Site icon TUNGATARANGA

ಎನ್‌ಎಸ್‌ಯುಐನಿಂದ ಕುವೆಂಪು ವಿವಿಗೆ ಮುತ್ತಿಗೆ | ಅಕ್ರಮಗಳನ್ನು ತಡೆಗೆ ಒತ್ತಾಯ

ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು ಗಳಲ್ಲಿ ಅವ್ಯವಸ್ಥೆ ಸರಿಪಡಿಸಿ, ಅಕ್ರಮಗಳನ್ನು ತಡೆಗೆ ಆಗ್ರಹಿಸಿ ಎನ್‌ಎಸ್‌ಯುಐ ವತಿಯಿಂದ ಶಂಕರಘಟ್ಟದ ಕುವೆಂಪು ವಿವಿಗೆ ಮುತ್ತಿಗೆ ಹಾಕಲಾಯಿತು.


ರಾಜ್ಯದಲ್ಲಿ ಕುವೆಂಪು ವಿವಿಗೆ ಒಳ್ಳೆಯ ಹೆಸರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಯಲ್ಲಾಗುತ್ತಿರುವ ಅಹಿತಕರ ಬೆಳವಣಿಗೆಗಳಿಂದ ವಿವಿ ಗೌರವಕ್ಕೆ ಧಕ್ಕೆಯಾ ಗುತ್ತಿರುವು ದಲ್ಲದೆ,

ವಿದ್ಯಾರ್ಥಿಗಳ ಅಭ್ಯುದ ಯಕ್ಕೆ ಆತಂಕವಾಗುತ್ತಿದ್ದು, ಇದನ್ನು ಎನ್.ಎಸ್. ಯು.ಐ. ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಹಲವು ಬಾರಿ ನಾವು ದೂರು ಕೊಟ್ಟಿದ್ದರೂ ಪ್ರಯೋಜನ ವಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು.


ಅತಿಥಿ ಉಪನ್ಯಾಸಕರನ್ನು ಅಕ್ರಮ ವಾಗಿ ನೇಮಕದಲ್ಲಿ ನಿಯಾವಳಿಗಳನ್ನು ಗಾಳಿಗೆ ತೂರಲಾಗಿದೆ. ವಿದ್ಯಾರ್ಥಿ ವೇತನ ನುಂಗಿ ಹಾಕಲಾಗಿದೆ. ಲ್ಯಾಪ್ ಟ್ಯಾಪ್ ಕಳುವಿನ ಆರೋಪ ಇರುವವರನ್ನು ಹಣಕಾಸು ವಿಭಾಗದ ಮುಖ್ಯಸ್ಥನನ್ನಾಗಿಸಿ ಮತ್ತಷ್ಟು ಭ್ರಷ್ಟಾಚಾರ ಎಸಗಲು ಅವಕಾಶ ಮಾಡಿಕೊಡಲಾಗಿದೆ ಎಂದು ದೂರಿದರು.


ಅತಿಥಿ ಉಪನ್ಯಾಸಕರ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸಬೇಕು. ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು. ವಿವಿಯ ಎಲ್ಲಾ

ಕಾಲೇಜುಗಳಿಗೆ ಕಂಪ್ಯೂ ಟರ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಬೇಕು.ಚಾರಿಗಳ ವಜಾ ಮಾಡಬೇಕು ಸೇರಿದಂತೆ ಹಲವು ಬೇಡಿ ಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.


ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ, ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಕಾಂಗ್ರೆಸ್ ಯುವ ಮುಖಂಡರಾದ ಮುರುಗೇಶ್, ರವಿಕುಮಾರ್, ಹರ್ಷಿತ್, ರವಿ ಕಾಟಿಕೆರೆ, ಧವನ್ ರಾಜ್, ನಿಸಾರ್, ಸಾಗರ್ ಕಂಡ್ರೆ, ಭಾಷಾ, ಚರಣ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version