Site icon TUNGATARANGA

ಗುಡ್ಡೇಕಲ್ ಆವರಣದಲ್ಲಿ ಸಡಗರ, ಭಕ್ತಿ ಪರಾಕಾಷ್ಟೆ, ಎತ್ತರದ ವಿಗ್ರಹ ಸ್ಥಾಪನೆಗೆ ಶಿಲಾನ್ಯಾಸ ಹೇಗಿತ್ತು ನೋಡಿ

ಶಿವಮೊಗ್ಗ, ಜು.೧೦:
ಇಲ್ಲಿನ ಗುಡ್ಡೆಕಲ್ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆವರಣಲ್ಲಿ ವಿಶೇಷ ಪೂಜೆ, ಕುಂಭಾಬಿಷೇಕ, ದೇವಾಲಯಗಳ ಅಷ್ಟ ಬಂಧನ ಜೊತೆಗೆ ವಿಶೇಷವಾಗಿ ವಿಶ್ವದ ಅತಿ ಎತ್ತರದ ಶ್ರೀ ಬಾಲಸುಬ್ರಮಣ್ಯ ದೇವರ ವಿಗ್ರಹವನ್ನು ನಿರ್ಮಿಸಲು ಶಿಲಾನ್ಯಾಸ ಸಮಾರಂಭ ಸಡಗರ ಹಾಗೂ ಶ್ರದ್ದಾ ಭಕ್ತಿಯಿಂದ ನಡೆಯಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿ ಟ್ರಸ್ಟ್‌ನ ಕಾರ್ಯವನ್ನು ಪ್ರಶಂಸಿಸುವ ಜೊತೆಗೆ ಶಿಲಾನ್ಯಾಸ ನೆರವೇರಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಈ ಜಾಗ ಸದ್ಭಳಕೆಯಾಗುತ್ತಿದೆ. ಇದು ಪ್ರವಾಸೋದ್ಯಮದ ತಾಣವಾಗಲಿದೆ ಎಂದು ಪ್ರಶಂಸಿದರು.
ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿ ಬರಗಾಲದ ಸೂಚನೆ ಕಾಣುತ್ತಿದೆ. ಸರ್ಕಾರದ ಮೇಲೆ ಹೆಚ್ಚಾಗಿ ಅವಲಂಬಿತರಾಗದೇ ಭಕ್ತರು ಶಕ್ತಿಗಾನುಸಾರ ಧನಸಹಾಯ ಮಾಡುವ ಮೂಲಕ ವಿಶ್ವದ ಅತಿ ಎತ್ತರದ ವಿಗ್ರಹ ನಿರ್ಮಾಣಕ್ಕೆ ನೆರವು ನೀಡುವಂತೆ ಕೋರಿದರು.


ವಿಶೇಷವೆಂದರೆ ಇದೇ ಜಾಗದಲ್ಲಿ ಸುಮಾರು ೪೨ ಕೋಟಿ ವೆಚ್ಚದ ರೈಲ್ವೆ ಮೇಲ್ಸೆತುವೆ ನಿರ್ಮಾಣವಾಗುತ್ತಿದೆ. ಇಲ್ಲಿ ಇಂತಹ ವಿಗ್ರಹ ಬಂದರೆ ಪ್ರವಾಸೋದ್ಯಮಕ್ಕೆ ಹಾಗೂ ಶಿವಮೊಗ್ಗಕ್ಕೆ ಮತ್ತೊಂದು ಬಗೆಯ ಕಳೆ ಬರಲಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ದೇಶವೇ ಶಿವಮೊಗ್ಗ ನಗರದತ್ತ ತಿರುಗಿ ನೋಡುವತ್ತಾ ಇಂತಹ ಕಾರ್ಯ ಉತ್ತಮವಾಗಿದೆ. ಇದಕ್ಕೆ ಹಣದ ಬಗ್ಗೆ ಯೋಚಿಸಬೇಡಿ, ರಾಗಿಗುಡ್ಡದಲ್ಲಿ ೫ ಕೋಟಿ ಬಿಡುಗಡೆಯಾಗಿದ್ದು, ಅದನ್ನು ಬಳಸಿಕೊಳ್ಳಲು ಸ್ಥಳೀಯ ಶಾಸಕರು ಹಾಗೂ ಸಚಿವರ ನೆರವು ಪಡೆಯಿರಿ ಎಂದರು.


ಶಿವಮೊಗ್ಗ ನಗರದಲ್ಲಿ ಸುಮಾರು ೨೦ ಸಾವಿರ ತಮಿಳು ಸಮಾಜದ ಜನರಿದ್ದಾರೆ ಅವರು ಹೊಸ ಯೋಜನೆ ಮಾಡುವ ಯೋಚನೆ ಇಂದು ಬಂದಿರುವುದು ಸೂಕ್ತವಾಗಿದೆ. ಸಕಾಲದಲ್ಲಿ ಕಾರ್ಯವನ್ನು ಮುಗಿಸಿ ಎಂದು ಹೇಳಿದರು.
ಸ್ಥಳೀಯ ಶಾಸಕ ಎಸ್.ಚನ್ನಬಸಪ್ಪ ಅವರು ಮಾತನಾಡುತ್ತಾ, ತಮಿಳು ಸಮಾಜದ ಹಾಗೂ ಟ್ರಸ್ಟ್‌ನ ಈ ಕಾರ್ಯಕ್ರಮದ ಯಶಸ್ವಿಗೆ ನೆರವು ನೀಡಲು ತಾವು ಸದಾ ಸಿದ್ದ ಎಂದು ಹೇಳಿದರು.


ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿ ಕಾರ್ಯಕ್ರಮದ ಸಾನಿಧ್ಯವಹಿಸಿ ಶಿಲಾನ್ಯಾಸ ಹಾಗೂ ಕುಂಭಾಬಿಷೇಕ ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀ ಬಾಲಸುಬ್ರಮಣ್ಯ ಟ್ರಸ್ಟ್‌ನ ಅಧ್ಯಕ್ಷ ಡಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪಾಲಿಕೆ ಮೇಯರ್ ಶಿವಕುಮಾರ್, ಸದಸ್ಯೆ ಯಮುನಾ ರಂಗೇಗೌಡ, ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಪಿ.ಸಂಪತ್ ಕುಮಾರ್, ಕಾರ್ಯದರ್ಶಿ ಪಿ ರಘುಕುಮಾರ್, ಸಹಕಾರ್ಯದರ್ಶಿ ಲೋಕೇಶ್, ಖಜಾಂಚಿ ರವಿಕುಮಾರ್, ನಿರ್ದೇಶಕರಾದ ಎಂ.ರಾಜು, ಪಿ.ಸುಬ್ರಮಣಿ, ಎಂ.ಸುಬ್ರಮಣಿ, ಸಿ.ರವಿ, ವಿಗ್ರಹ ಸಮಿತಿಯ ವಿಜಿಯನ್, ಅರ್ಜುನ್, ಆತ್ಮರಂಗಧೋಳ್, ಕೆ.ಸುಬ್ರಮಣಿ, ಮಾಜಿ ಸದಸ್ಯ ಮೋಹನ್ ರೆಡ್ಡಿ, ಎಂ.ಪಿ.ಗಣೇಶ್ ಹಾಗೂ ಇತರರಿದ್ದರು.

Exit mobile version