Site icon TUNGATARANGA

ಸಿ.ಎಸ್.ಷಡಾಕ್ಷರಿ ಅವರ ಓಓಡಿ ರದ್ದುಗೊಳಿಸಿದ ರಾಜ್ಯ ಸರ್ಕಾರ, ಯಾಕೆ ಎಂತಾಯ್ತು?

ಬೆಂಗಳೂರು: ಅನ್ಯ ಕಾರ್ಯ ನಿಮಿತ್ತ ( OOD) ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರ ಓಓಡಿಯನ್ನು ರಾಜ್ಯ ಸರ್ಕಾರ ( Karnataka Government ) ರದ್ದುಗೊಳಿಸಲಾಗಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಜಂಟಿ ನಿರ್ದೇಶಕರ ಕಚೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ, ಶಿವಮೊಗ್ಗ ಇಲ್ಲಿಂದ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಅನ್ಯ ಕಾರ್ಯನಿಮಿತ್ತ ( ಓಓಡಿ) ಮೇಲೆ ಸಿಎಸ್ ಷಡಾಕ್ಷರಿ, ಲೆಕ್ಕಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದಿದ್ದಾರೆ.


ಸರ್ಕಾರಿ ಪತ್ರದ ಅನ್ವಯ ಸದರಿ ನೌಕರರನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಕಚೇರಿ ಕರ್ತವ್ಯದಿಂದ ದಿನಾಂಕ 05-07-2023ರ ಅಪರಾಹ್ನದಂದು ಬಿಡುಗಡೆ ಮಾಡಿ, ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೇರಿ, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲಕ್ಕೆ ವರದಿಗೆ ಅನುಮತಿ ನೀಡುವಂತೆ ಕೋರಿರುತ್ತಾರೆ ಎಂದು ತಿಳಿಸಿದ್ದಾರೆ.


ಈ ಹಿನ್ನಲೆಯಲ್ಲಿ ಸಿ.ಎಸ್ ಷಡಾಕ್ಷರಿ, ಲೆಕ್ಕಾಧೀಕ್ಷಕರು ಅವರನ್ನು ಈ ಕೂಡಲೇ ಜಂಟಿ ನಿರ್ದೇಶಕರ ಕಚೇರಿ, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಶಿವಮೊಗ್ಗ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮಿತಿ ನೀಡಿ ಆದೇಶಿಸಿದ್ದಾರೆ.

Exit mobile version