Site icon TUNGATARANGA

shimoga / ಮಲೆನಾಡಿನಲ್ಲಿ ಮಳೆ ಅಬ್ಬರ ಹುಲಿಕಲ್‌ನಲ್ಲಿ ಅತ್ಯಧಿಕ 161 ಮಿ.ಮೀ. ಮಳೆ

ಹೊಸನಗರ : ಕಳೆದ ಎರಡ್ಮೂರು ದಿನಗಳಿಂದ ಮಲೆನಾಡಿನಲ್ಲಿ ಮಳೆ ಅಬ್ಬರ ಜೋರಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿದೆ. ಗುರುವಾರ ಬೆಳಿಗ್ಗೆ

8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ  ಹುಲಿಕಲ್‌ನಲ್ಲಿ ಅತ್ಯಧಿಕ 161 ಮಿ.ಮೀ. ಮಳೆ ದಾಖಲಾಗಿದೆ.

ಉಳಿದಂತೆ ತಾಲೂಕಿನ ಮಾಸ್ತಿಕಟ್ಟೆ 158, ಮಾಣಿ 156,

ಯಡೂರು 127, ಸಾವೇಹಕ್ಲು 120 ಚಕ್ರಾನಗರ 109, ನಗರ 62.2, ಹುಂಚ  43.2 ಮತ್ತು ರಿಪ್ಪನ್‌ಪೇಟೆಯಲ್ಲಿ 28.2 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಇನ್ನೂ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ

1744.4 ಅಡಿ ತಲುಪಿದೆ. ಜಲಾಶಯಕ್ಕೆ 15466 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯ 1819 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿದೆ.

Exit mobile version