Site icon TUNGATARANGA

ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ಲೆಕ್ಕಕೊಡದ ಪಿಡಬ್ಲುಡಿ ಇಇ ವಿರುದ್ದ ಮಾಹಿತಿ ಹಕ್ಕು ಆಯೋಗಕ್ಕೆ ದೂರು/ IMP NEWS…?! Visit tungataranga.com


ಫೊಒಟ-
ಶಿವಮೊಗ್ಗ,2023-7-05:

ಕಳೆದ ಫೆ. 27ರಂದು ಉದ್ಘಾಟನೆಯಾದ ಶಿವಮೊಗ್ಗದ ವಿಮಾನ ನಿಲ್ದಾಣದ ಪೂರ್ವ ಸಿದ್ಧತೆ ಮತ್ತು ಕಾರ್ಯಕ್ರಮದ ದಿನದವರೆಗೂ ಮಾಡಿದ ಅಷ್ಟೂ ಖರ್ಚು ವೆಚ್ಚಗಳ ಸಮಗ್ರ ಕಡತ ಕೊಡಿರೆಂದು ಅರ್ಜಿ ಸಲ್ಲಿಸಿದ್ದರೂ ಯಾವುದೇ ಮಾಹಿತಿ ಕೊಡದ ಹಿನ್ನೆಲೆಯಲ್ಲಿ ಪಿಡಬ್ಲುಡಿ ಕಾರ‍್ಯಪಾಲಕ ಇಂಜಿನಿಯರ್ ವಿರುದ್ಧ ಮಾಹಿತಿ ಹಕ್ಕು ಕಾಯ್ದೆಯ ೪(೩), ೪(೪)ರಡಿ ಕಚೇರಿಯಲ್ಲಿಯ ಕಡತ ಪರಿವೀಕ್ಷಿಸಲು ಅರ್ಜಿ ಸಲ್ಲಿಸಿ, ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.


ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ KRS ಜಿಲ್ಲಾಧ್ಯಕ್ಷ ಪ್ರಭು ಎಸ್ ಕೊಮ್ಮನಾಳು ಮತ್ತು ಕಾರ‍್ಯಾಧ್ಯಕ್ಷ ಮಂಜುನಾಥ ಹಿರೇಚೌಟಿ, ಕಾರ್ಯಪಾಲಕ ಇಂಜಿನೀಯರ್ ಸಂಪತ್ ಕುಮಾರ್ ಪಿಂಗ್ಳೆ ತಮ್ಮ ವಿಭಾಗ ವ್ಯಾಪ್ತಿಯಲ್ಲಿ ಯಾವುದೇ ಖರ್ಚು ವೆಚ್ಚವನ್ನು ಭರಿಸಿರುವುದಿಲ್ಲವೆಂದು ತಿಳಿಸಿದ್ದು ಆಶ್ಚರ್ಯ ಮತ್ತು ಆಘಾತವನ್ನು ಉಂಟುಮಾಡಿದೆ. ಇದಾದ ಮೇಲೆ ಲೋಕೋಪಯೋಗಿ ವಲಯ ಕೇಂದ್ರ ಕಚೇರಿಗೆ ಭೇಟಿ ಕೊಟ್ಟು ಅವರು ಸರಿಯಾದ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿರುವರೇ ಎಂದು ವಿಚಾರಿಸಿ ಖಾತ್ರಿಪಡಿಸಿಕೊಂಡಿದ್ದೇವೆ. ನಂತರ ಇಲಾಖೆಯ ಸಿಬ್ಬಂದಿಯೊಂದಿಗೆ ಸಂಕ್ಷಿಪ್ತವಾಗಿ ಚರ್ಚಿಸಿದ್ದು ಅವರು ಮೇಲ್ಮನವಿ ಸಲ್ಲಿಸಲು ಸಲಹೆಯಿತ್ತಿದ್ದಾರೆ ಎಂದು ವಿವರಿಸಿದರು.


ಮಾ.
3ರಂದು ಈ ಬಗ್ಗೆ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದು, ಇವರು ಅದನ್ನು ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿದ್ದರು. ನಂತರ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ವಿಶೇಷ ವಿಭಾಗಕ್ಕೆ ವರ್ಗಾವಣೆ ಮಾಡಿ ಪ್ರತಿಯನ್ನು ಅಧೀಕ್ಷಕ ಇಂಜಿನಿಯರ್ ಲೋಕೋಪಯೋಗಿ ವೃತ್ತಕ್ಕೆ ಸೂಕ್ರ ಕ್ರಮಕ್ಕೆ ಸಲ್ಲಿಸಿದ್ದಾರೆಂದು ವಿವರಿಸಿದರು.
ಇದೇ ವೇಳೆ ರಾಜ್ಯ ರಸ್ತೆ ಸಾರಿಗೆ ನಿಗಮ ಕಾರ್ಯಕ್ರಮಕ್ಕೆ ನೀಡಿದ್ದ ೧೬೦೦ ಬಸ್ಸುಗಳ ಸಂಬಂಧ ಹಣ ಪಾವತಿ ಮಾಡಿರುವವರು ಕಾರ್ಯಪಾಲಕ ಇಂಜಿನಿಯರ್ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನು ಅವರ ಮುಂದಿಟ್ಟಾಗ ಡೇಟ್ ನೋಡಿ ಡೇಟ್ ಎಂದಷ್ಟೇ ಹೇಳಿ ನುಣಚಿಕೊಂಡಿದ್ದು, ನಾನು ಅರ್ಜಿ ಹಾಕಿದ ದಿನಕ್ಕೆ ಯಾವುದೇ ಖರ್ಚು ವೆಚ್ಚ ಭರಿಸಿಲ್ಲವೆಂದು ಸುಳ್ಳು ಹೇಳಿದ್ದಾರೆ.


ಕರಾರಸಾಸ ಯಿಂದ ಪಡೆದ ಕಡತಗಳಲ್ಲಿ ದಿನಾಂಕ ೨೦/೦೨/೨೦೨೩ ರಂದು ಸಾರಿಗೆ ವೆಚ್ಚದ ೩.೯೪ ಕೋಟಿ ಸಂಬಂಧ ಅಂದರೆ ಇವರಿಗೆ ಅರ್ಜಿ ಸಲ್ಲಿಸುವ ಮುಂಚೆಯೇ ನಡೆಸಿದ ಹಲವಾರು ಪತ್ರ ವ್ಯವಹಾರಗಳು ಇವರು ಹಸಿ ಸುಳ್ಳು ಹೇಳಿರುವುದನ್ನು ಖಾತ್ರಿ ಮಾಡಿವೆ ಎಂದು ಹೇಳಿದರು.
ಈ ಹಿನ್ನಲೆಯಲ್ಲಿ ಸಂಪತ್‌ಕುಮಾರ್ ವಿರುದ್ದ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಕೊಟ್ಟಿದ್ದಾಗಿ ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ವೈ. ಪ್ರದೀಪ್, ಸಮೀರ್, ನಿರಂಜನ, ಕೆ. ರವಿ ಮತ್ತು ಡಿ. ರಾಜೇಂದ್ರ ಉಪಸ್ಥಿತರಿದ್ದರು.

Exit mobile version