಸಹೋದರ ಕೃಷ್ಣಮೂರ್ತಿ ದೂರು ನೀಡಿದ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರು ಸೊರಬ ತಾಲ್ಲೂಕು, ಆನವಟ್ಟಿ ಸಮೀಪದ ಹುರಳಿಕೊಪ್ಪ ಗ್ರಾಮದ ಪ್ರದೀಪ್ ಎಂಬಾತನನ್ನು ಬುಧವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.