Site icon TUNGATARANGA

ಜೈನ ಮುನಿ ಮಹಾರಾಜರ ಭೀಕರ ಹತ್ಯೆ ಖಂಡನೀಯ | ತನಿಖೆಗೆ ಆಗ್ರಹಿಸಿದ ಬಿ.ವೈ.ರಾಘವೇಂದ್ರ


ಗರ(ಶಿವಮೊಗ್ಗ),ಜುಲೈ,೧೦: ಜೈನ ದಿಗಂಬರ ಮುನಿ ಮಹಾರಾಜರ ಭೀಕರ ಹತ್ಯೆ ಖಂಡನೀಯ, ರಾಜ್ಯ ಸರ್ಕಾರ ಹತ್ಯೆ ನಡೆದು ೩ ದಿನ ಕಳೆದರೂ ಸರಿಯಾದ ತನಿಖೆ ನಡೆಸದೆ ಕೇವಲ ಹಣಕಾಸಿನ ವಿಚಾರಕ್ಕೆ ಎಂದು ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಆರೋಪಿಸಿದರು.


ಅವರು ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬಿ ಜೆ ಪಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆ ಉದ್ದೇಸಿಸಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ನಂದಿಪರ್ವತದಲ್ಲಿ ಚಾತುರ್ಮಾಸ ಆಚರಿಸುತ್ತಿದ್ದ ಜೈನ ದಿಗಂಬರ ಮಿನಿಯವರನ್ನು ಹತ್ಯೆ ಮಾಡುವ ಮೂಲಕ ಸಮಾಜದ ಶಾಂತಿ ಕದಡುವ ಕೃತ್ಯಕ್ಕೆ ಕೈಹಾಕಿರುವ ದುಷ್ಕರ್ಮಿಗಳ ಬಂಧಿಸಿ ಪ್ರಕರಣ ಬೇದಿಸಬೇಕು ಎಂದು ಒತ್ತಾಯಿಸಿದರು.


ಹಿಂದೂ ಸನಾತನ ಸಂಸ್ಕೃತಿಯಲ್ಲಿ ಚಾತುರ್ಮಾಸಕ್ಕೆ ಹೆಚ್ಚಿನ ಮಹತ್ವವಿದೆ.೪ ತಿಂಗಳು ಧಾರ್ಮಿಕ ಚಟುವಟಿಕೆಗಳನ್ನು ತೀವ್ರಗೊಳಿಸುವ ಮೂಲಕ ಲೋಕಕಲ್ಯಾಣವನ್ನು ಬಯಸುವ ಪರ್ವ ಕಾಲದಲ್ಲಿ ಸಾದು ಸಂತರ ಕೊಲೆ ಮಾಡುವಂತಹ ನೀಚ ಸಂಸ್ಕೃತಿಯನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.


ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ಮೈಸೂರು ಜಿಲ್ಲೆ ವ್ಯಾಪ್ತಿ ಯುವಕನ ಹತ್ಯೆ ಆಗಿದೆ. ಈ ಸರ್ಕಾರ ಬರುತ್ತಿದ್ದಂತೆ ಕಿಡಿಗೇಡಿಗಳಿಗೆ ದುಷ್ಟಕೃತ್ಯ ಎಸಗಲು ಪ್ರಚೋದನೆ ದೊರೆಯುತ್ತಿದೆ.
ಇಂತಹ ಪ್ರಕರಣಗಳ ಕುರಿತು ಕಠಿಣ ಕಾಣುನು ಕ್ರಮ ಕೈಗೊಳ್ಳುವ ಮೂಲಕ ದುಷ್ಟ ಕೃತ್ಯಗಳು ಮರುಕಲಿಸದಂತೆ ಕ್ರಮವಹಿಸುವಂತೆ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರು ಟಿ ಡಿ ಮೇಘರಾಜ್ ಸೇರಿದಂತೆ ಬಿಜೆಪಿ ಮಾಜಿ ಶಾಸಕ ಹಾಲಪ್ಪ ಮತ್ತು ಮುಖಂಡರುಗಳು ಉಷ್ಠಿತರಿದ್ದರು

Exit mobile version