ಪ್ರಾಥಮಿಕ ಶಾಲಾ ಶಿಕ್ಷಕರ ಗೋಳು ಹೇಳತೀರದು!
ಸ್ವಾಮಿ/ ಜೀರ್ ಸುದ್ದಿ
ಶಿವಮೊಗ್ಗ, ಜು.೧೨:
ಶಿಕ್ಷಕರಾಗಿ ನೇಮಕ ಮಾಡಿಕೊಳ್ಳುವಾಗ ಇಲ್ಲದ ವರ್ಗೀಕರಣ ತದನಂತರದಲ್ಲಿ ರೂಪುಗೊಂಡು ಶಿಕ್ಷಕರನ್ನು , ಅವರ ವೃತ್ತಿ ಜೀವನವನ್ನು ಅನಿಶ್ಚಿತಗೊಳಿಸಿದ ರೀತಿಯೇ ವರ್ಣರಂಜಿತ. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರ ಗೋಳು ಹೇಳ ತೀರದು.
ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ವಿಚಾರಣೆ ಹಾಗೂ ಕೋರಿಕೆ ವರ್ಗಾ ವಣೆಯ ಪ್ರಕ್ರಿಯೆ ಇಂದು ರಾಜ್ಯಾದ್ಯಂತ ನಡೆಯುತ್ತಿದ್ದು ಶಿವಮೊಗ್ಗ ಜಿಲ್ಲೆಯ ಕೋರಿಕೆ ವರ್ಗಾವಣೆಯ ಆಕಾಂಕ್ಷಿತ ಶಿಕ್ಷಕರ ವರ್ಗಾವಣೆ ಎರಡು ದಿನದಿಂದ ನಡೆಯುತ್ತಿದೆ ಆ ಸುದ್ದಿಯ ನಡುವೆ ತುಂಗಾ ತರಂಗ ಒಳಹೊಕ್ಕು ಹುಡುಕಿದಾಗ ಶಿಕ್ಷಕರು ಬಾಯಿ ಬಿಟ್ಟ ಕೆಲವು ಸತ್ಯಗಳು ಹಿಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಹಂತದಲ್ಲಿ ಕೇಳದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಆ ಶಿಕ್ಷಕರನ್ನು ಸಂಪೂರ್ಣವಾಗಿ ಕಡೆಗಣಿಸಿ ಹೊಸಬರಿಗೆ ಪ್ರಾಥಮಿಕ ಶಾಲೆಯಲ್ಲೂ ಅವಕಾಶ ಹೆಚ್ಚು ವಂತೆ ಮಾಡಿರುವುದು ತಪ್ಪಲ್ಲವೇ ನಾವೆಲ್ಲಿ ಹೋಗಬೇಕು ಕೆಲಸ ಬಿಟ್ಟು ಕೆಲಸ ಬಿಟ್ಟು ಹೋಗಬೇಕಾ ಇನ್ನು ಅದೇ ನೀರು ಬೆಳಕು ಕಾಣದ ಹಳ್ಳಿಗಳಲ್ಲಿ ಬದುಕಬೇಕಾ ನಮಗೆ ವರ್ಗಾವಣೆ ಯಾವಾಗ ಆಗುತ್ತದೆ ನಾವು ಈ ಕಡೆ ಬರೋದು ಆಗುವುದಿಲ್ಲವೇ ಎಂದು ಹೇಳುತ್ತಿದ್ದಾರೆ.
೨೦೧೬ ರ ವರ್ಗಾವಣೆ ಸಂಬಂಧ ಜಿಪಿಟಿ ಶಿಕ್ಷಕರು ಕೋರ್ಟ್ ಗೆ ಹೋದ ಪರಿಣಾಮವಾಗಿ ಪಿಎಸ್ ಟಿ ಶಿಕ್ಷಕರಿಗೆ ಜಿಪಿಟಿ ಹುದ್ದೆಗಳನ್ನು ನೀಡುವಂತಿಲ್ಲ.ಅದರಂತೆ ೧ ರಿಂದ ೫ ನೇ ತರಗತಿಗೆ ಪಿ ಎಸ್ ಟಿ ಹುದ್ದೆ ಗಳೆಂದು ಮೀಸಲಿರಿಸಿದ ಪರಿಣಾಮವಾಗಿ ಇಂದು ಬಹುತೇಕ ಹೆಚ್ಚಿನ ಶಿಕ್ಷಕರು ಹೆಚ್ಚುವರಿಯಾಗುವಂತಾಗಿದೆ.ಜಿಪಿಟಿ ಹುದ್ದೆಗಳು ಮಂಜೂರುಗೊಂಡು ಶಿಕ್ಷಕರು ಬರುವವರೆಗೆ ಮಾತ್ರ ಪಿಎಸ್ ಟಿ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬೋಧನೆ ಕೈಗೊಳ್ಳಬೇಕಿದೆ.ಪಾಠ ,ಪಠ್ಯ ಚಟುವಟಿಕೆಗಳನ್ನು ನಡೆಸಲು ಮಾತ್ರ ಪಿಎಸ್ ಟಿ ಶಿಕ್ಷಕರು ಬಳಕೆಯಾಗುತ್ತಿದ್ದು ಹುದ್ದೆ ಸಂಬಂಧಿತ ಅನುಕೂಲಗಳು ಅವರಿಗೆ ದೊರಕದಿರುವುದು ಅಣಕವಲ್ಲದೇ ಮತ್ತೇನು?
ಇಂದು ನಡೆದ ವರ್ಗಾವಣೆಯಲ್ಲಿ ಜಿ ಪಿ ಟಿ ಯ ಶೇಕಡಾ ೯೦ ಹುದ್ದೆಗಳು ಖಾಲಿ ಇದ್ದರೂ ಪಿ ಎಸ್ ಟಿ ಶಿಕ್ಷಕರು ಅಲ್ಲಿಗೆ ವರ್ಗಾವಣೆ ಪಡೆಯುವಂತಿಲ್ಲ.ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವರ್ಗಾವಣೆ ಅರ್ಜಿ ಹಾಕಿ ಸುಮ್ಮನೆ ವಾಪಾಸಾಗುವುದಷ್ಟೇ ಶಿಕ್ಷಕರ ಕೆಲಸವಾಗಿದೆ.ಈ ಕುರಿತು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಂಡು ಪಿ ಎಸ್ ಟಿ ಶಿಕ್ಷಕರನ್ನು ಬಡ್ತಿಗೊಳಿಸುವ ಪ್ರಕ್ರಿಯೆ ನಡೆಸಿ ಹೆಚ್ಚಿನ ಹೆಚ್ಚುವರಿ ಹೊರೆ ಕಡಿಮೆಗೊಳಿಸಿದರೆ ಒಂದಷ್ಟು ಅನುಕೂಲವಾಗುವಂದಂತೂ ದಿಟ
ಅಂದರೆ ಶಿವಮೊಗ್ಗ ಜಿಲ್ಲೆಯ ಒಂದೇ ಒಂದು ವರ್ಗಾವಣೆಯ ಮಾದರಿಯಲ್ಲಿ ಶಿಕ್ಷಕರ ಕಟು ಸತ್ಯ ಮಾತುಗಳು ಇಡೀ ವರ್ಗಾವಣೆ ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ ಪದವೀಧರ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳುವಾಗ ಎಂಟನೇ ತರಗತಿಯನ್ನು ಕೊಡಿ ಕಳಿಸಿ ತೆಗೆದುಕೊಳ್ಳುತ್ತಿದ್ದ ಬಗೆಯನ್ನು ಈಗ ಏಕಾಏಕಿ ಒಬ್ಬರ ತಲೆ ಮೇಲೆ ಹಾಕಿ ಮೊದಲಿನಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅಂದರೆ ಬಿಡಿ ಮಾದರಿಯಲ್ಲಿ ಆಯ್ಕೆಯಾದ ಶಿಕ್ಷಕರನ್ನು ಸಂಪೂರ್ಣವಾಗಿ ಕಡೆಗಣಿಸಿದರೆ ಅವರು ಹೇಗೆ ತಾನೇ ವರ್ಗಾವಣೆಯಾಗಲು ಸಾಧ್ಯ ಎಂಬುದು ಅವರ ಗಂಭೀರ ಪ್ರಶ್ನೆ.
ಒಂದೊಮ್ಮೆ ಉತ್ತಮವಾಗಿ ಪಾಠ ಮಾಡಿದರಾಯಿತು ನಮ್ಮ ವೃತ್ತಿಯನ್ನು ನಾವು ಕಾಯ್ದುಕೊಂಡು ಹೋಗಬಹುದು ಎಂಬ ಮಾತುಗಳು ಈ ಹಿಂದೆ ಚಾಲ್ತಿಯ ಲ್ಲಿತ್ತು.ಆದರೆ ಬದಲಾದ ವೃಂದ ನಿಯಮ ಗಳ ಪರಿಣಾಮವಾಗಿ ವರ್ಗಾವಣೆ, ಬಡ್ತಿ ಸೇರಿದಂತೆ ಎಲ್ಲ ವಿಷಯಗಳಲ್ಲೂ ಶಿಕ್ಷಕರು ಪರಿತಪಿಸಬೇಕಾಗಿರುವುದು ವ್ಯವಸ್ಥೆಯ ದುರಂತವೇ ಸರಿ.
ನೇಮಕವಾದ ಹುದ್ದೆಯಿಂದ ಹಿಂಬಡ್ತಿ ಅನುಭವಿಸಿದ ಇಲಾಖೆ ಹಾಗೂ ನೌಕರರು ಇದ್ದಾರೆಂದರೆ ಅದು ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಶಿಕ್ಷಕರು ಮಾತ್ರ ಎಂಬು ದಾಗಿಗೆ ಅಳಲು ತೋಡಿ ಕೊಂಡಿ ದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ವಿಷಯ ದಲ್ಲಿ ಏಕಾಏಕಿ ಎಲ್ಲವನ್ನು ಬಿಟ್ಟು ಜಿಪಿಟಿಗೆ ಮಾತ್ರ ಆದ್ಯತೆ ನೀಡುವುದಾದರೆ ಪಿಎಸ್‌ಪಿ ಶಿಕ್ಷಕರು ಎಲ್ಲಿ ಹೋಗಬೇಕು ಎಂಬುದು ಅವರ ಪ್ರಶ್ನೆ. ಇದಕ್ಕೆ ಇಲಾಖೆಯೇ ಉತ್ತರಿ ಸಬೇಕು ಶಿಕ್ಷಕರ ಅಳುತ್ತಲೇ ಇರಬೇಕಾ?