ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ಬರೋಬ್ಬರಿ ಏಳು ಮಂದಿ ಮಹಾಮಾರಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 79ಕ್ಕೇರಿಕೆಯಾಗಿದೆ.
ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು, ಕಲಬುರಗಿಯಲ್ಲಿ ಇಬ್ಬರು ಹಾಗೂ ಹಾಸನದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಹೊಸದಾಗಿ 271 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಗುರುವಾರ 464 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 3440ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 2995 ಸಕ್ರಿಯ ಪ್ರಕರಣಗಳಿದ್ದು, 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಪತ್ತೆಯಾದ 271 ಸೋಂಕಿತರ ಪೈಕಿ 92 ಮಂದಿ ಹೊರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, 14 ಮಂದಿ ವಿದೇಶ ಪ್ರಯಾಣದ ಇತಿಹಾಸ ಹೊಂದಿದ್ದಾರೆ.
ಬಳ್ಳಾರಿ 97, ಬೆಂಗಳೂರು 36, ಉಡುಪಿ 22, ಕಲಬುರ್ಗಿ 20, ಧಾರವಾಡ 19, ದಕ್ಷಿಣ ಕನ್ನಡ 17, ಬೀದರ್ 10, ಹಾಸನ 9, ಮೈಸೂರು 9, ತುಮಕೂರು 7, ಶಿವಮೊಗ್ಗ 6, ರಾಯಚೂರು 4, ಉತ್ತರ ಕನ್ನಡ 4, ಚಿತ್ರದುರ್ಗ 3, ರಾಮನಗರ 3, ಮಂಡ್ಯ 2, ಬೆಳಗಾವಿ, ವಿಜಯಪುರ, ಯಾದಗಿರಿಯಲ್ಲಿ ತಲಾ ಒಂದು ಕೊರೋನಾ ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರದ 61 ವರ್ಷದ ಮಹಿಳೆ, 52 ವರ್ಷದ ಪುರುಷ, 49 ವರ್ಷದ ಮಹಿಳೆ, ಹಾಸನದ 60 ವರ್ಷದ ವ್ಯಕ್ತಿ ಹಾಗೂ ಕಲಬುರಗಿಯಲ್ಲಿ 53 ವರ್ಷದ ಮತ್ತು 46 ವರ್ಷದ ಪುರುಷರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಆರು ಸೋಂಕು ಪತ್ತೆ : ಕೊರೊನಾ ಕುರಿತು ಮಾಹಿತಿಯು ಈಗಷ್ಟೆ ಹೊರಬಂದಿದೆ. ಶಿವಮೊಗ್ಗದ ಪಾಲಿಗೆ ದುರಂತದ ದಿನ. ನಿನ್ನೆಯಷ್ಟೆ ಹತ್ತು ಪ್ರಕರಣ ನೋಡಿದ್ದ ನಾವು ಇಂದು ಮತ್ತೆ ಆರು ಪ್ರಕರಣ ನೋಡಬೇಕಾಗಿದೆ. ಮೂವರು ಪೊಲೀಸರು ಹಾಗೂ ಚಿಕಿತ್ಸೆ ನೀಡುತ್ತಿದ್ದ ವೈದ್ಯ ವಿದ್ಯಾರ್ಥಿ ಸೇರಿದಂತೆ ಆರು ಜನಕ್ಕೆ ಪಾಸೀಟೀವ್ ಬಂದಿದೆ. ಈಗ ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಸೊಂಕಿತರ ಸಂಖ್ಯೆ ಶತಕ ಸಮೀಪಿಸುತ್ತಿದೆ. ಜಿಲ್ಲೆಯಲ್ಲಿ ಒಂಬತ್ತು ಕ್ವಾರಂಟೈನ್ ಜೋನ್ ಗಳನ್ನ ಮಾಡಲಾಗಿದೆ. ಇಂತಹ ಕೆಲವೆಡೆ ಚಿಕ್ಕ ಗಲಾಟೆಗಳಾಗಿವೆ. ಎಲ್ಲೆಡೆ ಅತಿ ಹೆಚ್ಚು ಪರಿಶೀಲನೆ ನಡೆಯತ್ತಿದೆ. ಸೊಂಕಿತರ ಹುಡುಕಾಟಕ್ಕೆ ವೈಯುಕ್ತಿಕ ಕಾಳಜಿಯೂ ಇರಲಿ. ಅನುಮಾನ ಎನಿಸಿದಾಕ್ಷಣ ಆಸ್ಪತ್ರೆಗೆ ಹೋಗುವುದು ಅತ್ಯಗತ್ಯ. ಎಚ್ಚರದ ಹೆಜ್ಜೆಯಷ್ಟೆ ನಮ್ಮದಾಗಿರಲಿ.
ಹುಷಾರ್
ಬೀದಿಯಲ್ಲೇ ತಿಂಡಿ ಊಟ, ಪಾನಿಪುರಿ, ಗೋಬಿ,…. ಎಲ್ಲವೂ ಸಿಗುತ್ತಿದೆ. ಅಲ್ಲೇ ತಿನ್ನಬಹುದು. ನಮ್ಮ ವ್ಯವಸ್ಥೆ ನಗರದಲ್ಲಿ ಸೋತಿದೆ. ಎಚ್ಚರಿಕೆಯಷ್ಟೆ ನಮ್ಮದಾಗಿರಲಿ.