Site icon TUNGATARANGA

ಸಹ್ಯಾದ್ರಿ  ತಪ್ಪಲಿನ, ಮಲೆನಾಡ ಮಡಿಲಲ್ಲಿ | ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ವಿಶೇಷ ಹೆಸರಿನಿಂದ | ಕಂಗೊಳಿಸುತ್ತಿರುವ  ವಿದ್ಯಾ ಸಂಸ್ಥೆಯೇ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆ.

 ಬರಹ : ರಾ. ಹ. ತಿಮ್ಮೇನಹಳ್ಳಿ,
                    ಶಿವಮೊಗ್ಗ.9880839575

ಸಹ್ಯಾದ್ರಿ  ತಪ್ಪಲಿನ, ಮಲೆನಾಡ ಮಡಿಲಲ್ಲಿ ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ವಿಶೇಷ ಹೆಸರಿನಿಂದ ಕಂಗೊಳಿಸುತ್ತಿರುವ  ವಿದ್ಯಾ ಸಂಸ್ಥೆಯೇ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆ.

       ಸಿಹಿಮೊಗೆಯ ತಪ್ಪಲಿನಲ್ಲಿ ಓದಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಕ್ರೀಡಾ ಜಗತ್ತಿಗೂ ನೀಡಿ, ಇಡೀ ರಾಜ್ಯದಲ್ಲಿ ಮೇರು ಪತಾಕೆಯನ್ನು ಮಾಡಿಸಿದ ಕೀರ್ತಿ ಹೊಂದಿರುವ ಈ ವಿದ್ಯಾ ಸಂಸ್ಥೆಯ ಜವಾಬ್ದಾರಿ ಹೊತ್ತ ಶ್ರೀಗಳ ಅವಿರತ ಪರಿಶ್ರಮ, ಅವರು ಕೂಡಿಟ್ಟ ಆಧ್ಯಾತ್ಮ ತಡಿತದ ಮನೋ ಭೂಮಿಕೆಯಿಂದ  ಸಾವಿರಾರು ಮಕ್ಕಳು ಇಂದು ಅಗ್ರ ಪಂಕ್ತಿಯ ಸಮಾಜಕ್ಕೆ ಕೊಡುಗೆಯಾಗಿದ್ದಾರೆ.

        ಕಲೆ,ಸಾಹಿತ್ಯ,ಸಂಸ್ಕೃತಿ, ಆಟೋಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಸದಾ ಯಶಸ್ಸಿನ ಬೆನ್ನೇರಿ ನಡೆಯುತ್ತಿರುವ ಮಲೆನಾಡಿನ ತವರುರಾದ ರಾಜ್ಯದಲ್ಲೆಡೆ ಅದರಲ್ಲೂ ಶಿವಮೊಗ್ಗ ಜಿಲ್ಲೆಯಾದ್ಯಂತ  ಶಿಕ್ಷಣ ಮತ್ತು ಕ್ರೀಡೆಯಲ್ಲಿ ಅನೇಕ ಪ್ರತಿಭಾನ್ವಿತರನ್ನು ನೀಡಿದಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯು ಅದ್ವಿತೀಯ ಸಾಧನೆಯನ್ನು  ಮಾಡಿ ರಾಜ್ಯದ ಇತಿಹಾಸದಲ್ಲಿ ತನ್ನದೇ ಆದ ಒಂದು ಮೈಲಿಗಲ್ಲನ್ನು ಮೂಡಿಸಿದೆ.

       ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಸಿದ್ದ ಸಿಂಹಾಸನಾಧೀಶ್ವರರಾದ  ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರಿಂದ 1984 ರಲ್ಲಿ ಶಿವಮೊಗ್ಗ ನಗರದ ಶರಾವತಿ ನಗರದಲ್ಲಿ ಆರಂಭಗೊಂಡ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯು  ಶಿವಮೊಗ್ಗದ ಶರಾವತಿ ನಗರದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಹೊಂದಿರುವ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯು 1984ರಲ್ಲಿ ಆರಂಭಗೊಂಡಿದ್ದು, ನರ್ಸರಿಯಿಂದ ಪ್ರಾರಂಭವಾಗಿ ಇಂದು ಶರಾವತಿ ನಗರ ಶಾಖೆಯೊಂದರಲ್ಲಿಯೇ 1750 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದೆ.

       ಶಿವಮೊಗ್ಗದ ನಗರದಲ್ಲಿ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆಯನ್ನು ಮಾಡುವ ಉದ್ದೇಶದಿಂದ 1984 ನೇ ಸಾಲಿನಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಮಾಡಿದ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯೂ ಜಿಲ್ಲೆಯಲ್ಲಿಯೇ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ತನ್ನದೆ ಆದ ಅನೇಕ ಶಾಖೆಗಳನ್ನು ಹೊಂದಿ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ಶಿಕ್ಷಣರಂಗದಲ್ಲಿ ಸಾಧನೆ : ಶ್ರೀ  ಆದಿಚುಂಚನಗಿರಿ ವಿದ್ಯಾ ಸಂಸ್ಥೆ ಪ್ರಾರಂಭವಾಗಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶವನ್ನು ಪಡೆಯುತ್ತ ಮುಂದೆ ಸಾಗುತ್ತಾ ಬಂದಿದೆ. ಶಿವಮೊಗ್ಗದ ಶರಾವತಿ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆಯಲ್ಲಿ 1993 ರಿಂದ 2023 ರ ವರೆಗೆ ಶಿಕ್ಷಣ ರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಫಲಿತಾಂಶ, ಪರೀಕ್ಷೆಗೆ ಕುಳಿತ ವಿಧ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದವರೇ ಹೆಚ್ಚಿನವರಾಗಿರುತ್ತಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಧಿಕ ಫಲಿತಾಂಶ ಪಡೆಯುವುದರೊಂದಿಗೆ ಸತತ 10 ವರ್ಷಗಳ ಶೇಕಡ ನೂರರಷ್ಟು ಫಲಿತಾಂಶ ಪಡೆಯುವುದರ ಮೂಲಕ ಹಿರಿಮೆ ಸಾಧಿಸಿರುವ ಸಂಸ್ಥೆಯು, ವಿಶೇಷವಾಗಿ ಓದಿನಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳ ಫಲಿತಾಂಶದ ಮಟ್ಟವನ್ನು ತಮಗರಿವಿಲ್ಲದಂತೆ ಉತ್ತುಂಗಕ್ಕೆ ಏರಿಸಿರುವುದು ವಿಶೇಷ.

1996-97ನೇ ಸಾಲಿನಲ್ಲಿ ಸಂಸ್ಥೆಯ ಇತಿಹಾಸದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ: ವಿದ್ಯಾ ಸಂಸ್ಥೆಯು ಕರ್ನಾಟಕ ರಾಜ್ಯಕ್ಕೆ 19 ನೇ ರಾಂಕ್‌ನ್ನು ಪಡೆಯುವುದರೊಂದಿಗೆ ಸಂಸ್ಥೆಯೂ ತನ್ನ ಕೀರ್ತಿ ಪತಾಕೆಯನ್ನು ರಾಜ್ಯದುದ್ದಗಲಕ್ಕೂ ಹರಡಿಸಿದೆ.

ಸಂಸ್ಥೆ ಪ್ರಾರಂಭವಾದಾಗಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಲೆಕ್ಕವಿಲ್ಲದಷ್ಟು ಸಾಧನೆ ಮಾಡಿದ್ದಾರೆ. ಅದೇ ರೀತಿ 600 ರಿಂದ 621 ರ ವರೆಗೂ ಅನೇಕ ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಪಡೆದಿರುತ್ತಾರೆ. ಹಾಗೂ ಜಿಲ್ಲೆಯಲ್ಲಿಯೇ 600 ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಈ ಸಂಸ್ಥೆಗೆ ಸೇರಿರುತ್ತಾರೆ.

2012-13 ನೇ ಸಾಲಿನಲ್ಲಿ ನಡೆದ ಎಸ್‌.ಎಸ್‌.ಎಲ್.ಸಿ ಪರೀಕ್ಷೆಯಲ್ಲಿ ಪ್ರೇರಣಾಳಿಗೆ 625 ಕ್ಕೆ 621 ಅಂಕ ಪಡೆದು ರಾಜ್ಯದಲ್ಲಿಯೇ ಎರಡನೇ ವಿದ್ಯಾರ್ಥಿನಿಯಾಗಿರುತ್ತಾಳೆ. ಶಿವಮೊಗ್ಗ ಜಿಲ್ಲೆಯಲ್ಲಷ್ಟೇ ಅಲ್ಲದೇ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯೂ ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿರುವ ಜನರಿಗೆ ಚಿರಪರಿಚಿತ.

     2013-14 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕುಳಿತ ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 58 ವಿದ್ಯಾರ್ಥಿಗಳು, 600 ಕ್ಕಿಂತ ಹೆಚ್ಚು ಅಂಕ ಪಡೆದ ಹತ್ತು ಜನ ಪ್ರತಿಭಾವಂತ ವಿದ್ಯಾರ್ಥಿಗಳು, 625 ಕ್ಕೆ 613 ಅಂಕ ಪಡೆದ ಸಂಸ್ಥೆಯ ಮೂರು ಜನ ವಿದ್ಯಾರ್ಥಿಗಳು, ಜಿಲ್ಲೆಗೆ ಹಾಗೂ ಸಂಸ್ಥೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುತ್ತಾರೆ.

2014 – 2015 ನೇ ಸಾಲಿನ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಕ್ಷರ ಡಿ 625ಕ್ಕೆ 621 ಅಂಕ ಪಡೆದು ಶಾಲೆಗೆ ಮೊದಲಿಗಳಾಗಿರುತ್ತಾಳೆ. ಅದೇ ರೀತಿ 16 ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

2015-16 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೃತಿಕಾ.ಎಸ್. 625ಕ್ಕೆ 622 ಅಂಕ ಪಡೆದು ಶಾಲೆಗೆ ಮೊದಲಿಗಳಾಗಿದ್ದು, ರಾಜ್ಯಕ್ಕೆ ನಾಲ್ಕನೇ ಪ್ರತಿಭಾನ್ವಿತಳಾಗಿರುತ್ತಾಳೆ. 600 ಕ್ಕಿಂತ ಹೆಚ್ಚು ಅಂಕ ಪಡೆದ 29 ಜನ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುತ್ತಾರೆ.

2016 – 17 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಉಡುಪ, ವಿಸ್ಮಿತಾ ಡಿ. ಕಾವ್ಯ ಬಿ.ಎಂ. ನೈದಿಲೆ ಹೆಚ್.ಸಿ. ಈ ಪ್ರತಿಭಾನ್ವಿತರು 625ಕ್ಕೆ 618 ಅಂಕಗಳನ್ನು ಪಡೆದು, 12 ಜನ ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.

2017-18 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಂದಿರ ಎಂ ಶೆಟ್ಟಿ 625ಕ್ಕೆ 616 ಅಂಕಗಳನ್ನು ಪಡೆದು, ಅದೇ ರೀತಿ 18 ಜನ ವಿದ್ಯಾರ್ಥಿಗಳು ನೂರಕ್ಕಿಂತ ಹೆಚ್ಚು ಅಂಕ ಪಡೆದಿರುತ್ತಾರೆ.

2018 19 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುದರ್ಶನ್ ಉಡುಪ 125ಕ್ಕೆ 622 ಅಂಕಗಳನ್ನು ಪಡೆದು ಶಾಲೆಗೆ ಮೊದಲಿಗ, ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುತ್ತಾನೆ. 18 ಜನ ಪ್ರತಿಭಾನ್ವಿತರು 600 ಕ್ಕಿಂತ  ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

2019 – 20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕಗಳನ್ನು ಪಡೆದು, ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುತ್ತಾಳೆ. 22 ಜನ ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದಿರುತ್ತಾರೆ.

2020 – 21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 621 ಅಂಕಗಳನ್ನು ಸುಮಂತ್ ಕೆ.ಮತ್ತು ವಿನಮ್ರತಾ ಪೈ ಇವರು ಶಾಲೆಗೆ ಮೊದಲಿಗರಾಗಿರುತ್ತಾರೆ. 13 ಜನ ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆಯುತ್ತಾರೆ.

2021- 22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಜಿಲ್ಲೆ ಹಾಗೂ ರಾಜ್ಯಕ್ಕೆ ಮೊದಲ ರಾಂಕ್  ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾಳೆ. 29 ಜನ ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದು ಶಾಲೆಗೆ ಪ್ರತಿಭಾನ್ವಿತರಾಗಿರುತ್ತಾರೆ.

2022 – 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಿಂದುಪ್ರಿಯ ಮತ್ತು ಭೂಮಿಕಾ ಎಂ. 625ಕ್ಕೆ 621 ಅಂಕ ಪಡೆದು ಶಾಲೆಗೆ ಈ ಇಬ್ಬರು ಮೊದಲಿಗರಾಗಿರುತ್ತಾರೆ. ಅದೇ ರೀತಿ 13 ಜನ ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಭಜನೆ, ಪಾರ್ಥನೆ, ಧ್ಯಾನ, ಪೂಜೆ ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ವಿದ್ಯಾರ್ಥಿಗಳ ಓದು, ಕ್ರೀಡೆ, ಅವರ ಸಾಂಸ್ಕೃತಿಕ ಪ್ರತಿಭೆಗಳ ಹಿಂದೆ ಸ್ವಾಮೀಜಿಯವರು ಬೆನ್ನೆಲುಬಾಗಿ ನಿಂತಿರುವುದು ಈ ಶಾಲೆಯ ಒಂದು ವಿಶೇಷವೇ ಹೌದು.

ಸೀಮಿತ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಾತಿ ಮಾಡಿಕೊಂಡರೆ ಪ್ರತಿ ವಿದ್ಯಾರ್ಥಿಗಳ ಕಲಿಕೆಗೂ ಗಮನಕೊಡಲು ಸಾಧ್ಯವಾಗುತ್ತದೆ ಎಂಬುದು ಆಡಳಿತ ಮಂಡಳಿಯ ಆಶಯವಾದರೆ. ಶಿಲೆಯನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುವ ಪ್ರಯತ್ನ ಶಾಲೆಯ ಶಿಕ್ಷಕರ ವೃಂದದವರದು. ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಓದಿನ ಜೊತೆಗೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಜಿಲ್ಲೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೂ ತಮ್ಮ ಸಾಧನೆಯನ್ನು ಇಮ್ಮಡಿಗೊಳಿಸಿದ್ದಾರೆ.

ಕ್ರೀಡಾ ಸಾಧನೆ: ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯೂ ಕೇವಲ ಶಿಕ್ಷಣ ರಂಗದಲ್ಲಿ ಅಷ್ಟೆ ಅಲ್ಲದೆ ಕ್ರೀಡಾ ರಂಗದಲ್ಲಿಯೂ ಸಹ ತನ್ನ ಅದ್ವಿತೀಯ ಸಾಧನೆಯನ್ನು ಮೆರೆದಿದೆ. ಬರೀ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳನಷ್ಟೆ ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಸಂಸ್ಥೆಯ ಪ್ರತಿಭಾವಂತ ಕ್ರೀಡಾ ಪಟುಗಳಾದ ಆನಂದ್, ಜೀವನ್, ಸುಮಂತ್ ಪಾಟೀಲ್ ಇನ್ನೂ ಮುಂತಾದ ಕ್ರೀಡಾಪಟುಗಳು ಹಾಕಿಯಲ್ಲಿ ಭಾಗವಹಿಸಿ ಜಿಲ್ಲೆಯಿಂದ ರಾಜ್ಯ ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಕ್ರೀಡಾ ಪ್ರತಿಭೆಗಳಾಗಿ ಹೊರ ಹೊಮ್ಮಿದ್ದಾರೆ.

ರಾಷ್ಟ್ರ ಮಟ್ಟದ ವಾಲಿಬಾಲ್‌ನಲ್ಲಿ ಬಸವರಾಜ್‌, ಸುನೀಲ್, ಮನೋಜಕುಮಾರ್, ಪುಷ್ಕರ್, ಅಶೋಕ್, ಉಮಾಪತಿ, ಅವಿನಾಶ್, ಮಿರಜ್ ಕರ್ , ಸಚಿನ್, ಪ್ರಸನ್ನ, ಸ್ಪರ್ಶ , ಸ್ವರ್ಣ ಇನ್ನೂ ಮುಂತಾದ ಕ್ರೀಡಾ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಸಂಸ್ಥೆಯ ಮಡಿಲಿಗೆ ಅನೇಕ ಬಹುಮಾನಗಳನ್ನು ತಂದು ಕೊಟ್ಟ ಪ್ರತಿಭೆಗಳಾಗಿರುತ್ತಾರೆ.

      ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪ್ರವೀಣ್ ಕುಮಾರ್, ರಾಜೇಂದ್ರ ಪ್ರಸಾದ್, ರೀತು ರಾಮಚಂದ್ರ, ಲತಾ, ಸುನಿತ, ಮಾನಸ, ಪಕೃತಿ, ಪ್ರದೀಪ್, ರಿಯಾಜ್ ಸಾಬ್, ಮೋಹನ್, ಪ್ರದೀಪ್, ಉಮಾಪತಿ, ಶೃತಿ, ಇನ್ನೂ ಮುಂತಾದ ಕ್ರೀಡಾ ಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಗೆ ಭಾಜನರಾಗಿರುತ್ತಾರೆ.

      ಅಂತರ್‌ರಾಷ್ಟ್ರಮಟ್ಟದ ಕರಾಟೆಯಲ್ಲಿ ದೀಪ್ತಿ.ಪಿ.ಸಾನು, ಕೃತಿಕ ಎಂ. ಜೋಯ್ಸ್ ಭಾಗವಹಿಸಿ, ಉತ್ತಮ, ಆಟದ ಪ್ರದರ್ಶನ ನೀಡಿ ಬಂಗಾರದ ಪದಕ ಮತ್ತು ಸುಷ್ಮ .ಸಿ, ರಾಜ್ ಬೆಳ್ಳಿಯ ಪದಕಗಳನ್ನು ಸಂಸ್ಥೆಯ ಮಡಿಲಿಗೆ ತಂದು ಕೊಟ್ಟಿರುತ್ತಾರೆ. ಅದೇ ರೀತಿ ಭಾರತದ ಪ್ರಾಚೀನ ಕ್ರೀಡೆಯಾದ ಚದುರಂಗದಲ್ಲಿ ಸಂಸ್ಥೆಯ ಕ್ರೀಡಾ ಪಟುಗಳಾದ ಅನಿಲ್ ಶೆಟ್ಟಿ, ಸುನಿಲ್ ಶೆಟ್ಟಿ, ಸೌಮ್ಯ ವಾಜೆ, ಕೇದಾರ್ ವಾಜೆ ಯವರು ಭಾಗವಹಿಸಿ ಚದುರಂಗ ಕ್ರೀಡೆಯಲ್ಲಿ ಸಾಧಿಸಿದ ಶ್ರಮ ಅಪಾರ.

     ಹ್ಯಾಂಡ್ ಬಾಲ್ , ಖೋಖೋ, ಕ್ರಿಕೆಟ್ , ಟೇಬಲ್ ಟೆನ್ನಿಸ್ ಇನ್ನೂ ಮುಂತಾದ ವಿಭಾಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಶಸ್ತಿಗಳನ್ನು, ಬಂಗಾರದ ಪದಕಗಳನ್ನು ತಮ್ಮದಾಗಿಸಿ ಕೊಂಡಿದೆ.ಇಷ್ಟೆ ಅಲ್ಲದೇ ಅನೇಕ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ , ಅಂತರಾಷ್ಟ್ರಮಟ್ಟದಲ್ಲಿ ಆಡಿ ಬಂಗಾರದ ಪದಕಗಳನ್ನು ಪಡೆಯುವುದರೊಂದಿಗೆ ಕ್ರೀಡಾ ವಿದ್ಯಾರ್ಥಿ ವೇತನ ಮತ್ತು ಕ್ರೀಡಾ ಮೀಸಲಾತಿ ಅನ್ವಯದಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸ್ಥಾನಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಇಮ್ಮಡಿಗೋಳಿಸಿದ್ದಾರೆ.

ರಾಜ್ಯ ಮಟ್ಟದ ಎತ್ತರ ಜಿಗಿತದಲ್ಲಿ ಹೊಸ ದಾಖಲೆ ಬರೆದ ಗೌತಮಿ ಗೌಡ “


     ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ   ಗೌತಮಿಗೌಡ ಎತ್ತರ ಜಿಗಿತದಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭೆ.

    2022 – 23 ನೇ  ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ,ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಪೆಬ್ರವರಿ 19 ರಿಂದ 22 ರ ವರೆಗೆ  ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿ. 17 ವರ್ಷ ವಯೋಮಿತಿ ಒಳಗಿನ ವಿಭಾಗದ ಎತ್ತರ ಜಿಗಿತದಲ್ಲಿ 1.58 ಮೀಟರ್ ದಾಖಲೆಯ  ಇತಿಹಾಸ ನಿರ್ಮಿಸಿ ,ಬಂಗಾರದ ಪದಕ ಮುಡಿಗೇರಿಸಿಕೊಂಡ  ಶಿವಮೊಗ್ಗದ  ಹೆಮ್ಮೆಯ ಪ್ರತಿಭಾನ್ವಿತ ಕ್ರೀಡಾಪಟು ಗೌತಮಿ ಗೌಡ.
      ತುಮಕೂರು ನಡೆದ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು,  36 ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ಸ್  ಚಾಂಪಿಯನ್ ಶಿಫ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ.

“ಅಥ್ಲೆಟಿಕ್ಸ್  ನಲ್ಲಿ  ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ  ವಿದ್ಯಾರ್ಥಿಗಳು “

     10ನೇ ತರಗತಿ ಓದುತ್ತಿರುವ ಅವಳಿ ಸಹೋದರಿಯರಾದ ಗೌತಮಿ ಗೌಡ ಮತ್ತು ಗೌರಂಗಿ ಗೌಡ ಮತ್ತು ಎಂಟನೇ ತರಗತಿ ವಿದ್ಯಾರ್ಥಿಯಾದ ನಿತಿನ್ ಸಿಂಗ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಥ್ಲೆಟಿಕ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ, ರಾಜ್ಯಮಟ್ಟದ ಅಮೆಚೂರ್ ಅಥ್ಲೆಟಿಕ್ಸ್ ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿ. 16 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಗೌತಮಿ ಗೌಡ ಎತ್ತರ ಜಿಗಿತದಲ್ಲಿ 1.65 ಮೀಟರ್ಸ್ ಜಿಗಿದು ಬಂಗಾರದ ಪದಕ ಪಡೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಗೌರಂಗಿ, ಗೌಡ 80ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. 14 ವರ್ಷ ವಯೋಮಿತಿಯೊಳಗಿನ ವಿಭಾಗದ ಉದ್ದ ಜಿಗಿತದಲ್ಲಿ ನಿತಿನ್ ಸಿಂಗ್ 5.57 ಮೀಟರ್ಸ್ ಜಿಗಿದು ಬಂಗಾರದ ಪದಕ ಪಡೆದಿರುವುದು  ಹೆಮ್ಮೆಯ  ವಿಚಾರ.
ಚುಂಚಾದ್ರಿ  ವಾಲಿಬಾಲ್ ಕಪ್ :-

ಸ್ವಾತಂತ್ರೋತ್ಸವ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಪ್ರೌಢ ಶಾಲೆಯ ಬಾಲಕ ಮತ್ತು ಬಾಲಕಿಯರಿಗಾಗಿ 2000ನೇ ಸಾಲಿನಿಂದ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಇವರ ವತಿಯಿಂದ ನಡೆಯುತ್ತ ಬರುತ್ತಿದ್ದು, ಈ ಕ್ರೀಡೆ ನಡೆಸುವ ಉದ್ದೇಶ ಶಿವಮೊಗ್ಗ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳಕಿಗೆ ತರುವುದು. ಈಗ ಸುಮಾರು, ಬಾಲಕ ಬಾಲಕಿಯರು, ವಾಲಿಬಾಲ್ ಕ್ರೀಡೇಯಲ್ಲಿ ಭಾಗವಹಿಸಿ, ದೇಶಕ್ಕೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ಈಗಲೂ ಅನೇಕ ಪ್ರತಿಭಾವಂತ ಕ್ರೀಡಾ ಪಟುಗಳು, ಚುಂಚಾದ್ರಿ ಕಪ್, ವಾಲಿಬಾಲ್ ನಿಂದ ಉತ್ತೇಜಿತರಾಗಿ ದೇಶದ ವಿವಿಧ ಕಂಪನಿಗಳಲ್ಲಿ ಸೇವೆಸಲ್ಲಿಸುವಂತಹ ಅವಕಾಶವನ್ನು ಪಡೆದುಕೊಂಡಿದ್ದಾರೆ. ಚುಂಚಾದ್ರಿ ಕಪ್ ವಾಲಿಬಾಲ್‌ನಲ್ಲಿ ಶ್ರೀ ಆದಿಚುಂಚನಗಿರಿ ಪ್ರೌಢ ಶಾಲೆಯ ಬಾಲಕರು ಆರು ಬಾರಿ – ಟ್ರೋಫಿಯನ್ನು ತಮ್ಮದಾಗಿಸಿಕೊಂಡರೆ, ಅದೇ ರೀತಿ ಬಾಲಕಿಯರು ಐದು ಬಾರಿ ತಮ್ಮದಾಗಿಸಿಕೊಂಡಿರುವುದು ವಿಶೇಷ.

ಕ್ರೀಡೆ ಬೆಳೆಯಲು ಕಾರಣ:

ಯುವಜನಾಂಗದಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಯೋಗ್ಯ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಅವರ ಬದುಕನ್ನು ರೂಪಿಸುವ ಪ್ರಯತ್ನಕ್ಕಾಗಿ ಶಿವಮೊಗ್ಗ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಅನೇಕ ಸಂಸ್ಥೆಗಳ ಕ್ರೀಡಾ ತಜ್ಞರ ಮತ್ತು ತರಬೇತುದಾರರ ಒಂದು ತಂಡ ಅಸ್ತಿತ್ವಕ್ಕೆ ಬಂದಿರುವುದರಿಂದ ಇವತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ.

      ವಿದ್ಯಾ ಸಂಸ್ಥೆಯಿಂದ ಕ್ರೀಡೆಯಲ್ಲಿ ಉತ್ತಮ ತರಬೇತಿಯನ್ನು ನೀಡಿ, ಕ್ರೀಡಾ ಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದಲ್ಲಿ ಮೆರೆಯುವಂತೆ ಮಾಡಿದೆ. ಇತ್ತೀಚೆಗೆ ಕೊಡುಗೆಯಾಗಿ ನೀಡಿದ ವಾಲಿಬಾಲ್‌ನಲ್ಲಿ ಅಶೋಕ್ ಎನ್ ರಷ್ಯಾದಲ್ಲಿ ನಡೆದ ಅಂತರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಕೂಟದ ಭಾರತ ತಂಡದಲ್ಲಿ ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ ಪ್ರಥಮ ಸ್ಥಾನ ತಂದು ಕೊಟ್ಟಿರುತ್ತಾರೆ. ಆ ಪಂದ್ಯದಲ್ಲಿ ಅವರಿಗೆ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಲಭಿಸಿವೆ. ಈತ ಭಾರತ ತಂಡದಲ್ಲಿ ಮಿನುಗು ನಕ್ಷತವಾಗಿ ಸಂಸ್ಥೆಯ ಹಾಗೂ ದೇಶದ ಕೀರ್ತಿಯನ್ನು ಶಿಖರಕ್ಕೇರಿಸಿದ್ದಾನೆ. ಕ್ರೀಡಾ ಸಾಧನೆಯಿಂದ ಈತನಿಗೆ ಭಾರತ ಸರ್ಕಾರ ಈತನ ಸಾಧನೆಯನ್ನು ಮೆಚ್ಚಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಸಹಾ ಕೊಟ್ಟಿರುತ್ತಾರೆ . ಪ್ರಸ್ತುತ ಇವರು ಭಾರತ ತಂಡದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಆತನ ಸಾಧನೆ ಇನ್ನೂ ಮುಂದುವರೆಯಲಿ ಎಂದು ಸಂಸ್ಥೆಯು ಆಶಿಸುತ್ತದೆ.

      ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ 2009 ರಿಂದ ಎನ್.ಸಿ.ಸಿ. ಪ್ರಾರಂಭಗೊಂಡಿದ್ದು ಗಣರಾಜ್ಯೋತ್ಸವದ ಫ್ರೆರಡ್‌ಗಳಲ್ಲಿ ಪ್ರತಿವರ್ಷ ಇಬ್ಬರೂ ಮಕ್ಕಳು ಭಾಗವಹಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳಿಂದ ಹದಿನೇಳೂ ಸಾವಿರ ಮಕ್ಕಳು ಭಾಗವಹಿಸುತ್ತಾರೆ.ಅದರಲ್ಲಿ ಒಂಬತ್ತೂ ಜನ ಮಾತ್ರ ಆಯ್ಕೆಯಾಗುತ್ತಾರೆ . ಅವರಲ್ಲಿ ಸಂಸ್ಥೆಯ ಎರಡು ಮಕ್ಕಳು ಆಯ್ಕೆಯಾಗಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಅಕ್ಷಯ್, ನಿರಂಜನ್, ಅಕ್ಷಯ್ ಕುಮಾರ್, ಅಜಯ್ ಕುಮಾರ್, ಧೀಮಂತ, ಬಿಂದನ್, ಸುಮಂತ್ ಜಿ ಗೌಡ ದೆಹಲಿ ಫೆರೇಡ್‌ನಲ್ಲಿ ಭಾಗವಹಿಸಿ ಜಿಲ್ಲೆ ರಾಜ್ಯ ಮತ್ತು ಸಂಸ್ಥೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ ಪ್ರತಿಭೆಗಳಾಗಿದ್ದಾರೆ.

 ಸಾಂಸ್ಕೃತಿಕ ಸಾಧನೆ: ವಿದ್ಯೆವೆಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಬೋಧಿಸುವ ಪುಸ್ತಕದ ಜ್ಞಾನಕಷ್ಟೇ ಸೀಮಿತವಾಗಿರಬಾರದು. ಮಕ್ಕಳು ಭವಿಷ್ಯದಲ್ಲಿ ನೀತಿವಂತರು, ಪ್ರಮಾಣಿಕರು, ಸಾಮಾಜಿಕ ಕಳಕಳಿಯುಳ್ಳವರೂ ಆಗುವುದರ ಜೊತೆಗೆ ಸಂಸ್ಕೃತಿ ಹಾಗೂ ಸಂಸ್ಕಾರ ಉಳ್ಳವರಾಗಿರಬೇಕು ಈ ಎಲ್ಲಾ ಅಂಶಗಳನ್ನು ಮನಗಂಡು ಮಕ್ಕಳನ್ನು ಹತ್ತು ಹಲವು ಕ್ರೀಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ. ಈಗ್ಗೆ ಕೆಲವು ವರ್ಷಗಳಿಂದ ಪೂಜ್ಯರ ಮಾರ್ಗದರ್ಶನದ ಮೇರೆಗೆ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಚುಂಚಾದ್ರಿ ಕಲೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ .
ಶ್ರೀಗಳಿಂದ ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನೆ :
ಶಿವಮೊಗ್ಗ  ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ  ಚಿಣ್ಣರ ಬೇಸಿಗೆ ಶಿಬಿರವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮಕ್ಕಳದೇ ಕಲರವ.
ಈ ಕಾರ್ಯಕ್ರಮದಲ್ಲಿ ಮಕ್ಕಳ ಉಡುಗೆ-ತೊಡುಗೆ ಹಾವಾ-ಭಾವ, ಹೊಸದೊಂದು ಲೋಕವನ್ನು, ಮಕ್ಕಳ ಪ್ರಪಂಚವನ್ನು ತೆರೆದಿಟ್ಟಿತ್ತು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯು   ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಅಲ್ಲಿ ಚಿತ್ರಕಲೆ, ಸಂಗೀತ-ನೃತ್ಯ ವೇದಿಕ್ ಮ್ಯಾಥೆಮೇಟಿಕ್ಸ್, ಯೋಗ,ಧ್ಯಾನ, ಕ್ಯಾಲಿ ಗ್ರಫಿ ಬರವಣಿಗೆಗಳು,ಒಂಟೆ, ಎತ್ತಿನಗಾಡಿ, ಈಜು, ದೇಶೀಯ ಕ್ರೀಡೆಗಳನ್ನು ಒಳಗೊಂಡ ಮಕ್ಕಳ ಕಲಿಕೆಯನ್ನು ವೀಕ್ಷಿಸಿದ ಶ್ರೀಗಳು, ಕಾರ್ಯಕ್ರಮ ರೂಪಿಸಿದ ಶ್ರೀಆದಿ ಚುಂಚನಗಿರಿ ಶಿಕ್ಷಕ ವೃಂದವನ್ನು ಶ್ಲಾಘಿಸಿದರು.

ಬಿಜಿಎಸ್ ಕಿಡ್ಸ್ ಉದ್ಘಾಟನೆ :-
ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಾಣವಾಗಿರುವ ಮಕ್ಕಳ ಮನೋ ಕಲಿಕೆಗೆ ಪೂರಕವಾದ ವಿನೂತನ ‘ಬಿ ಜಿ ಎಸ್ — ಕಿಡ್ಸ್ ‘ ಕಟ್ಟಡವನ್ನು ಶ್ರೀಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರು ದಿವ್ಯ ಸಾನಿಧ್ಯವಹಿಸಿ ಉದ್ಘಾಟಿಸಿದರು.

         ಈ ಕಟ್ಟಡವು ವಿನೂತನ ಮಾದರಿಯಲ್ಲಿದೆ, ಕಲಿಕೆಯ ಶಾಲೆಗೆ ಪುಟ್ಟ ಹೆಜ್ಜೆ ಇಡುವ ಪುಟಾಣಿಗಳ ಆಸಕ್ತಿ ಕೆರಳಿಸುವ, ಕಲಿಕೆಗೆ ಉತ್ತೇಜಿಸುವ ಚಿತ್ರಗಳು ಹಾಗೂ ಆಸಕ್ತಿದಾಯಕ ವಸ್ತುಗಳನ್ನು ಒಳಗೊಂಡ ಈ ಕಟ್ಟಡ ಜಿಲ್ಲೆಯಲ್ಲಿ ಅತ್ಯಂತ ವಿಭಿನ್ನ ಎನ್ನಲಾಗಿದೆ.

     ನರ್ಸರಿ, ಎಲ್ಕೆಜಿ, ಯುಕೆಜಿ ಮಕ್ಕಳಿಗಾಗಿ ರೂಪಿತಗೊಂಡ ನವೀನ ಕಟ್ಟಡದ ಶೈಲಿ ಹಾಗೂ ವಿನೂತತೆಗೆ ಶ್ರೀಗಳು ಪ್ರಶಂಸಿಸಿದರು, ಇದೇ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಯವರು ದಿವ್ಯ ಉಪಸ್ಥಿತಿ ವಹಿಸಿದ್ದರು.

     ಈ ವಿದ್ಯಾಪೀಠದಲ್ಲಿ ಓದಿನ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ಅಪಾರವಾದ ಸಾಧನೆಯನ್ನು ಮಾಡಿ ರಾಜ್ಯಾಂದಂತ ಜನ ಮಣ್ಣನೆ ಗಳಿಸಿದ್ದಾರೆ. ದೂರವಾಣಿ, ಆಕಾಶವಾಣಿಯಲ್ಲಿಯೂ ಇವರು ಕಾರ್ಯಕ್ರಮ ಕೊಟ್ಟಿರುವುದು ನಮಗೆ ಬಹಳ ಹರ್ಷವನ್ನು ತಂದಂತಹ ವಿಚಾರವಾಗಿದೆ. ಚಿತ್ರಕಲೆಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಇಲ್ಲಿಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿಯೂ ಅನೇಕ ಪ್ರಶಸ್ತಿ ಬಹುಮಾನಗಳನ್ನು ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

      ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯೂ ಉತ್ತಮ ಹಾಗೂ ಅನುಭವಿ ಶಿಕ್ಷಕರನ್ನು ಮತ್ತು ಉತ್ತಮ ಉಪನ್ಯಾಸಕರನ್ನು ಹೊಂದಿದ್ದು ಉತ್ತಮ ಪಾಠ ಪ್ರವಚನಗಳನ್ನು ಮಕ್ಕಳಿಗೆ ನೀಡುತ್ತ ಬಂದಿದೆ ಅಷ್ಟೇ ಅಲ್ಲದೇ ದೈಹಿಕ ಶಿಕ್ಷಕ, ಸಾಂಸ್ಕೃತಿಕ ವಿಭಾಗದಲ್ಲಿಯೂ ಕೂಡ ನುರಿತ ತರಬೇತುದಾರರನ್ನು ಹೊಂದಿರುತ್ತದೆ. ಈ ಎಲ್ಲಾ ಮಜಲುಗಳು ಮೇಲೈಸಿದ್ದರಿಂದ ಸಂಸ್ಥೆಯು ಬೆಳೆಯಲು ಸಹಕಾರಿಯಾಗಿದೆ. ಹೀಗೆ ಬೆಳೆಯುತ್ತ ಇನ್ನೂ ಅನೇಕ ತನ್ನದೇ ಆದ ಸಾಧನೆಯನ್ನು ಮಾಡಲಿ, ತನ್ನ ಕೀರ್ತಿಯ ಕಹಳೆಯನ್ನು ರಾಜ್ಯ ರಾಷ್ಟ್ರ, ಅಂತರಾಷ್ಟ್ರಮಟ್ಟದಲ್ಲಿ ಮೊಳಗಿಸಲಿ ಎಂದು ಎಲ್ಲರೂ ಹಾರೈಸೋಣ.

     

Exit mobile version